Karwar :ಕಾರವಾರ ನಾಳೆ ಬಂದ್ ಇಲ್ಲ -ಎಸ್.ಪಿ ಎಂ ನಾರಾಯಣ್
Karwar :ಕಾರವಾರ ನಾಳೆ ಬಂದ್ ಇಲ್ಲ -ಎಸ್.ಪಿ ಎಂ ನಾರಾಯಣ್
ಕಾರವಾರ :-ಪಾಹಲ್ಗಾಮ್ ನಲ್ಲಿ ಉಗ್ರರು ದಾಳಿ ನಡೆಸಿ ಹಿಂದುಗಳಹತ್ಯೆ ಮಾಡಿದ ಹಿನ್ನಲೆಯಲ್ಲಿ ಕಾರವಾರದಲ್ಲಿ (karwar) ನಾಳೆ (ಮೇ.7)ಕರ್ನಾಟಕ ರಾಜ್ಯ ಸನಾತನ ಧರ್ಮ ರಕ್ಷಣಾ ವೇದಿಕೆ ಕಾರವಾರ ಬಂದ್ ಕರೆ ನೀಡಿತ್ತು.
ಇದನ್ನೂ ಓದಿ:-Karwar :ಕರಾವಳಿಯಲ್ಲಿ “OP TRIGGER ” ಆಪರೇಷನ್-ಕಡಲಿನಲ್ಲಿ ಕಟ್ಟೆಚ್ಚರ
ಈ ಕುರಿತು ಎಸ್.ಪಿ ಎಂ.ನಾರಾಯಣ್ ಕಾರವಾರದಲ್ಲಿ ಪತ್ರಿಕಾ ಗೋಷ್ಟಿ ನಡೆಸಿ ಸ್ಪಷ್ಟೀಕರಣ ನೀಡಿದ್ದು ,ಕಾರವಾರದಲ್ಲಿ ನಾಳೆ ಬಂದ್ ಇರುವುದಿಲ್ಲ . ಸಂಘಟನೆಗಳು ಬಂದ್ ಗೆ ಕರೆಕೊಟ್ಟಿದ್ದವು .ಸಂಘಟಕರ ಜೊತೆ ಮಾತನಾಡಲಾಗಿದ್ದು ಬಂದ್ ಮಾಡಿಸುವುದಿಲ್ಲ ಎಂದು ತಿಳಿಸಿದ್ದಾರೆ. ಹೀಗಾಗಿ ಮೆರವಣಿಗೆ ಮಾಡಲು ಮಾತ್ರ ಅವಕಾಶ ಕಲ್ಪಿಸಲಾಗಿದೆ.
ಒಂದುವೇಳೆ ಬಲವಂತವಾಗಿ ಬಂದ್ ಮಾಡಿಸಿದಲ್ಲಿ ಪ್ರಕರಣ ದಾಖಲಿಸಲಾಗುವುದು ಎಂದು ಹೇಳಿದ್ದಾರೆ.
ಇನ್ನು ಕಾರವಾರದಲ್ಲಿ ಹಿಂದೂ ಸಂಘಟನೆಗಳು ಮೇ.7 ಕ್ಕೆಬಂದ್ ಕರೆ ಕೊಟ್ಟಿದ್ದರು. ಸದ್ಯ ಸಂಘಟನೆಗಳು ಕೂಡ ಬಂದ್ ಮಾಡುವುದಿಲ್ಲ ಎಂದು ತಿಳಿಸಿದ್ದು ನಾಳೆ ಕೇವಲ ಮೆರವಣಿಗೆ ಇರಲಿದೆ.