Karnataka: ಒಂಬತ್ತು ವಿಶ್ವವಿದ್ಯಾಲಯವನ್ನು ಮುಚ್ಚಲು ಹೊರಟ ಕಾಂಗ್ರೆಸ್ ಸರ್ಕಾರ - ಎಂ.ಜಿ ಭಟ್ ಕಿಡಿ
Karnataka: ಒಂಬತ್ತು ವಿಶ್ವವಿದ್ಯಾಲಯವನ್ನು ಮುಚ್ಚಲು ಹೊರಟ ಕಾಂಗ್ರೆಸ್ ಸರ್ಕಾರ - ಎಂ.ಜಿ ಭಟ್ ಕಿಡಿ
ಕಾರವಾರ :-ರಾಜ್ಯದಲ್ಲಿ ಬಿಜೆಪಿ ಸರಕಾರವು ಆರಂಭಿಸಿದ್ದ ಹತ್ತು ವಿಶ್ವವಿದ್ಯಾಲಯಗಳ ಪೈಕಿ ಒಂಬತ್ತು ವಿವಿಗಳನ್ನು ಮುಚ್ಚಲು ರಾಜ್ಯ ಕಾಂಗ್ರೆಸ್ ಸರಕಾರವು ಮುಂದಾಗಿದ್ದು ಈ ಮೂಲಕ ವಿದ್ಯಾರ್ಥಿಗಳನ್ನು (student) ಶೈಕ್ಷಣಿಕವಾಗಿ ಕೊಲೆ ಮಾಡಲಾಗುತ್ತಿದೆ ಎಂದು ರಾಜ್ಯ ಬಿಜೆಪಿಯ ಶಿಕ್ಷಣ ಪ್ರಕೋಷ್ಠದ ಸಹ ಸಂಚಾಲಕ ಎಂ.ಜಿ ಭಟ್ ಹೇಳಿದರು.

ನಗರದ ಪತ್ರಿಕಾಭವನದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.ರಾಜ್ಯದ ಶಿಕ್ಷಣ ಕ್ಷೇತ್ರವು ದುಸ್ತರ ಸ್ಥಿತಿ ಇದೆ. ಬಿಜೆಪಿ ಸರಕಾರವು ಈ ಹಿಂದಿನ ಅವಧಿಯಲ್ಲಿ ಹತ್ತು ವಿಶ್ವ ವಿದ್ಯಾನಿಲಯಗಳನ್ನು ನೀಡಿದೆ. ಅದರಲ್ಲಿ ಒಂಬತ್ತು ವಿವಿಗಳನ್ನು ಮುಚ್ಚಲು ಈಗಿನ ಸರಕಾರ ಮುಂದಾಗಿದ್ದು, ಈ ಬಗ್ಗೆ ರಾಜ್ಯಪಾಲರನ್ನು ಭೇಟಿಯಾಗಿ ಮನವಿ ಮಾಡಿದ್ದೇವೆ.
ಇದನ್ನೂ ಓದಿ:-Kumta :ಕತಗಾಲ್ ನಲ್ಲಿ ಆಹಾರ ಸಿಗದೇ ನಿತ್ರಾಣಗೊಂಡ ಕರಿ ಚಿರತೆ ರಕ್ಷಣೆ
ಒಂಬತ್ತು ವಿವಿಗಳಿಂದ ಸರಕಾರಕ್ಕೆ 342ಕೋಟಿ ರೂ. ಹೊರೆ ಬೀಳಲಿದೆ ಎಂದು ಸರಕಾರವು ಹೇಳಿದೆ. ಆದರೆ ಈ ವಿವಿಗಳಲ್ಲಿ ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಗ್ರಾಮೀಣ ಭಾಗದಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲವಾಗಿತ್ತು. ಆದರೆ ಸರಕಾರವು ಈ ಅನುಕೂಲವನ್ನು ತಪ್ಪಿಸಿ ವಿದ್ಯಾರ್ಥಿಗಳನ್ನು ಶೈಕ್ಷಣಿಕವಾಗಿ ಕೊಲೆ ಮಾಡುತ್ತಿದೆ ಎಂದರು.
ಇದನ್ನೂ ಓದಿ:- Kumta | ಹಂದಿ ಕೊಂದು ಪಾರ್ಟಿ ಮಾಡಿದವರು ಕಂಬಿ ಹಿಂದೆ !
ಶಿಕ್ಷಣ ಕ್ಷೇತ್ರವು ವ್ಯಾಪಾರ ಅಲ್ಲ. 342ಕೋಟಿ ರೂ. ಹೊರೆ ಎನ್ನುವವರು ಸರಕಾರವೇ ಕಡ್ಡಾಯ ಶಿಕ್ಷಣ ಪಡೆಯಬೇಕು ಎನ್ನುತ್ತದೆ. ಹೀಗಾಗಿ ವಿವಿಗಳನ್ನು ಮುಚ್ಚುವ ಬದಲಾಗಿ ಉತ್ತಮ ಪ್ರಾಧ್ಯಾಪಕರನ್ನು ನೀಡುವ ಮೂಲಕ ವಿದ್ಯಾರ್ಥಿಗಳ ಪರವಾಗಿರಬೇಕು. ಜತೆಗೆ ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುವ ಮಟ್ಟದಲ್ಲಿ ಸರಕಾರಿ ಶಾಲೆಗಳನ್ನು ಉನ್ನತೀಕರಿಸಬೇಕು ಎಂದರು.
ಇದನ್ನೂ ಓದಿ:-KUMTA |ಧಾರೇಶ್ವರ ದೇವಸ್ಥಾನ ಕಳ್ಳತನ ಮಾಡಿ ಸಿಕ್ಕಿಬಿದ್ದ ಕೊಲೆ ಆರೋಪಿ.
ಜಿಲ್ಲೆಯಲ್ಲಿರುವ ಉನ್ನತ ಶಿಕ್ಷಣದ ಸಮಸ್ಯೆ ವಿವಿ ಬೇಡಿಕೆ ಹಾಗೂ ಶಿಕ್ಷಕರ ಕೊರತೆಯ ಬಗ್ಗೆ ಗಮನಕ್ಕೆ ಬಂದಿದೆ. ಈ ಕುರಿತು ಶಿಕ್ಷಣ ಸಚಿವರು ಹಾಗೂ ಮುಖ್ಯಮಂತ್ರಿ ಅವರೊಂದಿಗೆ ಕೂಲಂಕುಶವಾಗಿ ಚರ್ಚೆ ನಡೆಸಲಿದ್ದೇವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ನಿವೃತ್ತ ಪ್ರಾಧ್ಯಾಪಕ ನಾಗರಾಜ ನಾಯಕ ಮಾತನಾಡಿ, ವಿವಿಗಳು ಸರಿಯಾಗಿ ನಡೆಯುತ್ತಿಲ್ಲ ಎಂದು ಸರಕಾರ ಆರೋಪಿಸಿದೆ. ಆದರೆ ಸರಿಪಡಿಸುವ ಸರಕಾರವೇ ವಿವಿಗಳನ್ನು ಮುಚ್ಚುವುದು ಸರಿಯಲ್ಲ. ಬಿಜೆಪಿ ಸರಕಾರವು ವಿವಿಗಳನ್ನು ಮಾಡಿದೆ ಎನ್ನುವ ಕಾರಣಕ್ಕೆ ಅವುಗಳನ್ನು ಮುಚ್ಚಿ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡಬಾರದು. ಇದರಿಂದ ಗ್ರಾಮೀಣ ಹಾಗೂ ನಗರ ಭಾಗದಲ್ಲಿ ಸಮಾನ ಹಾಗೂ ಉನ್ನತ ಶಿಕ್ಷಣ ನೀಡಲು ಸಾಧ್ಯವಾಗುವುದಿಲ್ಲ ಎಂದರು.
ಇದನ್ನೂ ಓದಿ:-Karnataka: ಆರಿಹೋದ 46 ವರ್ಷದಿಂದ ಎಣ್ಣೆ ,ಬತ್ತಿ ಇಲ್ಲದೇ ಉರಿಯುತಿದ್ದ ದೀಪ ಕರ್ನಾಟಕ್ಕೆ ಸಂಕಷ್ಟ ಕಾದಿದೆಯಾ?
ಸರಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಇಲ್ಲದ ಕಾರಣ ಮಕ್ಕಳ ದಾಖಲಾತಿ ಸಂಖ್ಯೆ ಕುಸಿಯುತ್ತಿದೆ. ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ ೭೨ ಸಾವಿರ ಶಿಕ್ಷಕರ ಕೊರತೆ ಇದೆ. ಅಲ್ಲದೇ ಇರುವ ಶಿಕ್ಷಕರಿಗೆ ಕೆಲಸದ ಹೊರೆಯಾಗುತ್ತಿದೆ. ಈ ಕೊರತೆಯನ್ನು ಶೀಘ್ರವೇ ತುಂಬಿಸಿ ಸರಕಾರಿ ಶಾಲೆಗಳನ್ನು ಉಳಿಸಬೇಕು. ಜತೆಗೆ ಶಾಲೆಗಳ ಕಟ್ಟಡಗಳನ್ನು ಉತ್ತಮಗೊಳಿಸಬೇಕು ಎಂದರು.
ಪ್ರಕೋಷ್ಠದ ಶಿವಾನಂದ ಕದಂ, ಸುಮಾ ಎಲೆಗಾರ, ಅನಿಲ ಮಡಿವಾಳ, ನಾಗೇಶ ಕುರಡೇಕರ, ಕಿಶನ ಕಾಂಬಳೆ ಇದ್ದರು.