Mundgodu: ಹೋರಿ ಬೆದರಿಸಲು ಹೋದ ಯುವಕನಿಗೆ ತಿವಿತ -ಸಾವು
Mundgodu 03 November 2024 :- ಹೋರಿ ಬೆದರಿಸುವ ಸ್ಪರ್ಧೆ ನೋಡಲು ಹೋಗಿದ್ದ ಯುವಕನಿಗೆ ಹೋರಿ ತಿವಿದು ಸಾವು ಕಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಿನಲ್ಲಿ ಶನಿವಾರ ನಡೆದಿದೆ.
03:01 PM Nov 03, 2024 IST | ಶುಭಸಾಗರ್

Mundgodu 03 November 2024 :- ಹೋರಿ ಬೆದರಿಸುವ ಸ್ಪರ್ಧೆ ನೋಡಲು ಹೋಗಿದ್ದ ಯುವಕನಿಗೆ ಹೋರಿ ತಿವಿದು ಸಾವು ಕಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಿನಲ್ಲಿ ಶನಿವಾರ ನಡೆದಿದೆ.
Advertisement
ಇದನ್ನೂ ಓದಿ:-Mundgodu ವಿದ್ಯುತ್ ಅವಘಡ| 78 ಕುರಿಗಳು ಸಜೀವ ದಹನ.
ಚಿಗಳ್ಳಿಯ ಪರಮೇಶ್ ಸಿದ್ದಪ್ಪ ಹರಿಜನ್ ಹೋರಿ ತಿವಿತಕ್ಕೆ ಸಾವು ಕಂಡ ಯುವಕನಾಗಿದ್ದಾನೆ.
ಇದನ್ನೂ ಓದಿ :-Mundgodu ಪೊಲೀಸರ ಮುಂದೆ ರೌಡಿಗಳ ಹೊಡೆದಾಟ| ಪಿ.ಎಸ್.ಐ ವಿರುದ್ಧ ಕೇಳಿಬಂತು ಆರೋಪ
ಮುಂಡಗೋಡಿನ (mundgodu) ಚಿಗಳ್ಳಿಯ ಕಲ್ಮೇಶ್ವರ ಮಠದ ಬಳಿ ಹೋರಿ ಹಬ್ಬ ನೋಡಲು ಹೋಗಿದ್ದ ಯುವಕನಿಗೆ
ಹೋರಿಯೊಂದು ಏಕಾ ಏಕಿ ಯುವಕನ ಮೇಲೆ ದಾಳಿ ಮಾಡಿ ಬಲಭಾಗದ ಎದೆಗೆ ತಿವಿದಿತ್ತು.ತಕ್ಷಣ ಮುಂಡಗೋಡು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರೂ ತೀವ್ರ ರಕ್ತಸ್ರಾವದಿಂದ ಸಾವು ಕಂಡಿದ್ದಾನೆ.
ಘಟನೆ ಸಂಬಂಧ ಮುಂಡಗೋಡು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement