Karnataka: ಜನವಸತಿ ಪ್ರದೇಶಗಳತ್ತ ಆನೆಗಳ ಹಾವಳಿ ವಿಡಿಯೋ ನೋಡಿ.
Karnataka news 13 November 2024:- ಹಾಸನ(Hassan) ಮತ್ತು ಮಡಕೇರಿ ಭಾಗದಲ್ಲಿ ಆನೆಗಳು ಹೆಚ್ಚು ಓಡಾಡಿತಿದ್ದು ಆನೆಗಳ ಹಿಂಡು ಜನವಸತಿ ಪ್ರದೇಶಗಳಿಗೆ ನುಗ್ಗುತ್ತಿದೆ.
ಆನೆಗಳ ದಾಳಿ ವಿಡಿಯೋ ನೋಡಿ:-
ಕೊಡಗಿನ(kodagu) ಸೋಮವಾರ ಪೇಟೆ ತಾಲ್ಲೂಕಿನ ಭುವಂಗಾಲ ಗ್ರಾಮದ ರಸ್ತೆಯಲ್ಲಿ (road) ಮರಿಯಾನೆ ಸೇರಿ 11 ಆನೆಗಳು ಕಾಣಿಸಿಕೊಂಡಿದ್ದು ಕಣಕಾಲ ದಲ್ಲಿ ಕೆಲವು ಸಮಯ ವಾಹನ ಸಂಚಾರ ಬಂದ ಮಾಡಲಾಯಿತು.
ಇಲ್ಲಿನ ಕಾಫಿ ತೋಟಕ್ಕೆ ನುಗ್ಗಿ ದಾಂದಲೆಮಾಡಿ ಬೆಳದ ಬೆಳೆಗಳನ್ನು ನಾಶಮಾಡುತ್ತಿವೆ.
ಸ್ಥಳಕ್ಕೆ ಆರಣ್ಯ ಇಲಾಖೆ ಅಧಿಕಾರಿಗಳ ಭೇಟಿ ನೀಡಿ ಆನೆಗಳನ್ನು ಕಾಡಿಗೆ ಓಡಿಸಲು ಕಾರ್ಯಚರಣೆ ನಡೆಸುತಿದ್ದಾರೆ.
ಮಡಿಕೇರಿ ಜಿಲ್ಲೆಯಲ್ಲಿ ಒಂದು ಭಾಗದಲ್ಲಿ ಹುಲಿ ಕಾರ್ಯಚರಣೆ, ಇನೊಂದು ಭಾಗದಲ್ಲಿ ಕಾಡಾನೆಗಳ ಕಾರ್ಯಚರಣೆ ಯಿಂದಾಗಿ ಇಲ್ಲಿನ ಜನ ಜೀವಭಯದಲ್ಲಿ ಇರುವಂತೆ ಮಾಡಿದೆ.
ಇನ್ನು ಹಾಸನದ ಸಕಲೇಶ ಪುರ ಸೇರಿದಂತೆ ಹಲವು ಭಾಗದಲ್ಲಿ ಒಂಟಿ ಸಲಗ ಕಾಣಿಸಿಕೊಂಡು ಜನರಲ್ಲಿ ಭಯ ಬೀಳಿಸುತಿದ್ದು ಹೊಲಗದ್ದೆಗಳು ಒಂಟಿ ಸಲಗದ ಹಾವಳಿಗೆ ತುತ್ತಾಗಿವೆ.
ಇನ್ನು ಉತ್ತರ ಕನ್ನಡ ಜಿಲ್ಲೆಯ ಶಿರಸಿ (sirsi) ಸಿದ್ದಾಪುರ ಭಾಗದಲ್ಲೂ ಆನೆಗಳು ಕಾಣಿಸಿಕೊಳ್ಳುತಿದ್ದು ಹೊಲಗದ್ದೆಗಳು ನಾಶವಾಗಿವೆ.
ಇದನ್ನೂ ಓದಿ:-Siddapura : ಮಿತಿಮೀರಿದ ಆನೆ ಹಾವಳಿ ಗದ್ದೆ,ಮನೆಗಳ ಬಳಿ ಪುಂಡಾಟ.