ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Weather| ರಾಜ್ಯದ ಈ ಜಿಲ್ಲೆಗಳಲ್ಲಿ ಮಳೆ ಎಚ್ಚರಿಕೆ 

Karnataka Weather Alert: IMD has issued a yellow alert for over 20 districts on October 18. Heavy rain likely in Bengaluru, Mysuru, Kodagu, Shivamogga, Udupi, and Karavali regions. Fishermen advised not to venture into the sea due to rough weather conditions.
01:52 AM Oct 18, 2025 IST | ಶುಭಸಾಗರ್
Karnataka Weather Alert: IMD has issued a yellow alert for over 20 districts on October 18. Heavy rain likely in Bengaluru, Mysuru, Kodagu, Shivamogga, Udupi, and Karavali regions. Fishermen advised not to venture into the sea due to rough weather conditions.

Weather| ರಾಜ್ಯದ ಈ ಜಿಲ್ಲೆಗಳಲ್ಲಿ ಮಳೆ ಎಚ್ಚರಿಕೆ.

We can add 10% discount for Deepavali And for orders more than 2499 rs 15% discount ( for Deepavali)We also take birthday parties and family get together etc also

ಬೆಂಗಳೂರು(october 18) :- ರಾಜ್ಯದಲ್ಲಿ ಹವಾಮಾನ ಬದಲಾವಣೆಯಾಗಿದೆ. ಬಂಗಾಳಕೊಳ್ಳಿಯಲ್ಲಿ ವಾಯುಬಾರ ಕುಸಿತ ಹಿನ್ನಲೆಯಲ್ಲಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯಾಗುವ ಸೂಚನೆಯನ್ನು ಹವಾಮಾನ ಇಲಾಖೆ ( weather ) ನೀಡಿದೆ.

Advertisement

Karnataka| ಮುಖ್ಯಮಂತ್ರಿ ಬದಲಾವಣೆ- ಡಿಕೆ ಶಿವಕುಮಾರ್ ಶಾಕಿಂಗ್ ಹೇಳಿಕೆ !

ಹೌದು ಕಳೆದ ಎರಡು ದಿನದಿಂದ ರಾಜ್ಯದಲ್ಲಿ ಬಿಟ್ಟು ಬಿಡದೇ ಮಳೆ ಸುರಿಯುತ್ತಲೇ ಇದೆ. ಈಗಲೂ ಅಲ್ಲಲ್ಲಿ ಗುಡುಗು ಸಹಿತ ಮಳೆಯಾಗುತಿದ್ದು ಮಳೆ (rain) ಪೂರ್ಣ  ವಿರಾಮ ನೀಡುವಂತೆ ಕಾಣುತ್ತಿಲ್ಲ.

ಮನೆಯಿಂದ ಹೊರ ಹೋಗುವವರೇ ಎಚ್ಚರ!

ರಾಜ್ಯದ 20ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಅಕ್ಟೋಬರ್  18 ರಂದು ಭಾರೀ ಮಳೆಯಾಗಲಿದೆ ಎಂದು ಹವಮಾನ ಇಲಾಖೆ ಮುನ್ಸೂಚನೆ ನೀಡಿದ್ದು,ಯೆಲ್ಲೋ ಅಲರ್ಟ್ ಘೋಷಿಸಿದೆ. ನಾಳೆ ಬೆಂಗಳೂರು, ಕರಾವಳಿ & ಮಲೆನಾಡು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ ಎಂದು IMD ತಿಳಿಸಿದೆ. ಚಿಕ್ಕಬಳ್ಳಾಪುರ, ಮಂಡ್ಯ, ಮೈಸೂರು, ಬೆಂ.ನ, ಬೆಂ.ಗ್ರಾ, ರಾಮನಗರ, ಕೋಲಾರ, ಚಾಮರಾಜನಗರ, ಕೊಡಗು, ತುಮಕೂರು, ಹಾಸನ, ಚಿಕ್ಕಮಗಳೂರು, ಚಿತ್ರದುರ್ಗ, ಶಿವಮೊಗ್ಗ, ದ. ಕನ್ನಡ, ಉ. ಕನ್ನಡ, ಉಡುಪಿ ಜಿಲ್ಲೆಯಲ್ಲಿ ಭಾರೀ ಮಳೆಯಾಗಲಿದೆ ಎಂದು ತಿಳಿಸಿದೆ.

Advertisement

ಮಿಲನ್ ಎಂಟರ್ ಪ್ರೈಸಸ್ ನಲ್ಲಿ ದೀಪಾವಳಿ ಹಬ್ಬಕ್ಕೆ ವಿಶೇಷ ರಿಯಾಯಿತಿ ಮಾರಾಟ ,ಇಂದೇ ಭೇಟಿ ನೀಡಿ

ಎಲ್ಲೆಲ್ಲಿ ಯಾವ ಪ್ರಮಾಣ ಮಳೆ?

ದಕ್ಷಿಣ ಒಳನಾಡು ಪ್ರದೇಶದ ಜಿಲ್ಲೆಗಳಾದ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ಮಂಡ್ಯ, ಮೈಸೂರು, ಚಾಮರಾಜನಗರ, ಕೊಡಗು, ತುಮಕೂರು, ಹಾಸನ, ಚಿಕ್ಕಮಗಳೂರು, ಚಿತ್ರದುರ್ಗ ಮತ್ತು ಶಿವಮೊಗ್ಗದಲ್ಲಿ ಸಾಧಾರಣ ಮಳೆಯನ್ನು ನಿರೀಕ್ಷಿಸಲಾಗಿದೆ. ಕರಾವಳಿ ಪ್ರದೇಶದ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಉಡುಪಿಯಲ್ಲಿ ಗುಡುಗು ಸಹಿತ ಮಳೆ (rain)ಯಾಗಲಿದೆ.

ಅದರಲ್ಲೂ ಬೆಳ್ತಂಗಡಿ, ಪುತ್ತೂರು, ಸುಳ್ಯ, ಕುಂದಾಪುರ ಮತ್ತು ಕಾರ್ಕಳದಲ್ಲಿ ಮಳೆ ತುಸು ಹೆಚ್ಚಿರುವ ನಿರೀಕ್ಷೆ ಇದೆ. ಹವಾಮಾನ ವೈಪರೀತ್ಯದ ಕಾರಣ ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಸೂಚಿಸಲಾಗಿದೆ. ಉತ್ತರ ಒಳನಾಡು ಜಿಲ್ಲೆಗಳಾದ ಬೆಳಗಾವಿ, ಬೀದರ್, ವಿಜಯಪುರ, ಬಾಗಲಕೋಟೆ, ಹಾವೇರಿ, ಗದಗ, ಧಾರವಾಡ, ಕಲಬುರಗಿ, ಕೊಪ್ಪಳ, ಬಳ್ಳಾರಿ, ರಾಯಚೂರು, ಯಾದಗಿರಿ ಮತ್ತು ವಿಜಯನಗರದಲ್ಲಿ ಸಣ್ಣ ಪ್ರಮಾಣದ ಮಳೆ ಅಥವಾ ಮೋಡ ಕವಿದ ವಾತಾವರಣ ಇರಲಿದೆ.

ಮನೆಗೆ ಚಂದದ ಪೀಟೋಪಕರಣಕ್ಕಾಗಿ ಭೇಟಿ ನೀಡಿ.
Advertisement
Tags :
Bengaluru RainCoastal KarnatakaHeavy rainIMD AlertIndia Meteorological DepartmentKarnataka newsKarnataka weatherKodagu WeatherMalenadu WeatherRain forecastShivamogga rainSouth Interior KarnatakaUdupi RainWeather UpdateYellow alert
Advertisement
Next Article
Advertisement