For the best experience, open
https://m.kannadavani.news
on your mobile browser.
Advertisement

Weather forecast| ಹವಾಮಾನ ವರದಿ 04 october 2024

Weather forecast :- ಕರ್ನಾಟಕ ರಾಜ್ಯದ ಹಲವೆಡೆ ಮಳೆ (Rain) ಯಾಗುತಿದ್ದು ಇಂದು ಸಹ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
08:08 AM Oct 04, 2024 IST | ಶುಭಸಾಗರ್
weather forecast  ಹವಾಮಾನ ವರದಿ 04 october 2024
Weather forecast UTTARAKANNADA

Weather forecast :- ಕರ್ನಾಟಕ ರಾಜ್ಯದ ಹಲವೆಡೆ ಮಳೆ (Rain) ಯಾಗುತಿದ್ದು ಇಂದು ಸಹ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

Advertisement

ಕರಾವಳಿ ಜಿಲ್ಲೆಗಳಾದ ಉಡುಪಿ, ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಉಷ್ಣಾಂಶ ಏರಿಕೆಯಾಗುವ ಸಾಧ್ಯತೆಯಿದೆ .

ಇದಲ್ಲದೇ ಈ ಭಾಗದಲ್ಲಿ ಮೋಡ ಕವಿದ ವಾತಾವರಣ ಇರುವ ಸಾಧ್ಯತೆಯಿದೆ. ಉತ್ತರ ಒಳನಾಡಿದ ಕೆಲ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ.

ಇದನ್ನೂ ಓದಿ:-Astrology | ದಿನ ಭವಿಷ್ಯ 04 october 2024

ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು, ಇಂದು ಕೂಡ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಕರಾವಳಿ ಭಾಗದಲ್ಲಿ ಹೇಗಿರಲಿದೆ ಉಷ್ಟಾಂಶ?

ಕಾರವಾರ ದಲ್ಲಿ ಗರಿಷ್ಟ 30 ಡಿಗ್ರಿ ಕನಿಷ್ಟ 25 ಡಿಗ್ರಿ ಉಷ್ಟಾಂಶವಿದ್ದು ಮೋಡ ಕವಿದ ವಾತಾವರಣ ಇರುತ್ತದೆ. ಜಿಲ್ಲೆಯ ಕೆಲವು ಕಡೆ ಹನಿ ಮಳೆ ಬೀಳುವ ಸಾಧ್ಯತೆ ಇದೆ.

ಮಂಗಳೂರು: ಗರಿಷ್ಟ 30 ಕನಿಷ್ಟ 24 ಡಿಗ್ರಿ ಉಷ್ಣಾಂಶ ಇರಲಿದೆ.ಉಡುಪಿ ಗರಿಷ್ಟ 29 ರಿಂದ ಕನಿಷ್ಟ 24 ಡಿಗ್ರಿ ಇರಲಿದೆ.

ಶಿವಮೊಗ್ಗ ಜಿಲ್ಲೆಯ ಉಷ್ಟಾಂಶ ಹೇಗಿರಲಿದೆ?.

ಶಿವಮೊಗ್ಗ (shivamogga ) ಜಿಲ್ಲೆಯಲ್ಲಿ ಗರಿಷ್ಟ 29 ರಿಂದ ಕನಿಷ್ಟ 21 ಡಿಗ್ರಿ ಸೆಲ್ಸಿಯಸ್ ಇರಲಿದೆ.

ಸಾಗರ ತಾಲೂಕಿನಲ್ಲಿ ಗರಿಷ್ಟ 27 ಡಿಗ್ರಿ, ಕನಿಷ್ಠ 21 ಡಿಗ್ರಿ ಸೆಲ್ಸಿಯಸ್‌ ತಾಪಮಾನ ಇರಲಿದೆ. ಮಧ್ಯಾಹ್ನದ ಹೊತ್ತಿಗೆ ಮೋಡ ಕವಿದ ವಾತಾವರಣ, ನಂತರ ಅಲ್ಪ ಮಳೆಯಾಗಲಿದೆ.

ಇದನ್ನೂ ಓದಿ:-Big boos | ವಕೀಲ ಜಗದೀಶನ ಅಂಕಪಟ್ಟಿ ನಕಲಿ! ವಕೀಲಿಕೆ ಲೇಸೆನ್ಸ್ ರದ್ದು!

ಪ್ರಮುಖ ನಗರ ಉಷ್ಟಾಂಶ.

ಬೆಂಗಳೂರು: 28-20 ( ಮಳೆಯಾಗಲಿದೆ)
ಬೆಳಗಾವಿ: 29-20 ( ಸಂಜೆ ವೇಳೆಯಲ್ಲಿ ಮಳೆಯಾಗಲಿದೆ)
ಮೈಸೂರು: 31-21
ಕೋಲಾರ: 29-21
ತುಮಕೂರು: 29-21
ಚಿಕ್ಕಮಗಳೂರು: 27-19
ದಾವಣಗೆರೆ: 31-22

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ