ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Weather Report : ಶೀತ ಗಾಳಿ ರೆಡ್ ಅಲರ್ಟ ಘೋಷಣೆ ಎಲ್ಲಿ ಹೇಗಿರಲಿದೆ ವಾತಾವರಣ

Weather report :ರಾಜ್ಯದಲ್ಲಿ ಮುಂದಿನ ಮೂರು ದಿನ ತೀವ್ರ ಶೀತದ ಅಲೆಗಳು ಕಾಣಿಸಿಕೊಳ್ಳಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
10:32 AM Dec 19, 2024 IST | ಶುಭಸಾಗರ್

Weather Report : ಶೀತ ಗಾಳಿ ರೆಡ್ ಅಲರ್ಟ ಘೋಷಣೆ.

Advertisement

Weather report :ರಾಜ್ಯದಲ್ಲಿ ಮುಂದಿನ ಮೂರು ದಿನ ತೀವ್ರ ಶೀತದ ಅಲೆಗಳು( cold wave) ಕಾಣಿಸಿಕೊಳ್ಳಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಕಲಬುರಗಿ,ಬೀದರ್ ಹಾಗೂ ವಿಜಯಪುರದಲ್ಲಿ ತೀವ್ರ ಶೀತದ ಅಲೆಗಳು ಬೀಸಲಿದ್ದು, ರೆಡ್ ಅಲರ್ಟ್ ಘೋಷಿಸಲಾಗಿದೆ.

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮ ಡಿ.21ರಿಂದ ಮತ್ತೆ ಮಳೆಯಾಗುವ ಸಂಭವವಿದೆ. ಬೆಂಗಳೂರು ನಗರ, ಗ್ರಾಮಾಂತರ, ರಾಮನಗರ, ಮಂಡ್ಯ, ಮೈಸೂರು, ಚಾಮರಾಜನನಗರಕ, ಚಿಕ್ಕಬಳ್ಳಾಪುರ, ಉತ್ತರ ಕನ್ನಡ ,ಕೋಲಾರ, ತುಮಕೂರು, ಚಿತ್ರದುರ್ಗ ಹಾಸನ ಮತ್ತು ವಿಜಯನಗರದಲ್ಲಿ ಡಿ.21 ರಿಂದ ಡಿ.23ರವರೆಗೆ ಮಳೆಯಾಗುವ ಸಂಭವವಿದೆ.

Advertisement

ಇದನ್ನೂ ಓದಿ:-Sigandur ಸೇತುವೆ ಬಹುತೇಕ ಪೂರ್ಣ ಯಾವಾಗ ಉದ್ಘಾಟನೆ ಗೊತ್ತಾ?

ಮಲೆನಾಡಿನಲ್ಲಿ ಹೆಚ್ಚಳವಾಗಲಿದೆ ಚಳಿ

ಇನ್ನು ಶಿವಮೊಗ್ಗ , ಜಿಕ್ಕಮಗಳೂರು,ಮಡಿಕೇರಿ , ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ,ಶಿರಸಿ ಭಾಗದಲ್ಲಿ ಚಳಿ ಹೆಚ್ಚಾಗಲಿದ್ದು 25 ತಿಂದ 12 ಡಿಗ್ರಿ ವರೆಗೂ ತಾಪಮಾನ ಇಳಿಯುವ ಸಾಧ್ಯತೆಗಳಿವೆ.

ಬೀದರ್ ನಲ್ಲಿ ರೆಡ್ ಅಲರ್ಟ !

ಮುಂದಿನ ಮೂರು ದಿನಗಳ ಕಾಲ ಭಾರೀ ಶೀತಗಾಳಿ (Cold Wave) ಬೀಸುವ ಹಿನ್ನೆಲೆ ಹವಾಮಾನ ಇಲಾಖೆ (IMD) ಹಾಗೂ ಜಿಲ್ಲಾಡಳಿತ ಬೀದರ್ (Bidar) ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಿದೆ.

ಹವಾಮಾನ ಇಲಾಖೆ ಮಾಹಿತಿಯಂತೆ 10 ರಿಂದ 12 ಡಿಗ್ರಿ ಇದ್ದ ತಾಪಮಾನ ಏಕಾಏಕಿ 7 ಡಿಗ್ರಿಗೆ ಇಳಿಕೆಯಾಗಿದ್ದು, ಮುಂದಿನ ಮೂರು ದಿನಗಳಲ್ಲಿ ಕನಿಷ್ಟ 5 ರಿಂದ 6 ಡಿಗ್ರಿಗೆ ಇಳಿಕೆಯಾಗುವ ಎಚ್ಚರಿಕೆ ನೀಡಿದೆ.

ಬೀದರ್ ಜಿಲ್ಲೆಯಲ್ಲಿ ಗರಿಷ್ಠ ತಾಪಮಾನ 28 ಡಿಗ್ರಿ ದಾಖಲಾಗಿದ್ದು, ಕನಿಷ್ಠ ತಾಪಮಾನ 7 ಡಿಗ್ರಿ ಸೆಲ್ಸಿಯಸ್‌ಗೆ ಇಳಿಕೆಯಾಗಿದೆ

ಇಂದಿನ ಜಿಲ್ಲಾವಾರು ತಾಪಮಾನ ಎಷ್ಟಿದೆ?

ಬೆಂಗಳೂರು: 27-20,ಮಂಗಳೂರು: 29-23
ಶಿವಮೊಗ್ಗ: 29-17,ಬೆಳಗಾವಿ: 28-17
ಮೈಸೂರು: 29-19,ಮಂಡ್ಯ: 28-19
ಮಡಿಕೇರಿ: 29-18,ರಾಮನಗರ: 28-21
ಹಾಸನ: 27-17,ಚಾಮರಾಜನಗರ: 29-19
ಚಿಕ್ಕಬಳ್ಳಾಪುರ: 26-19, ಕೋಲಾರ: 26-20
ತುಮಕೂರು: 27-19,ಉಡುಪಿ: 29-23
ಕಾರವಾರ: 30-21,ಚಿಕ್ಕಮಗಳೂರು: 26-16
ದಾವಣಗೆರೆ: 29-18,ಹುಬ್ಬಳ್ಳಿ: 29-18
ಚಿತ್ರದುರ್ಗ: 28-19,ಹಾವೇರಿ: 29-18
ಬಳ್ಳಾರಿ: 31-21,ಗದಗ: 29-18
ಕೊಪ್ಪಳ: 30-19,ರಾಯಚೂರು: 31-22
ಯಾದಗಿರಿ: 31-20,ವಿಜಯಪುರ: 31-18
ಬೀದರ್: 29-18,ಕಲಬುರಗಿ: 31-19
ಬಾಗಲಕೋಟೆ: 31-19

Advertisement
Tags :
BengaluruWeatherBidarAlert TemperatureDropColdWaveIMD KarnatakaWeatherMalenaduColdNorthKarnatakaWeatherRainForecast BengalColdWaveRedAlertWeatherUpdate
Advertisement
Next Article
Advertisement