Bhatkal Cow Theft: ಭಟ್ಕಳದ ಶ್ರೀ ಚನ್ನಪಟ್ಟಣ ಹನುಮಂತ ದೇವಸ್ಥಾನ ಆವರಣದಿಂದ ಮಲಗಿದ್ದ ಹಸುವನ್ನು ಗೋ ಕಳ್ಳರು ಟಾಟಾ ಪಂಚ್ ಕಾರಿನಲ್ಲಿ ಕದ್ದೊಯ್ದ ಘಟನೆ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಸ್ಥಳೀಯರು ಪೊಲೀಸರಿಂದ ಕ್ರಮಕ್ಕೆ ಆಗ್ರಹಿಸಿದ್ದಾರೆ
Bhatkal| ಐಷಾರಾಮಿ ಕಾರಿನಲ್ಲಿ ಬಂದು ದೇವಸ್ಥಾನದ ಮುಂದೆಯೇ ಗೋ ಕಳ್ಳತನ | ವಿಡಿಯೋ ನೋಡಿ
Advertisement
ಪ್ರಕೃತಿ ಮೆಡಿಕಲ್ ,ಕಾರವಾರ.
Bhatkal news :- ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ (bhatkal)ಅರಣ್ಯದಲ್ಲಿ ನೂರಾರು ಗೋವುಗಳ ಅಸ್ತಿಪಂಜರಗಳು ದೊರಕಿದ ಪ್ರಕರಣ ಮಾಸುವ ಮುಂಚೆಯೇ ಮತ್ತೆ ಗೋ ಕಳ್ಳರ ಉಪಟಳ ಹೆಚ್ಚಾಗಿದೆ .
ಇಂದು ಮುಂಜಾನೆ ಭಟ್ಕಳ(bhatkal) ನಗರದ ಶ್ರೀ ಚನ್ನಪಟ್ಟಣ ಹನುಮಂತ ದೇವಸ್ಥಾನದ ಆವರಣದ ಭಾಗದಲ್ಲಿ ಮಲಗಿದ್ದ ಹಸು ವನ್ನು ಗೋ ಕಳ್ಳರು ಕದ್ದೊಯ್ದ ಘಟನೆ ನಡೆದಿದ್ದು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಮುಂಜಾನೆ ದೇವಸ್ಥಾನದ ಆವರಣಕ್ಕೆ ಬಂದ ಗೋ ಕಳ್ಳರು ಮಲಗಿದ್ದ ಹಸುವನ್ನು ಹಿಡಿದು ಟಾಟ ಪಂಚ್ ಕಾರಿನ ಡಿಕ್ಕಿಯಲ್ಲಿ ಹಸುವನ್ನು ತುಂಬಿ ಎಳೆದೊಯ್ದಿದ್ದಾರೆ. ಘಟನೆ ಸಂಬಂಧ ಭಟ್ಕಳ ಶಹರ ಠಾಣೆಗೆ ಮಾಹಿತಿ ನೀಡಲಾಗಿದ್ದು ಗೋ ಕಳ್ಳರನ್ನು ಹಿಡಿಯುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.