Karwar | ಜಿಲ್ಲಾ ಆಸ್ಪತ್ರೆಯಲ್ಲಿ ಚಿನ್ನಾಭರಣ ಕಳ್ಳತನ |ಸಿಸಿ ಕ್ಯಾಮರಾ ಕೊಟ್ಟ ಸುಳಿವಿನಲ್ಲಿ ಆರೋಪಿ ಅಂದರ್
Karwar | ಜಿಲ್ಲಾ ಆಸ್ಪತ್ರೆಯಲ್ಲಿ ಚಿನ್ನಾಭರಣ ಕಳ್ಳತನ |ಸಿಸಿ ಕ್ಯಾಮರಾ ಕೊಟ್ಟ ಸುಳಿವಿನಲ್ಲಿ ಆರೋಪಿ ಅಂದರ್.
Karwar :- ಗುರುವಾರ ರಂದು ಕಾರವಾರ ನಗರದ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ಹಾಡುಹಗಲೇ ಬೈಕ ಮೇಲಿದ್ದ ಲಕ್ಷಾಂತರ ಬೆಲೆಬಾಳುವ ಬಂಗಾರದ ಆಭರಣಗಳನ್ನು
ಕದ್ದೊಯ್ದ ಪ್ರಕರಣವನ್ನು ಕಾರವಾರ ಶಹರ ಠಾಣೆ ಪೊಲೀಸರು ಭೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
Karwar |ಜೈಲಿನ ಮೇಲೆ ಪೊಲೀಸರ ದಾಳಿ | ಮೊಬೈಲ್ ಸೇರಿದಂತೆ ಹಲವು ವಸ್ತುಗಳು ವಶಕ್ಕೆ
ಕಾರವಾರದ ಡಿ.ವೈ.ಎಸ್.ಪಿ ಎಸ್.ವಿ.ಗಿರೀಶ ರವರ ಮಾರ್ಗದರ್ಶನದಲ್ಲಿ ಕಾರವಾರ ಶಹರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷರಾದ ಜಯಶ್ರೀ ಎಸ್ ಎಮ್ ಇವರು ಆರೋಪಿ ಹಾಗೂ ಕಳುವಾದ ಮಾಲನ್ನು ಪತ್ತೆ ಮಾಡಲು ತಂಡವನ್ನು ರಚಿಸಿದ್ದು, ತಂಡದಲ್ಲಿ ಪಿಎಸ್‌ಐ ಬಾಬು ಅಗೇರ ಹಾಗೂ PSI ಸುಧಾ ಅಘನಾಶಿನಿ ಇವರು ತನಿಖಾ ತಂಡದ ಜೋತೆಗೆ ಪ್ರಕರಣ ಕುರಿತು ಎಲ್ಲಾ ಆಯಾಮಗಳಲ್ಲಿ ಆರೋಪಿತನ ಬಗ್ಗೆ ಕುರುಹು ಗಳನ್ನು ಸಂಗ್ರಹಿಸಿ ಪ್ರಕರಣದ ಘಟನಾ ಸ್ಥಳದಲ್ಲಿ ಅಳವಡಿಸಿರುವ ಎಲ್ಲಾ ಸಿಸಿ ಕ್ಯಾಮರಾದ ದ್ರಶ್ಯಾವಳಿಗಳನ್ನು ಪರಿಶಿಲಿಸಿದ್ದರು.
ಕೊನೆಗೆ ಒಬ್ಬ ಸಂಶಯಾಸ್ಪದ ವ್ಯಕ್ತಿ ಬಗ್ಗೆ ಮಾಹಿತಿ ಕಲೆಹಾಕಿದ್ದು, ಪ್ರಕರಣ ದಾಖಲಾದ ಕೆವಲ 24 ಗಂಟೆಯೊಳಗೆ ಆರೋಪಿಯನ್ನು ಪತ್ತೆ ಮಾಡಿ ಆತನನ್ನು ವಶಕ್ಕೆ ಪಡೆದಿದ್ದಾರೆ.
ಸದಾಶಿವಗಡ ಭಾಗದ ಚಿತ್ತಾಕುಲದ ರಪೀಕ್ ಖಾನ್ (62 ) ಎಂಬಾತನನ್ನು ಬಂಧಿಸಿದ್ದು , ಕೃತ್ಯಕ್ಕೆ ಉಪಯೋಗಿಸಿದ ಸ್ಕೂಟರ್ ಮತ್ತು ಕಳುವಾದ ಅಂದಾಜು 60ಗ್ರಾಂ ಬಂಗಾರದ ಆಭರಣ ,ಮೌಲ್ಯ 4,85,000/-ರೂ ಗಳನ್ನು ವಶಕ್ಕೆ ಪಡೆಯಲಾಗಿದೆ.
Karwar| ಅಗ್ನಿ ಅವಘಡ ಕ್ಷಣಾರ್ಧದಲ್ಲಿ ಲಕ್ಷಾಂತರ ವಸ್ತುಗಳು ಬೆಂಕಿಗಾಹುತಿ.
ಆರೋಪಿತನನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು,ನ್ಯಾಯಾಂಗ ಬಂಧನ ವಿದಿಸಲಾಗಿದೆ.
ಕಾರ್ಯಾಚರಣೆಯಲ್ಲಿ ಜಯಶ್ರೀ ಮಾನೆ ಪೊಲೀಸ್ ನಿರೀಕ್ಷಕರು, ತನಿಖಾ-1 ಪಿಎಸ್‌ಐ ಬಾಬು ಅಗೇರ ಹಾಗೂ ಶ್ರೀಮತಿ ಸುಧಾ ಅಘನಾಶಿನಿ ಪಿಎಸ್‌ಐ ತನಿಖೆ-3 ಮತ್ತು ಸಿಬ್ಬಂದಿಯವರಾದ ಸುಧಾ ನಾಯ್ಕ,ರುದ್ರೇಶ ಮೈತ್ರಾಣಿ, ಶಿವರಾಮ್ ದೇಸಾಯಿ, ಮಹ್ಮದ ಇಸ್ಮಾಯಿಲ್ ಕೋಣನಕೇರಿ, ಸಚೀನ ನಾಯ್ಕ, ಅರ್ಜುನ ದೇಸಾಯಿ, ಪ್ರತಾಪಕುಮಾರ್ ಎಮ್, ನಾಗೇಂದ್ರ ನಾಯ್ಕ, ಮತ್ತು ಗಣೇಶ ನಾಯ್ಕ, ಮಾದೇವ ಸಂಗಾಪೂರ, ಪ್ರಕಾಶ ದಂಡಪ್ಪನವರ ರವರು ಭಾಗವಹಿಸಿದ್ದರು.