Karwar |ಮನೆ ಕಳ್ಳತನಕ್ಕೆ ಬಂದ ಕಳ್ಳರನ್ನ ನೋಡಿ ಬೊಗಳಿದ ಶ್ವಾನ- ಕಳ್ಳರನ್ನು ಹಿಡಿದ ಗ್ರಾಮದ ಜನ
Karwar |ಮನೆ ಕಳ್ಳತನಕ್ಕೆ ಬಂದ ಕಳ್ಳರನ್ನ ನೋಡಿ ಬೊಗಳಿದ ಶ್ವಾನ- ಕಳ್ಳರನ್ನು ಹಿಡಿದ ಗ್ರಾಮದ ಜನ
ಕಾರವಾರ :- ಮನೆ ದರೋಡೆ ಬಂದ ಕಳ್ಳನನ್ನು ಜಮರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ(karwar) ನಗರದ ಜಾಂಬ ರೈಲ್ವೆ ಟ್ರಾಕ್ ಬಳಿ ನಡೆದಿದೆ.
ರಾತ್ರಿ ವೇಳೆ ಮೂವರು ಮನೆಯಲ್ಲಿ ಯಾರೂ ಇಲ್ಲದನ್ನು ನೋಡಿ ಕನ್ನ ಹಾಕಲು ಬಂದಿದ್ದು ಈವೇಳೆ ಮನೆಯಲ್ಲಿದ್ದ ನಾಯಿ (Dog)ಬೊಗಳಿದೆ. ಹೆಚ್ಚು ಬೊಗಳುತಿದ್ದುದನ್ನು ಗಮನಿಸಿದ ಅಕ್ಕ ಪಕ್ಕದ ಜನ ನೋಡಲು ಒಂದಿದ್ದು ,ಕಳ್ಳರು ಕನ್ನ ಹಾಕುವುದು ಕಂಡಿದ್ದು ತಕ್ಷಣ ಹಿಡಿಯಲು ಹೋದಾಗ ಇಬ್ಬರು ಪರಾರಿಯಾಗಿದ್ದಾರೆ.
ಇನ್ನೊಬ್ಬನನ್ನು ಹಿಡಿದು ಕಟ್ಟಿಹಾಕಿ ಕಾರವಾರ ಗ್ರಾಮೀಣ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದು ,ಸ್ಥಳಕ್ಕಾಗಮಿಸಿ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ. ಪ್ರಾಥಮಿಕ ಮಾಹಿತಿ ಪ್ರಕಾರ ಹೊರರಾಜ್ಯದವರು ಎಂದು ತಿಳಿದುಬಂದಿದ್ದು ,ಇವರ ದೊಡ್ಡ ತಂಡವಿದ್ದು ,ರಾತ್ರಿವೇಳೆ ಮನೆಕಳ್ಳತನ ,ದರೋಡೆ ಮಾಡುವ ಗುಂಪಾಗಿದ್ದು ಗ್ರಾಮೀಣ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.