For the best experience, open
https://m.kannadavani.news
on your mobile browser.
Advertisement

Karwar|ಫಾರೆಕ್ಸ್ ಟ್ರೇಡಿಂಗ್ ಹೆಸರಿನಲ್ಲಿ ₹46.5 ಲಕ್ಷ ವಂಚನೆ: ನಾಲ್ವರು ಆರೋಪಿಗಳ ಬಂಧನ

Forex trading investment scam has resulted in a loss of ₹46.5 lakh for a resident of Honnavar. Acting swiftly on the complaint, Karwar Cyber Crime Police arrested four accused from Bengaluru and Hyderabad linked to the fake ‘M.MarketAxess’ trading app. The scammers opened bank accounts in others' names and lured victims with high profit promises. Full details of the cyber fraud and police investigation here.
11:45 AM Nov 25, 2025 IST | ಶುಭಸಾಗರ್
Forex trading investment scam has resulted in a loss of ₹46.5 lakh for a resident of Honnavar. Acting swiftly on the complaint, Karwar Cyber Crime Police arrested four accused from Bengaluru and Hyderabad linked to the fake ‘M.MarketAxess’ trading app. The scammers opened bank accounts in others' names and lured victims with high profit promises. Full details of the cyber fraud and police investigation here.
karwar ಫಾರೆಕ್ಸ್ ಟ್ರೇಡಿಂಗ್ ಹೆಸರಿನಲ್ಲಿ ₹46 5 ಲಕ್ಷ ವಂಚನೆ  ನಾಲ್ವರು ಆರೋಪಿಗಳ ಬಂಧನ

Karwar|ಫಾರೆಕ್ಸ್ ಟ್ರೇಡಿಂಗ್ ಹೆಸರಿನಲ್ಲಿ ₹46.5 ಲಕ್ಷ ವಂಚನೆ: ನಾಲ್ವರು ಆರೋಪಿಗಳ ಬಂಧನ.

Advertisement

ಕಾರವಾರ: ಆನ್‌ಲೈನ್ ಫಾರೆಕ್ಸ್ ಟ್ರೇಡಿಂಗ್ ಮೂಲಕ ಅಧಿಕ ಲಾಭದ ಆಮಿಷವೊಡ್ಡಿ ಹೊನ್ನಾವರ ಮೂಲದ ವ್ಯಕ್ತಿಯೊಬ್ಬರಿಗೆ ಬರೋಬ್ಬರಿ ₹46.5 ಲಕ್ಷ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ,ಉತ್ತರ ಕನ್ನಡ ಜಿಲ್ಲೆಯ ಕಾರವಾರದ (karwar)ಸೈಬರ್ ಅಪರಾಧ ಠಾಣೆಯ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Honnavar|KSRTC ಬಸ್ ಗೆ ಡಿಕ್ಕಿಯಾದ ಕಾರು| 11 ಕ್ಕೂ ಹೆಚ್ಚು ಜನರಿಗೆ ಗಾಯ ಓರ್ವ ಸಾವು

ಹೊನ್ನಾವರದ ಪ್ರಭಾತನಗರದ ಓಸೀಮ್  ಎಂಬುವವರು ಫಾರೆಕ್ಸ್ ಟ್ರೇಡಿಂಗ್‌ ವಂಚನೆಗೊಳಗಾಗಿದ್ದರು.

 ಇವರು ಸಾಮಾಜಿಕ ಜಾಲತಾಣದಲ್ಲಿ ಬಂದ ಫಾರೆಕ್ಸ್ ಟ್ರೇಡಿಂಗ್‌ಗೆ ಸಂಬಂಧಿಸಿದ ಜಾಹೀರಾತಿನ ಲಿಂಕ್ ಒಂದನ್ನು ಕ್ಲಿಕ್ ಮಾಡಿದ್ದರು. ನಂತರ ಆರೋಪಿಗಳ ಸೂಚನೆಯಂತೆ 'M.MarketAxess' ಎಂಬ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಂಡಿದ್ದರು.

Karwar| ಅಬಕಾರಿ ದಾಳಿ ಆರು ಲಕ್ಷ ಮೌಲ್ಯದ ಮದ್ಯ ವಶ

ಆರಂಭದಲ್ಲಿ ಹೂಡಿಕೆ ಮಾಡಿದ ಹಣಕ್ಕೆ ಹೆಚ್ಚಿನ ಲಾಭ ಬರುತ್ತಿರುವಂತೆ ಆ್ಯಪ್‌ನಲ್ಲಿ ತೋರಿಸಲಾಗಿತ್ತು. ಇದನ್ನು ನಂಬಿದ ಓಸೀಮ್ ಅವರು ಹಂತ ಹಂತವಾಗಿ ವಿವಿಧ ಬ್ಯಾಂಕ್ ಖಾತೆಗಳಿಗೆ ಒಟ್ಟು ₹46,50,000 ಹಣವನ್ನು ವರ್ಗಾಯಿಸಿದ್ದರು. ಆ್ಯಪ್‌ನಲ್ಲಿ ₹75 ಲಕ್ಷ ಲಾಭ ಬಂದಂತೆ ತೋರಿಸಲಾಗಿತ್ತಾದರೂ, ಹಣವನ್ನು ವಿತ್‌ಡ್ರಾ ಮಾಡಲು ಅವಕಾಶ ನೀಡದೇ ಸತಾಯಿಸಿದಾಗ ತಾನು ಮೋಸ ಹೋಗಿರುವುದು ಅರಿವಿಗೆ ಬಂದಿದೆ. ಕೂಡಲೇ ಅವರು ಕಾರವಾರ ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್ ಹಾಗೂ ಹೆಚ್ಚುವರಿ ಎಸ್ಪಿ ಜಗದೀಶ ಎಂ ಅವರ ಮಾರ್ಗದರ್ಶನದಲ್ಲಿ, ಡಿವೈಎಸ್ಪಿ ಬಿ. ಅಶ್ವಿನಿ ನೇತೃತ್ವದ ತಂಡ ತನಿಖೆ ಕೈಗೊಂಡಿತು.

ತನಿಖೆಯ ಭಾಗವಾಗಿ ಕಾರ್ಯಾಚರಣೆಗಿಳಿದ ಪೊಲೀಸರು, ಪ್ರಮುಖ ಆರೋಪಿಗಳಾದ ಬಿಹಾರದ ಈಸ್ಟ್ ಚಂಪಾರಣ ಮೂಲದ ಷಾ ಅಲಮ್ (23) ಮತ್ತು ಸಮೀಮ್ ಆಖ್ತರ್ ಅವರನ್ನು ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆದ್ದಾರೆ.

ನಂತರ ಹೈದರಾಬಾದ್‌ಗೆ ತೆರಳಿದ ಪಿಎಸೈ ಮಯೂರ ಪಟ್ಟಣಶೆಟ್ಟಿ ನೇತೃತ್ವದ ಮತ್ತೊಂದು ತಂಡ, ವಾರಂಗಲ್ ಮೂಲದ ಪಿಣ್ಣೆ ಶ್ರವಣಕುಮಾರ (35) ಮತ್ತು ಮಲಕಾಜಗಿರಿಯ ವಿನಯ ಕುಮಾರ್ (35) ಎಂಬುವವರನ್ನು ಬಂಧಿಸಿದೆ.

ಬಂಧಿತರ ಪೈಕಿ ಶ್ರವಣಕುಮಾರ ಹೈದರಾಬಾದ್‌ನ ಆರ್‌ಬಿಎಲ್ (RBL) ಬ್ಯಾಂಕ್‌ನ ಸಾರ್ವಜನಿಕ ಸಂಪರ್ಕ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಆರೋಪಿಗಳು ಅನ್ಯರ ಹೆಸರಿನಲ್ಲಿ ನಕಲಿ ಬ್ಯಾಂಕ್ ಖಾತೆಗಳನ್ನು ತೆರೆದು, ಸೈಬರ್ ವಂಚನೆಗೆ ಬಳಸಿಕೊಳ್ಳುತ್ತಿದ್ದರು ಎಂಬ ಆಘಾತಕಾರಿ ವಿಷಯ ತನಿಖೆಯಲ್ಲಿ ಬಹಿರಂಗವಾಗಿದೆ.

Karwar | ಜಿಲ್ಲಾ ಆಸ್ಪತ್ರೆಯಲ್ಲಿ ಚಿನ್ನಾಭರಣ ಕಳ್ಳತನ |ಸಿಸಿ ಕ್ಯಾಮರಾ ಕೊಟ್ಟ ಸುಳಿವಿನಲ್ಲಿ ಆರೋಪಿ ಅಂದರ್

ಬಂಧಿತ ನಾಲ್ವರು ಆರೋಪಿಗಳನ್ನು ಕಾರವಾರಕ್ಕೆ ಕರೆತಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ