Karwar|ಉಚಿತ ತಪಾಸಣೆ ನೆಪದಲ್ಲಿ ದಂಪತಿವಳಿಗೆ 40 ಸಾವಿರ ವಂಚನೆ
Karwar|ಉಚಿತ ತಪಾಸಣೆ ನೆಪದಲ್ಲಿ ದಂಪತಿವಳಿಗೆ 40 ಸಾವಿರ ವಂಚನೆ!
ಕಾರವಾರ (october 10):- ಹೆಲ್ತ್‌ಕೇರ್ ಉಚಿತ ತಪಾಸಣೆಯ ನೆಪದಲ್ಲಿ ಮನೆಗೆ ನುಗ್ಗಿದ ಇಬ್ಬರು ಅಪರಿಚಿತ ವ್ಯಕ್ತಿಗಳು, ಮಕ್ಕಳಿಲ್ಲದ ದಂಪತಿಗೆ ದುಬಾರಿ ಔಷಧಿ ನೀಡುವುದಾಗಿ ನಂಬಿಸಿ ಒಟ್ಟು ₹40,000 ನಗದು ಹಣ ವಂಚಿಸಿರುವ ಘಟನೆ ಕಾರವಾರ (karwar)ತಾಲೂಕಿನ ಸದಾಶಿವಗಡ ದೇಸಾಯಿವಾಡಾ ದಲ್ಲಿ ನಡೆದಿದೆ.
Karwar |ಮದ್ಯದ ಅಮಲಿನಲ್ಲಿ ಬೆತ್ತಲಾದ ಬಾಲಕನ ರಕ್ಷಣೆ| ವಿವಸ್ತ್ರ ಗೊಳಿಸಿ ಥಳಿಸಿದ ಆರೋಪ
ಅಕ್ಟೋಬರ್ 9, 2025 ರಂದು ಬೆಳಗ್ಗೆ 8 ರಿಂದ 9:15 ರ ಅವಧಿಯಲ್ಲಿ, ಇಬ್ಬರು ಆರೋಪಿಗಳು ತಾವು 'ಹೆಲ್ತ್ ಕೇರ್' ಸಿಬ್ಬಂದಿ ಎಂದು ಪರಿಚಯಿಸಿಕೊಂಡು ಮನೆ ಮನೆಗೆ ಉಚಿತ ಆರೋಗ್ಯ ತಪಾಸಣೆಗೆ ಬಂದಿರುವುದಾಗಿ ತಿಳಿಸಿದ್ದಾರೆ. ಈ ಮೂಲಕ ಮನೆಯವರ ವಿಳಾಸವನ್ನು ಖಚಿತಪಡಿಸಿಕೊಂಡು, ಸದಾಶಿವಗಡ ದೇಸಾಯಿವಾಡಾದಲ್ಲಿರುವ ಅವರ ಮನೆಗೆ ಆಗಮಿಸಿದ್ದಾರೆ.
ಮಕ್ಕಳಾಗದ ಸಮಸ್ಯೆಯ ಬಗ್ಗೆ ಮಾತನಾಡಿದ ಆರೋಪಿಗಳು, ಅದಕ್ಕೆ ಸಂಬಂಧಿಸಿದ 'ಮೆಡಿಕೇಶನ್' ಬರೆದುಕೊಡುವುದಾಗಿ ಹೇಳಿದ್ದಾರೆ. ಈ ಔಷಧಿಗಳು ತುಂಬಾ ದುಬಾರಿಯಾಗಿದ್ದು, ಈಗ ಖರ್ಚು ಮಾಡಿದ ಹಣ ನಂತರದಲ್ಲಿ ಸಂಪೂರ್ಣವಾಗಿ 'ರಿಫಂಡ್' ಆಗುತ್ತದೆ ಎಂದು ಆ ದಂಪತಿಗಳನ್ನು ನಂಬಿಸಿದ್ದಾರೆ.
Karwar| ಕ್ರಿಮ್ಸ್ ವೈದ್ಯಕೀಯ ಕಾಲೇಜು ಹಾಸ್ಟಲ್ ನಲ್ಲಿ ಅತ್ಯಾಚಾರ -ಆರೋಪಿ ಬಂಧನ
ಅವರ ಮಾತನ್ನು ನಂಬಿದ ದಂಪತಿ, ಆರೋಪಿಗಳಿಗೆ ನಗದು ₹40,000 ನೀಡಿದ್ದಾರೆ. ಹಣ ಪಡೆದ ನಂತರ ವಂಚಕರು ಯಾವುದೋ ಗುಳಿಗೆ ಮತ್ತು ದ್ರವದ ಮಿಶ್ರಣವನ್ನು ದಂಪತಿಗೆ ನೀಡಿ, ಅಲ್ಲಿಂದ ಪರಾರಿಯಾಗಿದ್ದಾರೆ. ತಮ್ಮನ್ನು ವಂಚಿಸಲಾಗಿದೆ ಎಂದು ಅರಿತು, ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಕೋರಿ ಚಿತ್ತಾಕುಲ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದು, ಆರೋಪಿಗಳ ಪತ್ತೆಗಾಗಿ ಶೋಧ ನಡೆಸುತ್ತಿದ್ದಾರೆ.