Karwar ಆಯುಷ್ ವೈದ್ಯನ ಕೆನ್ನೆಗೆ ಬಾರಿಸಿ ಹಲ್ಲೆ
ಕಾರವಾರ:-ಸರ್ಕಾರಿ ಆಯುಷ್ ಆಯುರ್ವೇದ ಇಲಾಖೆಯ ವೈದ್ಯನ ಮೇಲೆ ಚಿಕಿತ್ಸೆಗೆ ಬಂದ ವ್ಯಕ್ತಿ ಹಲ್ಲೆ ಮಾಡಿದ ಘಟನೆ ಕಾರವಾರದ(karwar) ಸರ್ಕಾರಿ ಆಯುರ್ವೇದ ಆಸ್ಪತ್ರೆಯಲ್ಲಿ ನಡೆದಿದೆ.
ಆಯುಷ್- ಆಯುರ್ವೇದ ( Ayurvedic) ಇಲಾಖೆಯ ವೈದ್ಯ ಡಾ. ಸಂಗಮೇಶ್ ಹಲ್ಲೆಗೊಳಗಾದ ವೈದ್ಯರಾಗಿದ್ದಾರೆ.ವಿನೋದ್ ಮಾಳ್ಸೇಕರ್ ಹಲ್ಲೆ ಮಾಡಿದ ವ್ಯಕ್ತಿಯಾಗಿದ್ದಾನೆ.
ಪೈಲ್ಸ್‌ಗೆ ಔಷಧಿ ತೆಗೆದುಕೊಂಡು ಹೋಗಲು ಆರೋಪಿ ವಿನೋದ್ ಆಸ್ಪತ್ರೆ ಭೇಟಿ ನೀಡಿದ್ದರು.ಡಾ. ಸಂಗಮೇಶ್ ಆರೋಪಿಗೆ ಔಷಧ ಬರೆದುಕೊಟ್ಟು ಫಾರ್ಮಸಿಗೆ ಕಳುಹಿಸಿಕೊಟ್ಟಿದ್ದರು.
ಫಾರ್ಮಸಿಯಿಂದ ಚೂರ್ಣದ ಔಷಧ (medicine )ಪಡೆದ ಆರೋಪಿ, ಡಾ. ಸಂಗಮೇಶ್‌ಗೆ ತೋರಿಸಿ ಸೀಲ್ ಆಗಿರುವ ಔಷಧಿ ನೀಡು ಅಂತಾ ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೆನ್ನೆಗೆ ಹೊಡೆದು ಮೇಲೆ ಹಲ್ಲೆ ಮಾಡಿದ್ದಾನೆ.
ಏಕಾಏಕಿ ನಡೆದ ದಾಳಿಯಿಂದ ಆಘಾತಕ್ಕೊಳಗಾಗಿರುವ ಡಾ. ಸಂಗಮೇಶ್ ,
ಕಾರವಾರದ ಸರಕಾರಿ ಜಿಲ್ಲಾಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ.
ನಂತರ ಆರೋಪಿ ವಿನೋದ್ ಮಾಳ್ಸೇಕರ್ ವಿರುದ್ಧ ಕಾರವಾರ ನಗರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.