For the best experience, open
https://m.kannadavani.news
on your mobile browser.
Advertisement

Hostel protest |ಕೊಳೆತ ತರಕಾರಿ ಊಟ ನೀಡ್ತಾರೆ| ವಸತಿ ನಿಲಯದ ವಿದ್ಯಾರ್ಥಿನಿಯರಿಂದ ರಸ್ತೆಯಲ್ಲಿ ಕುರಿತು ಪ್ರತಿಭಟನೆ

Students at Devraj Arasu Girls Hostel in Baad, Karwar, staged a sudden road protest alleging they were served rotten vegetables and unhygienic food. The students accused the warden of mismanagement and demanded proper facilities. Officials assured immediate action.
10:32 PM Oct 10, 2025 IST | ಶುಭಸಾಗರ್
Students at Devraj Arasu Girls Hostel in Baad, Karwar, staged a sudden road protest alleging they were served rotten vegetables and unhygienic food. The students accused the warden of mismanagement and demanded proper facilities. Officials assured immediate action.
hostel protest  ಕೊಳೆತ ತರಕಾರಿ ಊಟ ನೀಡ್ತಾರೆ  ವಸತಿ ನಿಲಯದ ವಿದ್ಯಾರ್ಥಿನಿಯರಿಂದ ರಸ್ತೆಯಲ್ಲಿ ಕುರಿತು ಪ್ರತಿಭಟನೆ
Hostel protest |ಕೊಳೆತ ತರಕಾರಿ ಊಟ ನೀಡ್ತಾರೆ| ವಸತಿ ನಿಲಯದ ವಿದ್ಯಾರ್ಥಿನಿಯರಿಂದ ರಸ್ತೆಯಲ್ಲಿ ಕುರಿತು ಪ್ರತಿಭಟನೆ

Hostel protest |ಕೊಳೆತ ತರಕಾರಿ ಊಟ ನೀಡ್ತಾರೆ| ವಸತಿ ನಿಲಯದ ವಿದ್ಯಾರ್ಥಿನಿಯರಿಂದ ರಸ್ತೆಯಲ್ಲಿ ಕುರಿತು ಪ್ರತಿಭಟನೆ

Advertisement

ಕಾರವಾರ(October10) :- ವಸತಿ ನಿಲಯದಲ್ಲಿ  ಅವ್ಯವಸ್ಥೆ  (Hostel)ವಿರುದ್ಧ ಸಿಡಿದೆದ್ದ ವಿದ್ಯಾರ್ಥಿನಿಯರು ರಾತ್ರಿ ಊಟ ಬಿಟ್ಟು ರಸ್ತೆಯಲ್ಲಿ ಕುಳಿತು ದಿಢೀರ್ ಪ್ರತಿಭಟನೆಗಿಳಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ(karwar) ನಗರದ  ಬಾಡ ದಲ್ಲಿ ನಡೆದಿದೆ.

ನಗರದ ಬಾಡದಲ್ಲಿನ ದೇವರಾಜ ಅರಸು ಮೆಟ್ರಿಕ್ ನಂತರ ಬಾಲಕಿಯರ ವಸತಿ ನಿಲಯದಲ್ಲಿ  ಬೀದಿಯಲ್ಲಿ ಕುಳಿತು ವಿದ್ಯಾರ್ಥಿನಿಯರು ಸಮರ್ಪಕ ಊಟ ನೀಡುವುದಿಲ್ಲ, ಕೊಳೆತ ತರಕಾರಿ ಬಳಕೆ ಮಾಡಲಾಗುತ್ತದೆ.ನಮ್ಮಿಂದಲೇ , ಶೌಚಾಲಯ ಸ್ವಚ್ಛತೆ ಮಾಡಿಸುವ ಕುರಿತು ವಾರ್ಡನ್ ಮಂಜುಳ ವಿರುದ್ಧ ಅಕ್ರೋಶ ಹೊರಹಾಕಿದ ವಿದ್ಯಾರ್ಥಿನಿಯರು ಉತ್ತಮ ಊಟೋಪಚಾರ ಸಿಗುವ ವರೆಗೂ ಧರಣಿ ನಡೆಸುವುದಾಗಿ ಆಕ್ರೋಶ ವ್ಯಕ್ತಪಡಿಸಿ ರಸ್ತೆಯಲ್ಲಿ ಕುಳಿತು ಪ್ರತಿಭಟನೆ ನಡೆಸಿದರು.

Karwar|ಮುಳುಗುತಿದ್ದ ಬೋಟ್ ರಕ್ಷಣೆ|ವಿಡಿಯೋ ನೋಡಿ

ಪ್ರತಿಭಟನೆಗೆ ವಿದ್ಯಾರ್ಥಿ ಒಕ್ಕೂಟದ ರಾಘವನಾಯ್ಕ ಬೆಂಬಲ ಸೂಚಿಸಿ ಪ್ರತಿಭಟನೆ(protest) ನಡೆಸಿದರು.

 ಇನ್ನು ವಿಷಯ ತಿಳಿಯುತಿದ್ದಂತೆ ಕಾರವಾರದ ತಹಶಿಲ್ದಾರ್ ನರೋನಾ ರವರು ಸ್ಥಳಕ್ಕೆ ಆಗಮಿಸಿ ವಿದ್ಯಾರ್ಥಿನಿಯರಿಗೆ ಸೂಕ್ತ ವ್ಯವಸ್ಥೆ ಮಾಡಿಕೊಡುವ ಭರವಸೆ ನೀಡಿದರು.

ಇನ್ನು ಆರೋಪವನ್ನು ಅಲ್ಲಗಳೆದ ವಾರ್ಡನ್ ಮಂಜುಳಾ ರವರು ತಾವು ಹೊಸದಾಗಿ ಇಲ್ಲಿಗೆ ವರ್ಗಾವಣೆ ಗೊಂಡು ಬಂದಿದ್ದೇನೆ. ನಾನು ಬಂದಮೇಲೆ ಉತ್ತಮ ಊಟ,ಉಪಹಾರ ವ್ಯವಸ್ಥೆ ಮಾಡಿದ್ದೇನೆ ಯಾವುದೇ ಸಮಸ್ಯೆ ಇಲ್ಲ ಎಂದು ಅವರು ಹೇಳಿದ್ದಾರೆ.

Karwar |ಮದ್ಯದ ಅಮಲಿನಲ್ಲಿ ಬೆತ್ತಲಾದ ಬಾಲಕನ ರಕ್ಷಣೆ| ವಿವಸ್ತ್ರ ಗೊಳಿಸಿ ಥಳಿಸಿದ ಆರೋಪ 

ಸದ್ಯ ಇಲ್ಲಿನ ವ್ಯವಸ್ಥೆ ಕುರಿತು ಸಿಡಿದೆದ್ದ 20 ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಸೂಕ್ತ ವ್ಯವಸ್ಥೆ ಮಾಡದಿದ್ರೆ ಪ್ರತಿಭಟನೆ ಮಾಡುವ ಎಚ್ಚರಿಕೆ ನೀಡಿದ್ದಾರೆ.

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ