Karwar| ಅಗ್ನಿ ಅವಘಡ ಕ್ಷಣಾರ್ಧದಲ್ಲಿ ಲಕ್ಷಾಂತರ ವಸ್ತುಗಳು ಬೆಂಕಿಗಾಹುತಿ.
Karwar| ಅಗ್ನಿ ಅವಘಡ ಕ್ಷಣಾರ್ಧದಲ್ಲಿ ಲಕ್ಷಾಂತರ ವಸ್ತುಗಳು ಬೆಂಕಿಗಾಹುತಿ.
ಕಾರವಾರ: ಕಾರವಾರ (karwar)ನಗರ ಬಾಡದ ಗುರುಮಠದ ಸಮೀಪದ ಹಂಚಿನ ಮನೆಯಲ್ಲಿ ಶುಕ್ರವಾರ ಬೆಳಿಗ್ಗೆ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡ ಘಟನೆ ನಡೆದಿದೆ.
ಪ್ರವೀಣ ಜಾವೇಕರ ಅವರಿಗೆ ಸೇರಿದ ಈ ಮನೆಯಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡ ಪರಿಣಾಮ, ಲಕ್ಷಾಂತರ ರೂ. ಮೌಲ್ಯದ ಗೃಹೋಪಯೋಗಿ ವಸ್ತುಗಳು ಬೆಂಕಿಗೆ ಆಹುತಿಯಾದವು. ಆದರೆ ಅದೃಷ್ಟವಶಾತ್ ಯಾವುದೇ ಜೀವಹಾನಿ ಸಂಭವಿಸಿಲ್ಲ.
Karwar| ಅಬಕಾರಿ ದಾಳಿ ಆರು ಲಕ್ಷ ಮೌಲ್ಯದ ಮದ್ಯ ವಶ
ಅಗ್ನಿಶಾಮಕ ಅಧಿಕಾರಿಗಳ ಮಾಹಿತಿ ಪ್ರಕಾರ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿರಬಹುದೆಂಬ ಪ್ರಾಥಮಿಕ ಅಂದಾಜು ವ್ಯಕ್ತವಾಗಿದೆ. ಆದರೆ ಬೆಂಕಿ (fire)ಹೊತ್ತಿಕೊಂಡ ನಿಖರ ಕಾರಣ ಇನ್ನೂ ತಿಳಿದು ಬರಬೇಕಿದೆ.
ಘಟನೆಯ ಮಾಹಿತಿ ತಿಳಿದ ಕೂಡಲೇ ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸಿ, ಬೆಂಕಿ ವ್ಯಾಪಿಸದಂತೆ ಸಮಯೋಚಿತವಾಗಿ ನಿಯಂತ್ರಣಕ್ಕೆ ತಂದು, ದೊಡ್ಡ ಪ್ರಮಾಣದ ಆರ್ಥಿಕ ನಷ್ಟವನ್ನು ತಪ್ಪಿಸಿತು.
Karwar |ಜೈಲಿನ ಮೇಲೆ ಪೊಲೀಸರ ದಾಳಿ | ಮೊಬೈಲ್ ಸೇರಿದಂತೆ ಹಲವು ವಸ್ತುಗಳು ವಶಕ್ಕೆ
ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ಠಾಣಾಧಿಕಾರಿ ಮಹಾಬಲೇಶ್ವರ ಗೌಡ, ಪ್ರಮುಖ ಅಗ್ನಿಶಾಮಕ ಸಿಬ್ಬಂದಿ ಸಪ್ನಿಲ್ ಪೇಡ್ನೆಕರ, ಟೋನಿ, ಕುಮಾರ ಕೆ. ಎನ್., ಪ್ರವೀಣ ಕೆ. ನಾಯ್ಕ ಸೇರಿದಂತೆ ತಂಡ ಭಾಗವಹಿಸಿತು.