Karwar |ಪತ್ನಿಗೆ ವಿಷವಿಟ್ಟು ಅಣಶಿ ಘಟ್ಟದ ಅರಣ್ಯದಲ್ಲಿ ಶವ ಎಸೆದುಹೋದ ಪತಿ!
Karwar |ಪತ್ನಿಗೆ ವಿಷವಿಟ್ಟು ಅಣಶಿ ಘಟ್ಟದ ಅರಣ್ಯದಲ್ಲಿ ಶವ ಎಸೆದುಹೋದ ಪತಿ!
ಕಾರವಾರ /ಬೀದರ್ :- ಪತ್ನಿಗೆ ಅಕ್ರಮ ಸಂಬಂಧ ಇರುವ ಬಗ್ಗೆ ಶಂಕಿಸಿ ಪತಿಯೇ ಹತ್ಯೆ ಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ (karwar)ದ ಚಿತ್ತಾಕುಲ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬೀದರ್ ಮೂಲದ ಪರ್ವಿಂದ್ ಬೇಗಮ್ (45) ಹತ್ಯೆಯಾದ ಮಹಿಳೆಯಾಗಿದ್ದು ಇಸ್ಮಯಲ್ ದಫೆದಾರ್ ವಿಷವಿಟ್ಟು ಹತ್ಯೆ ಮಾಡಿದ ಪತಿಯಾಗಿದ್ದಾನೆ.
ಬೀದರ್ ನ ಪರ್ವಿಂದ್ ಬೇಗಮ್ ಹಾಗೂ ಇಸ್ಮಯಲ್ ದಫೆದಾರ್ ಗೆ ಆರು ಜನ ಮಕ್ಕಳಿದ್ದು,ಎಲ್ಲರನ್ನೂ ವಿವಾಹ ಮಾಡಿಕೊಟ್ಟಿದ್ದು ದಂಪತಿಗಳಿಬ್ಬರೇ ಇದ್ದರು. ಇನ್ನು ಬೇಗಮ್ ಬೀದರ್ ನಲ್ಲಿ ಪರ ಪುರುಷನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾಗಿ ತಿಳಿದುಬಂದಿದ್ದು, ಇದರಿಂದ ಪತ್ನಿಯ ವಿರುದ್ಧ ಸಿಟ್ಟಾಗಿದ್ದ ಇಸ್ಮಯಲ್ ದಫೆದಾರ್ ಸ್ನೇಹಿತ ಅಜಮುದ್ದೀನ್ ಮಹ್ಮದ್ ಜಾನಿಮಿಯ ಜೊತೆ ಹತ್ಯೆಗೆ ಸ್ಕೆಚ್ ಹಾಕಿದ್ದನು.
ಆಕೆಯ ಅನಾರೋಗ್ಯದ ಕಾರಣವನ್ನು ನೆಪವಾಗಿಟ್ಟುಕೊಂಡು ಹೆಂಡತಿಯನ್ನು ಪುಸುಲಾಯಿಸಿ ಕಾರವಾರ ತಾಲೂಕಿನ ಹಳಗಕ್ಕೆ ಕರೆತಂದಿದ್ದಾನೆ .
ಜೊತೆಗೆ ಸ್ನೇಹಿತ ಅಜಮುದ್ದೀನ್ ಮಹ್ಮದ್ ಜಾನಿಮಿಯ ಕೂಡ ಬೇರೆ ಕಾರಿನಲ್ಲಿ ಇಬ್ಬರೊಂದಿಗೆ ಹಳಗಕ್ಕೆ ಬಂದಿದ್ದನು.ಈವೇಳೆ ತನ್ನ ಸ್ನೇಹಿತನನ್ನು ಹಳಗದಲ್ಲಿ ಪರಿಚಯಿಸಿ ಒಟ್ಟಿಗೇ ಕಾರಿನಲ್ಲಿ ಬೀದರ್ ಗೆ ಹೂಗುಲು ಆಕೆಯನ್ನು ಒಪ್ಪಿಸಿದ್ದಾರೆ.
ನಂತರ ಕಾರಿನಲ್ಲಿ ಕರೆದೊಯ್ದು ಮಾರ್ಗ ಮಧ್ಯದಲ್ಲಿ ಊಟ ಮಾಡುವ ನೆಪದಲ್ಲಿ ಕದ್ರಾ ಬಳಿ ಊಟಕ್ಕೆ ವಿಷವಿಟ್ಟಿದ್ದಾರೆ. ನಂತರೆ ಆಗೆ ಅಸ್ವಸ್ಥಳಾಗಿ ಸಾವು ಕಂಡಿದ್ದು , ಜೀವ ಹೋದ ನಂತರ ಅಣಶಿ ಘಟ್ಟದ ಅರಣ್ಯದಲ್ಲಿ ಆಕೆಯ ಶವವನ್ನು ಎಸೆದು ಹೋಗಿದ್ದನು.
ಮರುದಿನ ಚಿತ್ತಾಕುಲ ಠಾಣೆಗೆ ಬಂದು ಪತ್ನಿ ಕಾಣೆಯಾಗಿರುವ ದೂರು ನೀಡಿ ಬೀದರ್ ಗೆ ತೆರಳಿದ್ದನು.
Gokarna|ಗೋಕರ್ಣ ಕಡಲ ಅಲೆಯಲ್ಲಿ ನೀಲಿ ಬೆಳಕಿನ ವಿಸ್ಮಯ-ಕಡಲಿನಲ್ಲಿ ರಾತ್ರಿ ಸೂಸಿದ ನೀಲಿ ಬೆಳಕು
ನಂತರ ಚಿತ್ತಾಕುಲ ಪೊಲೀಸರು ತನಿಖೆ ಕೈಗೊಂಡಾಗ ಈತನ ಮೇಲೆ ಅನುಮಾನಗೊಂಡು ವಿಚಾರಿಸಿದಾಗ ತಾನು ವಿಷವಿಟ್ಟು ಹತ್ಯೆ ಮಾಡಿದ ವಿಷಯ ಬಾಯಿ ಬಿಟ್ಟಿದ್ದಾನೆ. ಇದಲ್ಲದೇ ಆಕೆಯ ಶವವನ್ನು ಎಸೆದ ಜಾಗವನ್ನು ಸಹ ತೋರಿಸಿದ್ದಾನೆ.
ಘಟನೆ ಸಂಬಂಧ ಇಸ್ಮಯಲ್ ದಫೆದಾರ್ ಹಾಗೂ ಆತನ ಸ್ನೇಹಿತರ ವಿರುದ್ಧ ಪ್ರಕರಣ ದಾಖಲಿಸಿದ್ದು ,ಶವವನ್ನು ಕಾರವಾರದ ಕ್ರಿಮ್ಸ್ ಆಸ್ಪತ್ರೆಯ ಶವಾಗಾರಕ್ಕೆ ಮರಣೋತ್ತರ ಪರೀಕ್ಷೆಗೆ ಸಾಗಿಸಲಾಗಿದೆ.
