Karwar |ಮದ್ಯದ ಅಮಲಿನಲ್ಲಿ ಬೆತ್ತಲಾದ ಬಾಲಕನ ರಕ್ಷಣೆ| ವಿವಸ್ತ್ರ ಗೊಳಿಸಿ ಥಳಿಸಿದ ಆರೋಪ
Karwar |ಮದ್ಯದ ಅಮಲಿನಲ್ಲಿ ಬೆತ್ತಲಾದ ಬಾಲಕನ ರಕ್ಷಣೆ| ವಿವಸ್ತ್ರ ಗೊಳಿಸಿ ಥಳಿಸಿದ ಆರೋಪ

ಕಾರವಾರ:ಉತ್ತರ ಕನ್ನಡ ಜಿಲ್ಲೆಯ ಕಾರವಾರ(karwar) ನಗರದ ಕಾಜುಬಾಗ್ ನ ಮಂಜುಗಡ್ಡೆ ಸ್ಥಾವರವೊಂದರಲ್ಲಿ ಕೆಲಸ ಮಾಡುತ್ತಿದ್ದ ಒರಿಸ್ಸಾ ಮೂಲದ ಬಾಲಕನೋರ್ವ ಕುಡಿದ ನಶೆಯಲ್ಲಿ ಊರಿಗೆ ಹೋಗುವುದಾಗಿ ಹಟ ಹಿಡಿದಿದ್ದು ಈವೇಳೆ ಆತನಿಗೆ ಮದ್ಯದ ಅಮಲು ಇಳಿಯಲು ಮೈಮೇಲೆ ನೀರನ್ನು ಹಾಕಿದ್ದು , ಅಲ್ಲಿಂದ ತಪ್ಪಿಸಿಕೊಂಡ ಬಾಲಕ ವಿವಸ್ತ್ರನಾಗಿ ಕಾಳಿ ನದಿ ಭಾಗದಲ್ಲಿ ನ ನದಿವಾಡದಲ್ಲಿ ಓಡಾಡಿದ್ದು ಸ್ಥಳೀಯರು 112 ಗೆ ಕರೆಮಾಡಿ ಆತನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.
ಮೊದಲು ಸಂಬಳ ಕೇಳಿದ್ದ ಕ್ಕಾಗಿ ಆತನ ಮೇಲೆ ಹಲ್ಲೆ ನಡೆಸಿ ಮೈಮೇಲಿನ ಬಟ್ಟೆ ತೆಗೆದು ವಿವಸ್ತ್ರಗೊಳಿಸಲಾಗಿದೆ ಎಂದು ಆರೋಪಿಸಲಾಗಿತ್ತು.
ಇದಲ್ಲದೇ ಹಲ್ಲೆಯಿಂದ ಬೆದರಿದ ಬಾಲಕ ವಿವಸ್ತ್ರವಾಗಿ ಅಲ್ಲಿಂದ ಓಡಿ ಹೋಗಿದ್ದನು ಎಂದು ದೂರಲಾಗಿತ್ತು.
ಇನ್ನು ಆತನನ್ನು ಠಾಣೆಗೆ ಕರೆತಂದ ಪೊಲೀಸರು ಮಾಹಿತಿ ಪಡೆದಾಗ ಆತ ತಾನು ಒರಿಸ್ಸಾ ದಿಂದ ಕೆಲಸ ಮಾಡಲು ಬಂದಿದ್ದೆ ,ತಂದೆಯ ಖಾತೆಗೆ ಹಣ ಹಾಕಿದ್ದಾರೆ,ನನಗೆ ಊರಿಗೆ ಹೋಗಲು ಹಣ ಇಲ್ಲ ಊರಿಗೆ ಹೋಗಬೇಕು ಎಂದು ಹೇಳಿದ್ದಾನೆ.
ಇನ್ನು ಈತ ಮದ್ಯದ ಚಟ ಹತ್ತಿಸಿಕೊಂಡಿದ್ದು ಐಸ್ ಫ್ಯಾಕ್ಟರಿಯ ಮಾಲೀಕರು ಸಹ ಬುದ್ದಿವಾದ ಹೇಳಿದ್ದರು ಎನ್ನಲಾಗಿದೆ. ಆದರೇ ಕೇಳದೇ ಮದ್ಯ ಸೇವಿಸಿದ್ದರಿಂದ ಆತನಿಗೆ ನೀರನ್ನು ಹಾಕಿದ್ದರು ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.
Karnataka|ಸೆಲ್ಫಿ ತೆಗೆಯಲು ಹೋಗಿ ಸಮುದ್ರಪಾಲಾದ ಶಿವಮೊಗ್ಗದ ಪ್ರವಾಸಿಗ
ತನಿಖೆ ಕೈಗೊಂಡ ಪೊಲೀಸರು ಈತನ ತಂದೆಗೆ ಮಾಲೀಕರು ಹಣ ಹಾಕಿದ ದಾಖಲೆ ಪಡೆದಿದ್ದಾರೆ. ಇನ್ನು ಈತ 17 ವರ್ಷದವನಾಗಿದ್ದು ,ಅಪ್ರಾಪ್ತ ಬಾಲಕನನ್ನು ಕೆಲಸಕ್ಕೆ ಬಳಸಿಕೊಳ್ಳಲಾಗಿದೆ. ಹೀಗಾಗಿ ಬಾಲ ಮಂದಿರದಲ್ಲಿ ಈತನನ್ನು ಇರಿಸಲಾಗಿದ್ದು , ನಂತರ ಈತನನ್ನು ಊರಿಗೆ ಕಳುಹಿಸಿಕೊಡಲು ವ್ಯವಸ್ಥೆ ಮಾಡಲಾಗಿದೆ.
ಸಧ್ಯ ಈತನ ಪೋಷಕರು ದೂರು ದಾಖಲಿಸಲು ಮುಂದೆ ಬಾರದ ಕಾರಣ ಯಾವುದೇ ದೂರು ದಾಖಲಾಗಿಲ್ಲ. ಶೀಘ್ರದಲ್ಲಿ ಈ ಬಾಲಕನನ್ನು ಊರಿಗೆ ಕಳುಹಿಸಿಕೊಡಲು ಪೊಲೀಸರು ವ್ಯವಸ್ತೆ ಮಾಡಿದ್ದಾರೆ.