ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Manki bath |ಮೋದಿ ಮನ್ ಕೀ ಬಾತ್‌ನಲ್ಲಿ ಕಾರವಾರದ ವಾರ್‌ಶಿಪ್ ಮ್ಯೂಸಿಯಂ

Karwar: In the 128th edition of Mann Ki Baat, PM Narendra Modi highlighted the INS Chapal Warship Museum in Karwar, urging people to visit naval museums across India to promote tourism and patriotism.
12:47 PM Nov 30, 2025 IST | ಶುಭಸಾಗರ್
Karwar: In the 128th edition of Mann Ki Baat, PM Narendra Modi highlighted the INS Chapal Warship Museum in Karwar, urging people to visit naval museums across India to promote tourism and patriotism.

Manki bath |ಮೋದಿ ಮನ್ ಕೀ ಬಾತ್‌ನಲ್ಲಿ ಕಾರವಾರದ ವಾರ್‌ಶಿಪ್ ಮ್ಯೂಸಿಯಂ.

Advertisement

ಕಾರವಾರ :- ಪ್ರಧಾನಿ ನರೇಂದ್ರ ಮೋದಿಯವರು(modi) ಈ ಬಾರಿ 128ನೇ  ಸಾಲಿನ ಕಾರವಾರ ಮನ್‌ ಕೀ ಬಾತ್‌ನಲ್ಲಿ ಉತ್ತರಕನ್ನಡ ಜಿಲ್ಲೆಯ ಕಾರವಾರದಲ್ಲಿರುವ (karwar)ಭಾರತೀಯ ನೌಕಾಪಡೆಯ ಹೆಮ್ಮೆಯ ಯುದ್ಧನೌಕೆಯ ಮ್ಯೂಸಿಯಂ ಐಎನ್ಎಸ್ ಚಾಪೆಲ್ ಬಗ್ಗೆ ಪ್ರಸ್ತಾಪಿಸಿದ್ದಾರೆ.

ದೇಶದಲ್ಲಿ ಪ್ರವಾಸೋದ್ಯಮ ಹಾಗೂ ರಾಷ್ಟ್ರಭಕ್ತಿ ಬೆಳೆಸುವ ಉದ್ದೇಶದಿಂದ ನೌಕಾನೆಲೆಗೆ ಸಂಬಂಧಿಸಿದ ಕಾರವಾರ ಸೇರಿದಂತೆ ವಿವಿಧ ಮ್ಯೂಸಿಯಂ‌ಗಳಿಗೆ ಭೇಟಿ ನೀಡಿ ಎಂದು ಜನರಿಗೆ ಕರೆ ನೀಡಿದ್ದಾರೆ.

Karwar| ಮರದ ಎಲೆಗೆ ಹಚ್ಚಿದ ಬೆಂಕಿ ಆವರಿಸಿದ್ದು ಕಾಲೇಜು ಕಟ್ಟಡಕ್ಕೆ! ಏನಾಯ್ತು ವಿವರ ನೋಡಿ.

Advertisement

ಅಂದಹಾಗೆ, ರಷ್ಯಾ ನಿರ್ಮಿತ ಈ ಯುದ್ಧನೌಕೆ 1976ರಲ್ಲಿ ವಿಶಾಖಪಟ್ಟಣಂ ನೌಕಾನೆಲೆಗೆ ಆಗಮಿಸಿತ್ತು. ಸುಮಾರು 375 ಟನ್ ತೂಕದ ಯುದ್ಧನೌಕೆ ಸಾಕಷ್ಟು ವಿಶೇಷತೆಯನ್ನು ಹೊಂದಿತ್ತು. ಗಂಟೆಗೆ 70 ಕಿಲೋ ಮೀಟರ್ ವೇಗವಾಗಿ ಸಾಗುವ ಶಕ್ತಿ ಹೊಂದಿದ್ದ ಚಾಪೆಲ್ ಯುದ್ಧನೌಕೆಯಲ್ಲಿ ನಾಲ್ಕು ಕ್ಷಿಪಣಿ ನಾಶಕ ಹಾಗೂ 2 ವಿಮಾನ ನಾಶಕಗಳು ಸದಾ ಸನ್ನದ್ಧವಾಗಿ ಕಾರ್ಯನಿರ್ವಹಿಸುತ್ತಿದ್ದವು.

Karwar | ಮನೆಯಲ್ಲಿ ಬೆಂಕಿ ಅವಘಡ | ಬೆಂಕಿಗಾಹುತಿಯಾದ ಚಿನ್ನಾಭರಣ.ವಿಡಿಯೋ ನೋಡಿ

ಇನ್ನು 4 ಕಿಲೋ ಮೀಟರ್ ದೂರದ ವಿಮಾನಗಳನ್ನು ಹೊಡೆದುರುಳಿಸುವ ಶಕ್ತಿ ಇದ್ದ ಚಾಪೆಲ್ ಯುದ್ಧನೌಕೆ ಸತತವಾಗಿ 29 ವರ್ಷಗಳ ಕಾಲ ಕಡಲಿನಲ್ಲಿ ದೇಶ ರಕ್ಷಣೆಗಾಗಿ ಸೇವೆಯನ್ನು ಸಲ್ಲಿಸಿತ್ತು.

ಕಳೆದ 2005ರಲ್ಲಿ ತನ್ನ ಸೇವೆಯಿಂದ ನಿವೃತ್ತಿಯಾಗಿದ್ದ ಈ ಚಾಪೆಲ್ ನೌಕೆಯನ್ನು ನಂತರ ಕಾರವಾರಕ್ಕೆ ಕೊಡಲು ತೀರ್ಮಾನಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಚಾಪೆಲ್ ಯುದ್ದ ನೌಕೆಯನ್ನು ಪಡೆದ ಉತ್ತರಕನ್ನಡ ಜಿಲ್ಲಾಡಳಿತ ವಾರ್‌ಶಿಪ್ ಮ್ಯೂಸಿಯಂ ಆಗಿ ಪರಿವರ್ತನೆ ಮಾಡಿದೆ. ಐಎನ್ಎಸ್ ಚಾಪೆಲ್ ಯುದ್ಧನೌಕೆ 2006ರ ನವೆಂಬರ್ 7ನೇ ತಾರೀಖು ಕಾರವಾರದ ಟ್ಯಾಗೂರ್ ಕಡಲತೀರಕ್ಕೆ ಕಾಲಿಟ್ಟು ಸಾರ್ವಜನಿಕ ವೀಕ್ಷಣೆಗೆ ಮ್ಯೂಸಿಯಂ ಮೂಲಕ ತನ್ನ ಕಾರ್ಯವನ್ನು ಪ್ರಾರಂಭಿಸಿತ್ತು. ಕಾರವಾರಕ್ಕೆ ನೌಕೆ ತಂದು ಸಾಕಷ್ಟು ವರ್ಷಗಳಾಗಿದ್ದು, ಇದರ ನಿರ್ವಹಣೆಗಾಗಿ ಉತ್ತರ ಕನ್ನಡ ಜಿಲ್ಲಾಡಳಿತ ಸುಮಾರು 45 ಲಕ್ಷ ರೂ. ವೆಚ್ಚ ಮಾಡಿ ನೌಕೆಯನ್ನು ಮತ್ತೆ ರಿಪೇರಿ ಮಾಡುವ ಕೆಲಸ ಮಾಡಿದೆ.‌

Navy :ಹಿಂದು ಮಹಾಸಾಗರ ದಲ್ಲಿ 9 ಮಿತ್ರ ರಾಷ್ಟ್ರದೊಂದಿಗೆ IOS ಸಾಗರ ಹೆಸರಿನ ಕಾರ್ಯಾಚರಣೆಗೆ ಕಾರವಾರ ದಲ್ಲಿ ಚಾಲನೆ

 ನೌಕೆಗೆ ಪ್ರತಿನಿತ್ಯ ನೂರಾರು ಪ್ರವಾಸಿಗರು ಆಗಮಿಸುತ್ತಿದ್ದು, ಕಳೆದ 19 ವರ್ಷಗಳಲ್ಲಿ ಲಕ್ಷಕ್ಕೂ ಅಧಿಕ ಜನ ಈ ನೌಕೆಯ ಮಾಹಿತಿಯನ್ನು ಪಡೆದಿದ್ದಾರೆ. ನೌಕೆ ವೀಕ್ಷಣೆಗೆ ಬರುವ ಪ್ರವಾಸಿಗರಿಗೆ ನೌಕೆಯಲ್ಲಿನ ಕಾರ್ಯಚಟುವಟಿಕೆ, ನೌಕೆಯ ಸಿಬ್ಬಂದಿ ಯಾವ ರೀತಿ ಜೀವನ ಶೈಲಿ ನಡೆಸುತ್ತಿದ್ದರು, ಯಾವ ರೀತಿ ಕಡಲಿನಲ್ಲಿ ಕಾರ್ಯನಿರ್ವಹಿಸುತ್ತಿತ್ತು, ಜೊತೆಗೆ ಭಾರತೀಯ ನೌಕಾಪಡೆಯ ಕಾರ್ಯಚಟುವಟಿಕೆ ಬಗ್ಗೆ ಮಾಹಿತಿಯನ್ನು ಒದಗಿಸುವ ಕಾರ್ಯವನ್ನು ಮಾಡಲಾಗುತ್ತಿದೆ.

 

Advertisement
Tags :
Indian NavyKarnataka newsKarwar TourismModi manki bathNarendra ModiNaval MuseumTagore BeachTourismUttara Kannada
Advertisement
Next Article
Advertisement