For the best experience, open
https://m.kannadavani.news
on your mobile browser.
Advertisement

Wildlife news|ಕೈಗಾ-ಯಲ್ಲಾಪುರ ರಸ್ತೆಯಲ್ಲಿ ಹುಲಿ ಸಂಚಾರ| ಜಿಲ್ಲೆಯಲ್ಲಿ ಎಷ್ಟಾಗಿದೆ ಹುಲಿಗಳ ಸಂಖ್ಯೆ ಗೊತ್ತಾ?

Karwar Wildlife News: ಕೈಗಾ-ಯಲ್ಲಾಪುರ ರಸ್ತೆಯಲ್ಲಿ ಹುಲಿ ಸಂಚಾರ! ಉತ್ತರ ಕನ್ನಡ ಜಿಲ್ಲೆಯ ಕಾಳಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹುಲಿಗಳ ಸಂಖ್ಯೆ 22 ಕ್ಕಿಂತ ಹೆಚ್ಚು. 2024ರ ಅರಣ್ಯ ಇಲಾಖೆ ವರದಿ ಪ್ರಕಾರ ಜಿಲ್ಲೆಯಲ್ಲಿ ಹುಲಿಗಳ ಸಂಖ್ಯೆ 30 ಕ್ಕೆ ಏರಿರುವ ಸಾಧ್ಯತೆ. ವಿವರ ನೋಡಿ.
10:46 PM Sep 13, 2025 IST | ಶುಭಸಾಗರ್
Karwar Wildlife News: ಕೈಗಾ-ಯಲ್ಲಾಪುರ ರಸ್ತೆಯಲ್ಲಿ ಹುಲಿ ಸಂಚಾರ! ಉತ್ತರ ಕನ್ನಡ ಜಿಲ್ಲೆಯ ಕಾಳಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹುಲಿಗಳ ಸಂಖ್ಯೆ 22 ಕ್ಕಿಂತ ಹೆಚ್ಚು. 2024ರ ಅರಣ್ಯ ಇಲಾಖೆ ವರದಿ ಪ್ರಕಾರ ಜಿಲ್ಲೆಯಲ್ಲಿ ಹುಲಿಗಳ ಸಂಖ್ಯೆ 30 ಕ್ಕೆ ಏರಿರುವ ಸಾಧ್ಯತೆ. ವಿವರ ನೋಡಿ.
wildlife news ಕೈಗಾ ಯಲ್ಲಾಪುರ ರಸ್ತೆಯಲ್ಲಿ ಹುಲಿ ಸಂಚಾರ  ಜಿಲ್ಲೆಯಲ್ಲಿ ಎಷ್ಟಾಗಿದೆ ಹುಲಿಗಳ ಸಂಖ್ಯೆ ಗೊತ್ತಾ

Wildlife news|ಕೈಗಾ-ಯಲ್ಲಾಪುರ ರಸ್ತೆಯಲ್ಲಿ ಹುಲಿ ಸಂಚಾರ| ಜಿಲ್ಲೆಯಲ್ಲಿ ಎಷ್ಟಾಗಿದೆ ಹುಲಿಗಳ ಸಂಖ್ಯೆ ಗೊತ್ತಾ?

Advertisement

ಪ್ರಕೃತಿ ಮೆಡಿಕಲ್ ,ಕಾರವಾರ.

Karwar Wildlife news:-ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಕೈಗಾ ಅರಣ್ಯದಲ್ಲಿ ಹುಲಿ ಪ್ರತ್ಯಕ್ಷವಾಗಿದೆ. ಕಳೆದ ಹಲವು ತಿಂಗಳಲ್ಲಿ ಆಗಾಗ ಕಾಣಿಸಿಕೊಳ್ಳುತಿದ್ದ ಹುಲಿಯು ಇದೀಗ ಮತ್ತೆ ವಾಹನ ಸವಾರರಿಗೆ ಕಾಣಿಸಿಕೊಳ್ಳುತ್ತಿದೆ.

ಕಾರವಾರದ ಕೈಗಾ-ಯಲ್ಲಾಪುರ ರಸ್ತೆಯ ಬಾರೆ ಘಟ್ಟದ ಪ್ರದೇಶದಲ್ಲಿ ಹುಲಿ ಓಡಾಡಿದ ದೃಶ್ಯ ವೈರಲ್ ಆಗಿದೆ. ಸೆಪ್ಟೆಂಬರ್ 12ರಂದು ಜಿಕೆ ರಾಮ್ ಕಂಪನಿಯ ವಾಹನ ಚಾಲಕ ಸೈನಾಥ ನಾಯಕ್  ಅವರು ಈ ಮಾರ್ಗದಲ್ಲಿ ವಾಹನ ಓಡಿಸಿಕೊಂಡು ಹೋಗುತ್ತಿದ್ದರು. ಈ ವೇಳೆ ರಸ್ತೆಗೆ ಬಂದ ಹುಲಿ ಸುಮಾರು 20 ನಿಮಿಷಗಳ ಕಾಲ ರಸ್ತೆಯಲ್ಲೇ ಘನ ಗಂಭೀರ ಹೆಜ್ಜೆಯನ್ನಿಟ್ಟು ಓಡಾಡಿದ್ದು ,ಈ ದೃಶ್ಯವನ್ನು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾರೆ.

Karwar news: ಈ ಗಣೇಶನಿಗೆ ಮುಸ್ಲೀಮರೇ ಪೂಜೆ-ಕಾರವಾರದಲ್ಲೊಂದು ಕೋಮು ಸೌಹಾರ್ಧ ಸಾರುವ ಗಣಪ

ಜಿಲ್ಲೆಯಲ್ಲಿ ಹೆಚ್ಚಿದ ಹುಲಿಗಳ ಸಂಖ್ಯೆ-ಈಗ ಎಷ್ಟಿದೆ ಹುಲಿಗಳು |ವಿವರ ಇಲ್ಲಿದೆ.

ಕದ್ರಾ-ಯಲ್ಲಾಪುರ ರಸ್ತೆಯಲ್ಲಿ ಸಂಚರಿಸಿದ ಹುಲಿ

 ಉತ್ತರ ಕನ್ನಡ ಜಿಲ್ಲೆ ತನ್ನ ಪ್ರಕೃತಿ ಸೊಭಗಿಂದಾಗಿ ರಾಜ್ಯದ ಪರಿಸರ ಪ್ರೇಮಿಗಳ ಗಮನ ಸೆಳೆಯುತ್ತದೆ. ಜಿಲ್ಲೆಯಲ್ಲಿ ಸಿಂಹವನ್ನು ಹೊರತುಪೆಇಸಿದರೇ ಉಳಿದ ಪ್ರಾಣಿ ,ಪಕ್ಷಿಗಳ ಆವಾಸ ಸ್ಥಾನ ಕೂಡ. ಇಲ್ಲಿನ ಹಾರನಬಿಲ್ ಪಕ್ಷಿ, ಕರಿಚಿರತೆ,ಆನೆ,ಸಿಂಗಳೀಕ ಸೇರಿದಂತೆ ಬಹುತೇಕ ಪ್ರಾಣಿ ಪಕ್ಷಿಗಳ ಆವಾಸ ಸ್ಥಾನವಾಗಿದೆ.

Uttara kannada: ಕಾಳಿ ಹುಲಿ ಸಂರಕ್ಷಿತ ಅರಣ್ಯವಾಸಿಗಳ ಸ್ಥಳಾಂತರದಲ್ಲಿ 152 ಕೋಟಿ ದುರ್ಬಳಕೆ-ತನಿಖೆಗೆ ಕೇಂದ್ರದಿಂದ ಆದೇಶ

2018ರ ಹುಲಿ ಪ್ರಮಾಣೀಕರಣ (Tiger Census) ಸಮಯದಲ್ಲಿ ಇಲ್ಲಿ ಸುಮಾರು 12 ಹುಲಿಗಳು ಕಂಡುಬಂದಿದ್ದವು.  ಕರ್ನಾಟಕ ಫಾರೆಸ್ಟ್ ಡಿಪಾರ್ಟಮ್ಮೆಂಟ್ ಟೈಗರ್ ಸೆಲ್ ವರದಿ ಪ್ರಕಾರ (“Karnataka forest department’s tiger cell” ) 2024 ರಲ್ಲಿ ಕಾಳಿ ಸಂರಕ್ಷಿತ ಪ್ರದೇಶದಲ್ಲಿ ಹುಲಿಗಳ ಸಂಖ್ಯೆ 22 ಇದೆ ಎಂದು ಹೇಳಲಾಗಿದೆ.

ಇವುಗಳ ಸಂಖ್ಯೆ 30 ರ ವರೆಗೂ ಏರಿರಬಹುದು ಎಂದು ಅಂದಾಜಿಸಲಾಗಿದೆ. ಜಿಲ್ಲೆಯ ವಿಸ್ತಾರ ಪ್ರದೇಶ ಈ ಭಾಗದಲ್ಲಿ ಹುಲಿಗಳ ಸಂತತಿಗೆ ಹೆಚ್ಚು ಪೂರಕವಾಗಿದೆ, ಬಂಡಿಪುರ,ನಾಗರಹೊಳೆ ಭಾಗಕ್ಕಿಂತ ಈ ಭಾಗ ಹುಲಿಗಳಿಗೆ ಸುರಕ್ಷಿತ ಮತ್ತು ಸಂತಾನ ವೃದ್ಧಿಗೂ ಪೂರಕವಾಗಿದೆ ಎಂಬುದು ತಜ್ಞರ ಮಾತು.

Karnataka: ಶಕ್ತಿ ಸೌಧದ ವಿದ್ಯುತ್ ಬಿಲ್ ಬಾಕಿ| ಪವರ್ ಕಟ್ ಮಾಡುವ ಎಚ್ಚರಿಕೆ ನೀಡಿದ ಹೆಸ್ಕಾಂ!

ಹಾಗಾಗಿ 2024ರ ವರದಿ ಪ್ರಕಾರ ಕಾಳಿ ಹುಲಿಸಂರಕ್ಷಿತ ಪ್ರದೇಶದಲ್ಲಿ 22 ಕ್ಕೂ ಹೆಚ್ಚು ಹುಲಿಗಳು ಇಲ್ಲಿದೆ. ಇವುಗಳ ಸಮೀಕ್ಷೆಯನ್ನು ಕ್ಯಾಮರಾ ಟ್ರಾಪ್ ,ಹೆಜ್ಜೆಗಳ ಗುರುತು ,ಹುಲಿಗಳ ದೇಹದ ಪಟ್ಟೆಗಳ ಆಧಾರದಲ್ಲಿ ಮಾಡಲಾಗಿದ್ದು ಇದೀಗ ಜಿಲ್ಲೆಯ ಯಲ್ಲಾಪುರ,ಕಾರವಾರ,ದಾಂಡೇಲಿ ,ಜೋಯಿಡಾ,ರಾಮನಗರ ಭಾಗದ ಅರಣ್ಯದಲ್ಲಿ ಹುಲಿಗಳು ಕಾಣಸಿಗುತಿದ್ದು , ಅಲ್ಲಲ್ಲಿ ರಸ್ತೆಗಳಲ್ಲಿ ಪ್ರತ್ಯಕ್ಷವಾಗಿ ಜನರ ಕಣ್ಣಿಗೆ ಬೀಳುತ್ತಿದೆ. ಜಿಲ್ಲೆಯಲ್ಲಿ ಹುಲಿಗಳಿಂದಾಗಿ ಯಾವುದೇ ಹಾನಿ ಸಂಭವಿಸದೇ ಇರುವುದು ಇಲ್ಲಿನ ಅರಣ್ಯ ಹೇಗೆ ಸುರಕ್ಷಿತವಾಗಿದೆ ಎಂಬುದನ್ನು ತೋರಿಸುತ್ತದೆ.

ವಿಡಿಯೋ ನೋಡಲು ಫೇಸ್ ಬುಕ್ ಲಿಂಕ್ ಇಲ್ಲಿದೆ:-

https://www.facebook.com/share/v/162N5ZphSP/

ಕಾರವಾರದ ಗಿಲಾನಿ ಸೂಪರ್ ಮಾರ್ಕೆಟ್ ನಲ್ಲಿ ಭರ್ಜರಿ ಆಫರ್ ,ಗ್ರೂಸರಿ ಕರೀದಿ ದಾರರಿಗೆ ಸಿಗಲಿದೆ ಬಂಪರ್ ಬಹುಮಾನ
Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ