For the best experience, open
https://m.kannadavani.news
on your mobile browser.
Advertisement

Karwar| ಕ್ರಿಮ್ಸ್ ವೈದ್ಯಕೀಯ ಕಾಲೇಜು ಹಾಸ್ಟಲ್ ನಲ್ಲಿ ಅತ್ಯಾಚಾರ -ಆರೋಪಿ ಬಂಧನ

Karwar, Uttara Kannada, KRIMS Medical College, Crime News, Karwar Police, Women Safety, Sexual Assault, Karnataka News, Hostel Incident, Kumta, Honnavar
08:50 AM Oct 01, 2025 IST | ಶುಭಸಾಗರ್
Karwar, Uttara Kannada, KRIMS Medical College, Crime News, Karwar Police, Women Safety, Sexual Assault, Karnataka News, Hostel Incident, Kumta, Honnavar
karwar  ಕ್ರಿಮ್ಸ್ ವೈದ್ಯಕೀಯ ಕಾಲೇಜು ಹಾಸ್ಟಲ್ ನಲ್ಲಿ ಅತ್ಯಾಚಾರ  ಆರೋಪಿ ಬಂಧನ

Karwar| ಕ್ರಿಮ್ಸ್ ವೈದ್ಯಕೀಯ ಕಾಲೇಜು ಹಾಸ್ಟಲ್ ನಲ್ಲಿ ಅತ್ಯಾಚಾರ -ಆರೋಪಿ ಬಂಧನ

Advertisement

Karwar news:-ಉತ್ತರ ಕನ್ನಡ ಜಿಲ್ಲೆಯ  ಕಾರವಾರದ ಕ್ರಿಮ್ಸ್ ವೈದ್ಯಕೀಯ ವಿಜ್ಞಾನ ಸಂಸ್ಥೆಯ ವಿದ್ಯಾರ್ಥಿನಿಯರ ಹಾಸ್ಟೆಲ್‌ನಲ್ಲಿ ಅತ್ಯಾಚಾರ ಮಾಡಿದ ಕುರಿತು ಪ್ರಕರಣ ದಾಖಲಾಗಿದ್ದು ಆರೋಪಿಯನ್ನು ಕಾರವಾರ ಮಹಿಳಾ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕಾರವಾರ(karwar) ಕ್ರಿಮ್ಸ್ ಮೆಡಿಕಲ್ ಕಾಲೇಜಿನಲ್ಲಿ ( Medical College) ಕೆಲಸ ಮಾಡುತ್ತಿದ್ದ ಮಹಿಳಾ ಅಡುಗೆ ಸಿಬ್ಬಂದಿಯ ಮೇಲೆ ಸಹೋದ್ಯೋಗಿಯೇ ಅತ್ಯಾಚಾರ ನಡೆಸಿದ್ದಾರೆಂಬ ಆರೋಪ ಕೇಳಿಬಂದಿದೆ.

Karwar|ಕಾರವಾರ-ಅಂಕೋಲ ರಾಷ್ಟ್ರೀಯ ಹೆದ್ದಾರಿ 66 ರ ಸುರಂಗ ಮಾರ್ಗದಲ್ಲಿ ದ್ವಿಮುಖ ಸಂಚಾರಕ್ಕೆ ಅವಕಾಶ

ಹೊನ್ನಾವರ ಮೂಲದ ಸುರೇಶ್ ಎಂಬ ಅಡುಗೆಯಾತನ ವಿರುದ್ದ ಕುಮಟಾ ಮೂಲದ ಮಹಿಳೆ ಕಾರವಾರ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ದೂರಿನ ಅನ್ವಯ  ಸುರೇಶ್ ಸೆಪ್ಟೆಂಬರ್ 8ರಂದು ಕೆಲಸಕ್ಕೆ ಸೇರಿದ್ದು, ಸೆಪ್ಟೆಂಬ‌ರ್ 14ರಂದು ಸಂತ್ರಸ್ತ ಮಹಿಳೆ ಸೇರಿದ್ದರು. ಈಕೆಯನ್ನು ಬಲತ್ಕಾರ ಪಡಿಸಿದ ಆರೋಪ ಮಾಡಲಾಗಿದ್ದು ,ಮಂಗಳವಾರ ದೂರು ಸ್ವೀಕರಿಸಿದ ಪೊಲೀಸರು ತಕ್ಷಣವೇ ಕಾರ್ಯಪ್ರವೃತ್ತರಾಗಿ ಆರೋಪಿ ಸುರೇಶ್ ಅವರನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಮುಂದಿನ ಕಾನೂನು ಪ್ರಕ್ರಿಯೆಗಳನ್ನು ಕೈಗೊಂಡಿದ್ದಾರೆ.

Advertisement
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ