Karwar :ಲೋಕಸಭಾ ಚುನಾವಣೆಯಲ್ಲಿ ಅಡ್ಡಿ ಆರೋಪ- ಒಂದು ವರ್ಷದ ನಂತರ ಮಾಧ್ಯಮದ ವಿರುದ್ಧ ಪೊಲೀಸರಿಗೆ ದೂರು ನೀಡಲು ಆದೇಶ
Karwar :ಲೋಕಸಭಾ ಚುನಾವಣೆಯಲ್ಲಿ ಅಡ್ಡಿ ಆರೋಪ- ಒಂದು ವರ್ಷದ ನಂತರ ಮಾಧ್ಯಮದ ವಿರುದ್ಧ ಪೊಲೀಸರಿಗೆ ದೂರು ನೀಡಲು ಆದೇಶ

ಕಾರವಾರ :-ಲೋಕಸಭಾ ಚುನಾವಣೆ 2024ಕ್ಕೆ (Loksabha election )ಸಂಬಂಧಿಸಿದಂತೆ ಚುನಾವಣೆಯ ದಿನ ಅಂದರೆ ಕಳೆದ ವರ್ಷ ಮೇ ತಿಂಗಳ 7ನೇ ತಾರೀಖಿನಂದು ಕಾರವಾರ ವಿಧಾನಸಭಾ ಕ್ಷೇತ್ರದ ಸೇಂಟ್ ಮೈಕಲ್ ಶಾಲೆಯಲ್ಲಿ ಮತಗಟ್ಟೆ ಸಂಖ್ಯೆ 107 ರಲ್ಲಿ ಮಾಧ್ಯಮದ ವರದಿಗಾರರು ಮತಗಟ್ಟೆ 107 ಪ್ರವೇಶ ಮಾಡಿ ವಿಡಿಯೋ ಚಿತ್ರೀಕರಣ ಮಾಡಿ ಮತದಾನದ ಗೌಪ್ಯತೆಗೆ ತೊಂದರೆ ನೀಡಿದ ಆರೋಪದ ಮೇಲೆ ಕಾರವಾರದ ಟಿವಿ ಮೀಡಿಯಾ( media) ಹಾಗೂ ಪತ್ರಿಕಾ ಮಾಧ್ಯಮದ ಕೆಲವು ಪತ್ರಕರ್ತರ ವಿರುದ್ಧ ಪೊಲೀಸ್ (police case)ಪ್ರಕರಣ ದಾಖಲಿಸುವಂತೆ ಕಾರವಾರ ಉಪ ವಿಭಾಗದ ಸಹಾಯಕ ಆಯುಕ್ತ ಕಾನಿಷ್ಕ್ ಆದೇಶ ನೀಡಿದ್ದಾರೆ.
ಆದೇಶ ಪ್ರತಿ:-
ಈ ಬಗ್ಗೆ ಮತಗಟ್ಟೆ ಸಂಖ್ಯೆ 107 ರ ಸೆಕ್ಟರ್ ಅಧಿಕಾರಿಯವರು ಮತಗಟ್ಟೆ ಇರುವ ಸೆಂಟ್ ಮೈಕಲ್ ಶಾಲೆಗೆ ಬಂದು ಮತಯಂತ್ರದ ತಾಂತ್ರಿಕ ದೋಷವನ್ನು ಪರಿಶೀಲನೆ ಮಾಡುವಾಗ ಮಾಧ್ಯಮದ ವರದಿಗಾರರು ಮತಗಟ್ಟೆ 107 ಪ್ರವೇಶ ಮಾಡಿ ವಿಡಿಯೋ ಚಿತ್ರೀಕರಣ ಮಾಡಿ ಚುನಾವಣಾ ನಿಯಮ 1961ರ ಕಲಂ 49 (ಎಂ) ನ್ನು ಉಲ್ಲಂಘಿಸಿರುವ ಮೂಲಕ ಮತಗಟ್ಟೆಯ ಒಳಗಡೆ ಕಾಪಾಡಿಕೊಳ್ಳುವ ಹಾಗೂ ಮತಗಟ್ಟೆಯ ನಿಯಮಗಳನ್ನು ಅನುಸರಿಸುವ ಕಾನೂನನ್ನು ಉಲ್ಲಂಘಿಸಿರುತ್ತಾರೆ.
ಇದನ್ನೂ ಓದಿ:-Karwar :ಉತ್ತರ ಕನ್ನಡ ಜಿಲ್ಲೆಯಲ್ಲಿ ರೆಡ್ ಅಲರ್ಟ -ಅವಧಿ ಪೂರ್ವದಲ್ಲೇ ಜಲಸಾಹಸ ಕ್ರೀಡೆಗಳು ಬಂದ್
ಈ ಬಗ್ಗೆ ಮತಗಟ್ಟೆಯ ಅಧಿಕಾರಿಗಳಿಗೆ ಪತ್ರ ಬರೆದಿರುವ ಕಾರವಾರ ಉಪ ವಿಭಾಗದ ಸಹಾಯಕ ಆಯುಕ್ತ ರವರು ಈ ವರದಿಗಾರರ ವಿರುದ್ಧ ಕಾರವಾರ ಶಹರ ಪೊಲೀಸ್ ಠಾಣೆಯಲ್ಲಿ ಹಾಜರಾಗಿ ಕಾನೂನು ಪ್ರಕಾರ ದೂರು ಸಲ್ಲಿಸಬೇಕೆಂದು ಶುಕ್ರವಾರ ಆದೇಶಿಸಿದ್ದಾರೆ
ಚುನಾವಣೆ ಮುಗಿದ ಒಂದು ವರ್ಷದ ನಂತರ ಈ ದೂರನ್ನು ದಾಖಲಿಸಲು ಕಾರವಾರ ಉಪ ವಿಭಾಗದ ಸಹಾಯಕ ಆಯುಕ್ತರು ಆದೇಶಿಸಿರುವುದು ಅಚ್ಚರಿಗೆ ಕಾರಣವಾಗಿದೆ. ಚುನಾವಣೆಗೆ ಸಂಬಂಧಿಸಿದ ದೂರನ್ನು ತಕ್ಷಣ ದೂರನ್ನು ದಾಖಲಿಸದೆ ಚುನಾವಣೆ ಪ್ರಕ್ರಿಯೆ ಮುಗಿದ ಒಂದು ವರ್ಷದ ನಂತರ ದೂರು ದಾಖಲಿಸಲು ಹೊರಟಿರುವುದು ಹಲವು ಸಂಶಯಗಳಿಗೆ ಕಾರಣವಾಗಿದೆ.
ಇದನ್ನೂ ಓದಿ:-Rain news: ರಾಜ್ಯಾಧ್ಯಾಂತ ಮೂರು ದಿನಗಳಕಾಲ ಮಳೆ
ಇನ್ನು ಟಿವಿ ಮಾಧ್ಯಮ ಹಾಗೂ ಪತ್ರಿಕೆಗಳ ಮೇಲೆ ಜಿಲ್ಲೆಯಲ್ಲಿ ದೂರು ದಾಖಲಿಸುವ ಪ್ರಕರಣ ಹೆಚ್ಚಾಗಿದೆ. ಇದರಿಂದ ನಿರ್ಭೀತಿಯಲ್ಲಿ ಕೆಲಸ ಮಾಡುವವರು ಹಿಂದೇಟು ಹಾಕುವಂತಾಗಿದೆ.