ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Karwar : ಜಿಲ್ಲೆಯ ಜನರ ಕನಸಿಗೆ ಅಡ್ಡಗೋಡೆಯಲ್ಲಿ ದೀಪ ಇಟ್ಟ ವೈದ್ಯಕೀಯ ಶಿಕ್ಷಣ ಸಚಿವ! ಹೇಳಿದ್ದೇನು?

ಕಾರವಾರ :- ರಾಜ್ಯದಲ್ಲಿ ನಡೆದ ಸರಣಿ ಬಾಳಂತಿ ಸಾವಿನ ಬಗ್ಗೆ ಏನು ಕಾರಣ ಎಂಬ ಕಾರಣವನ್ನು ಪತ್ತೆ ಮಾಡಿದ್ದೇವೆ ಎಂದು ಕಾರವಾರದಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು ಗುಣಮಟ್ಟದ ಔಷಧ ಕರೀದಿಗೆ ಕ್ರಮ ಕೈಗೊಂಡಿದ್ದೇವೆ ,ಪ್ರತಿ ಎರಡು ಜಿಲ್ಲೆಗೆ ಕ್ಯಾಲಿಟಿ ಡ್ರಗ್ ಅನ್ನು ಟೆಸ್ಟ್ ಮಾಡಲು
11:11 PM Feb 28, 2025 IST | ಶುಭಸಾಗರ್
Minister sharana Prakash Patil

Karwar : ಜಿಲ್ಲೆಯ ಜನರ ಕನಸಿಗೆ ಅಡ್ಡಗೋಡೆಯಲ್ಲಿ ದೀಪ ಇಟ್ಟ ವೈದ್ಯಕೀಯ ಶಿಕ್ಷಣ ಸಚಿವ! ಹೇಳಿದ್ದೇನು?

Advertisement

ಪ್ರಕೃತಿ ಮೆಡಿಕಲ್ ,ಕಾರವಾರ.

ಉತ್ತರ ಕನ್ನಡ ಜಿಲ್ಲೆಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಕನಸು ಈಡೇರಲು ಹಲವು ವರ್ಷ ದಿಂದ ಪ್ರತಿಭಟನೆ ಹಾದಿ ತುಳಿದರೂ ಕನಸು ನನಸಾಗುವ ಸಾಧ್ಯತೆ ಕಡಿಮೆಯಾಗಿದೆ. ಇಂದು ಕಾರವಾರಕ್ಕೆ ಭೇಟಿ ನೀಡಿದ ವೈದ್ಯಕೀಯ ಶಿಕ್ಷಣ ಸಚಿವರು ಏನಂದ್ರು ಇಲ್ಲಿದೆ ಅದರ ಮಾಹಿತಿ.

ಪ್ರತಿ ಎರಡು ಜಿಲ್ಲೆಗೆ ಔಷಧ ಪರೀಕ್ಷೆಗೆ ಲ್ಯಾಬ್ -ಶರಣ ಪ್ರಕಾಶ್ ಪಾಟೀಲ್

ರಾಜ್ಯದಲ್ಲಿ ನಡೆದ ಸರಣಿ ಬಾಳಂತಿ ಸಾವಿನ ಬಗ್ಗೆ ಏನು ಕಾರಣ ಎಂಬ ಕಾರಣವನ್ನು ಪತ್ತೆ ಮಾಡಿದ್ದೇವೆ ಎಂದು ಕಾರವಾರದಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು ಗುಣಮಟ್ಟದ ಔಷಧ ಕರೀದಿಗೆ ಕ್ರಮ ಕೈಗೊಂಡಿದ್ದೇವೆ ,ಪ್ರತಿ ಎರಡು ಜಿಲ್ಲೆಗೆ ಕ್ಯಾಲಿಟಿ ಡ್ರಗ್ ಅನ್ನು ಟೆಸ್ಟ್ ಮಾಡಲು ಲ್ಯಾಬ್ ಗಳನ್ನು ತೆರೆಯಲು ಕ್ರಮ ವಹಿಸಿದೆ. ಗುಣಮಟ್ಟದ ಔಷಧ ಕರೀದಿಗೆ ಕೆಡಿಡಿಪಿ ಯ ಕಾಯ್ದೆ ಅಡಿ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ. ಗುಣಮಟ್ಟದ ಔಷಧ ಕಂಪನಿಗಳಿಗೆ ಆಧ್ಯತೆ ನೀಡುತ್ತೇವೆ ಎಂದರು. ಇನ್ನು ಕೋವಿಡ್ ಸಮಯದಲ್ಲಿ ಯಂತ್ರಹಾಗೂ ಔಷಧ ಕರೀದಿ ಅವ್ಯವಹಾರ ಸಂಬಂಧ ಜಸ್ಟೀಸ್ ಉಮಾ ಕಮಿಟಿ ವರದಿ ಸಲ್ಲಿಸಿದೆ, ನಮ್ಮ ಇಲಾಖೆಯಿಂದ ಎರಡು ಎಫ್.ಐ ಆರ್ ಮಾಡಲಾಗಿದೆ ಎಂದರು .

Advertisement

ಕಾರವಾರ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ಶೀಘ್ರದಲ್ಲಿ ಎಂಆರ್‌ಐ (MRI )ಯಂತ್ರವನ್ನು ಒದಗಿಸಲಾಗುವುದು. ಈ ಮೂಲಕ ಜಿಲ್ಲಾ ಆಸ್ಪತ್ರೆ ಹಾಗೂ ಮೆಡಿಕಲ್ ಕಾಲೇಜಿನಲ್ಲಿ ಗುಣಮಟ್ಟದ ಚಿಕಿತ್ಸೆ ನೀಡಲಾಗುವುದು.

ಜಿಲ್ಲೆಗೊಂದು ಮೆಡಿಕಲ್‌ ಕಾಲೇಜು ಮಾಡುವ ಉದ್ದೇಶವನ್ನು ಸರ್ಕಾರ ಹೊಂದಿದ್ದು, ರಾಜ್ಯದಲ್ಲಿ ಈಗಾಗಲೇ 71 ಮೆಡಿಕಲ್‌ ಕಾಲೇಜುಗಳು ಕಾರ್ಯನಿರ್ವಹಿಸುತ್ತಿದೆ. ಇದರಲ್ಲಿ 24 ಸರ್ಕಾರಿ ಮೆಡಿಕಲ್ ಕಾಲೇಜುಗಳು ಕಾರ್ಯನಿರ್ವಹಿಸುತ್ತಿವೆ. ಸರ್ಕಾರದ ವತಿಯಿಂದ ಜಿಲ್ಲೆಗೊಂದು ಮೆಡಿಕಲ್ ಕಾಲೇಜು ಸ್ಥಾಪನೆ ಮಾಡುವ ಮೂಲಕ ಸ್ಥಳೀಯರಿಗೆ ಕಡಿಮೆ ವೆಚ್ಚದಲ್ಲಿ ಉತ್ತಮ ಗುಣಮಟ್ಟದ ಚಿಕಿತ್ಸೆ ಹಾಗೂ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವೈದ್ಯಕೀಯ ಶಿಕ್ಷಣ ಒದಗಿಸುವ ಗುರಿ ಹೊಂದಲಾಗಿದೆ' ಎಂದರು.

ಇದನ್ನೂ ಓದಿ:-ಮೂಲಸೌಕರ್ಯ,ಸಿಬ್ಬಂದಿ ನೇಮಕ ಕೊರತೆ ಕಾರವಾರದ ಮೆಡಿಕಲ್ ಕಾಲೇಜಿಗೆ ದಂಡ ವಿಧಿಸಿದ NMC

ಪ್ರಸ್ತುತ ಕಾರವಾರ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ರೂ 3.75 ಕೋಟಿ ವೆಚ್ಚದಲ್ಲಿ ಕ್ಯಾನ್ಸರ್ ಕೇಂದ್ರ ಸ್ಥಾಪಿಸಲು ಅವಶ್ಯವಿರುವ ಲಿನ್ಯಾಕ್ ಬಂಕರ್ ನಿರ್ಮಿಸಲಿದ್ದು, ಮುಂದಿನ ಎರಡು ತಿಂಗಳೊಳಗಾಗಿ ಗುಣಮಟ್ಟದ ಕಾಮಗಾರಿ ಪೂರ್ಣಗೊಳಿಸಲು ಸೂಚಿಸಲಾಗಿದೆ ಎಂದರು. ಕ್ಯಾನ್ಸರ್ ಆಸ್ಪತ್ರೆ ಸ್ಥಾಪನೆಯಿಂದ ಸ್ಥಳೀಯ ಜನರ ಚಿಕಿತ್ಸೆಗೆ ಅನುಕೂಲವಾಗಲಿದ್ದು, ಚಿಕಿತ್ಸೆಗಾಗಿ ಪಕ್ಕದ ಜಿಲ್ಲೆ ಹಾಗೂ ಹೊರ ರಾಜ್ಯಕ್ಕೆ ಚಿಕಿತ್ಸೆ ತೆರಳುವುದು ತಪ್ಪಲಿದೆ ಎಂದರು.

ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಬಹು ದಿನದ ಕನಸಾಗಿದೆ. ಇದನ್ನು ನಿರ್ಮಾಣ ಮಾಡಲು ಜನಪ್ರತಿನಿಧಿಗಳು ಹಾಗೂ ಜಿಲ್ಲೆಯ ಜನರ ಒತ್ತಾಯವಿದ್ದು, ಈ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತರುವ ಪ್ರಾಮಾಣಿಕ ಪ್ರಯತ್ನ ಮಾಡುವೆ. ಇನ್ನೂ ಕೆಲವೇ ದಿನಗಳಲ್ಲಿ ಕ್ರಿಮ್ಸ ನಲ್ಲಿ 450 ಹಾಸಿಗೆಯ ಆಸ್ಪತ್ರೆ ಉದ್ಘಾಟನೆ ಮಾಡಲಿದ್ದು, ಅದಕ್ಕೆ ಬೇಕಾದ ಉಪಕರಣ ಅಳವಡಿಸುವ ಕಾರ್ಯ ನಡೆಯುತ್ತಿದೆ ಎಂದರು. ಆದ್ರೆ ಕುಮಟಾ ದಲ್ಲಿ ಹಿಂದಿನ ಸರ್ಕಾರ ಆಸ್ಪತ್ರೆಗೆ ಇಟ್ಟ ಜಾಗದ ಬಗ್ಗೆ ಚಕಾರತೆತ್ತದ ಸಚಿವರು ಈ ವಿಷಯದಲ್ಲಿ ಮೌನ ವಹಿಸಿದ್ದು ಈ ಬಾರಿ ಬಜೆಟ್ ನಲ್ಲಿ ಆದ್ರೂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಹಣ ಇರಿಸುತ್ತೀರಾ ಎಂಬ ಪ್ರಶ್ನೆಗೆ ಮಾತ್ರ ಉತ್ತರ ಬರಲಿಲ್ಲ.

Advertisement
Tags :
KarnatakaKarwarKIMS medical collegeMedicalEducationMinisterPoliticsSharanprakashPatilUttara kannda news
Advertisement
Next Article
Advertisement