Karwar: ಕಾರವಾರ ತಾಲೂಕು ವೈದ್ಯಾಧಿಕಾರಿ ಪುತ್ರಿ ಆತ್ಮಹತ್ಯೆ
Advertisement
ಕಾರವಾರ:- ನೇಣು ಬಿಗಿದುಕೊಂಡು ಕಾರವಾರ ತಾಲೂಕು ವೈದ್ಯಾಧೀಕಾರಿ ಸರೀಜಾ ನಾಯಕ್ ಪುತ್ರಿ ಆತ್ಮಹತ್ಯೆಮಾಡಿಕೊಂಡಿದ್ದಾರೆ.ರಕ್ಷಾ ಅರುಣ್ ನಾಯಕ್ (23) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿಯಾಗಿದ್ದು ಇವರು ಸೂರತ್ಕಲ್ ನ ಎನ್.ಐ.ಟಿ ಯಲ್ಲಿ ಬಿಟೆಕ್ ಮಾಡುತಿದ್ದರು .
ಬಿಟೆಕ್ ನಲ್ಲಿ ಒಂದು ವಿಷಯದಲ್ಲಿ ಅನುತೀರ್ಣ ಳಾಗಿದ್ದ ರಕ್ಷಾ ಗೆ ಮನೆಯಲ್ಲಿ ಪೋಷಕರು ಬುದ್ದಿವಾದ ಹೇಳಿದ್ದರು.ಇದರಿಂದ ಮನ ನೊಂದ ರಕ್ಷಾ ಕಾರವಾರದ ಕೆ.ಹೆಚ್.ಬಿ ಕಾಲೋನಿಯ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪ್ರಾಥಮಿಕ ಮಾಗಹಿತಿಯಾಗಿದೆ.
Advertisement
ಘಟನೆ ಸಂಬಂಧ ಕಾರವಾರ ನಗರ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.