Karwar ಜಿಲ್ಲಾ ಆಯುಷ್ ಆಸ್ಪತ್ರೆಯಲ್ಲಿ ಔಷಧ ಕಳ್ಳತನ! ಸಿಸಿ ಕ್ಯಾಮರಾದಲ್ಲಿ ಸೆರೆಯಾಯ್ತು ವೈದ್ಯನ ಔಷಧ ರಹಸ್ಯ
Karwar nrws 23 decmber 2024 :-ಕಾರವಾರದ(karwar) ಆಯುಷ್ಯ ಜಿಲ್ಲಾಸ್ಪತ್ರೆಯಲ್ಲಿ ವೈದ್ಯರೇ ರೋಗಿಗಳಿಗೆ ಉಚಿತವಾಗಿ ನೀಡಬೇಕಿದ್ದ ಔಷಧವನ್ನು ಕದ್ದುಕೊಂಡು ಹೋದ ಆರೋಪ ಕೇಳಿಬಂದಿದ್ದು ಸಿಸಿ ಕ್ಯಾಮರಾ ದಲ್ಲಿ ದೃಶ್ಯ ಸೆರೆಯಾಗಿದ್ದು ದೂರು ಪ್ರತಿ ದೂರುಗಳು ದಾಖಲಾಗಿದೆ.
ಸಿಸಿ ಟಿವಿ ದೃಶ್ಯದಲ್ಲಿ ಏನಿದೆ?
ದಿನಾಂಕ 10 /12/2024 ರಂದು ಡಾ. ಸಂಗಮೇಶ್
ಆಸ್ಪತ್ರೆ ಔಷಧಾಲಯದಲ್ಲಿ ಔಷಧಗಳನ್ನು ತೆಗೆದುಕೊಂಡು ತಮ್ಮ ಕೊಠಡಿಗೆ ಹೋಗುತ್ತಾರೆ. ಮತ್ತೆ ಒಂದು ಕವರ್ ನಲ್ಲಿ ಅದನ್ನು ಹಾಕಿಕೊಂಡು ಔಷಧಾಲಯದಲ್ಲಿ ಹೋಗಿ ಮತ್ತೆ ಕವರ್ ಹಿಡಿದುಕೊಂಡು ಕಚೇರಿಯಿಂದ ಹೊರಹೋಗಿರುತ್ತಾರೆ.
ಇದೇ ದಿನ ಮತ್ತೊಂದು ದೃಶ್ಯದಲ್ಲಿ ಆಯುಷ್ಯ ಅಧಿಕಾರಿ ಡಾ.ಲಲಿತಾ ರೊಂದಿಗೆ ವಾಗ್ವಾದ ಮಾಡಿ ಓಡಿ ಹೊರಹೋದ ದೃಶ್ಯವಿದೆ.
ಕಾರವಾರ(karwar) ನಗರದ ಜಿಲ್ಲಾ ಆಯುಷ್ಯ ಆಸ್ಪತ್ರೆಯ ಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಡಾ.ಸಂಗಮೇಶ್ ರವರು ಆಸ್ಪತ್ರೆಯ ಔಷಧಾಲಯದಿಂದ ಅನುಮತಿ ಪಡೆಯದೇ 20 ರಿಂದ 25 ಕೆಲವು ಚೂರ್ಣದ ಔಷಧದ ಡಬ್ಬಗಳನ್ನು ಕವರ್ ನಲ್ಲಿ ಹಾಕಿಕೊಂಡು ಹೋಗುತ್ತಿರುವ ದೃಷ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಇದನ್ನು ಆಧರಿಸಿ ಜಿಲ್ಲಾ ಆಯುಷ್ಯ ಅಧಿಕಾರಿ ಡಾ.ಲಲಿತಾ ರವರು ಇವರ ವಿರುದ್ಧ ಆಯುಷ್ಯ್ ಇಲಾಖೆ ಆಯುಕ್ತರಿಗೆ ದೂರು ನೀಡಿದ್ದಾರೆ. ಈ ದೂರಿನಲ್ಲಿ ಡಾ.ಸಂಗಮೇಶ್ ರವರು ನಡೆದುಕೊಂಡ ರೀತಿಯನ್ನು ಸಹ ವಿವರಿಸಲಾಗಿದ್ದು ಆಯುಷ್ ಆಯುಕ್ತರಿಗೆ ದೂರು ನೀಡಲಾಗಿದೆ.
ಈ ದೂರಿನನ್ವಯ ಜಿಲ್ಲಾ ಆರೋಗ್ಯಾಧಿಕಾರಿ ನೇತ್ರತ್ವದ ತಂಡ ಘಟನೆ ಬಗ್ಗೆ ತನಿಖೆ ನಡೆಸಿ ವರದಿಯನ್ನು ಜಿಲ್ಲಾಧಿಕಾರಿ ಹಾಗೂ ಸಿ.ಇಓ ಗೆ ಸಲ್ಲಿಸಿದ್ದಾರೆ.
ಇದಲ್ಲದೇ ಸಂಗಮೇಶ್ ರವರು ಔಷಧಾಲಯದಿಂದ ಔಷಧ ತೆಗೆದುಕೊಂಡು ಹೊರ ಹೋಗಿದ್ದು ಈ ಕುರಿತು ಕಾರಣ ಕೇಳಿ ನೋಟಿಸ್ ನೀಡಲಾಗಿದೆ.
ಕಾರಣ ಕೇಳಿ ನೋಟಿಸ್ ನೀಡಿದ ಪ್ರತಿ:-
ಇನ್ನು ಈ ಹಿಂದೆ ಡಾ.ಸಂಗಮೇಶ್ ರವರು ಆಯುಷ್ಯ ಆಸ್ಪತ್ರೆಯಲ್ಲಿ ಆಯುಧ ಪೂಜೆ ಹಬ್ಬದ ಸಂದರ್ಭದಲ್ಲಿ ಆಸ್ಪತ್ರೆ ಆವರಣದಲ್ಲಿ ಕೆಲವು ಕಾಲಿ ಬಾಕ್ಸ್ ಸುಡುತಿದ್ದ ಸಿಬ್ಬಂದಿ ವಿರುದ್ಧ ತಕರಾರು ತೆಗೆದು ದೂರು ನೀಡಿದ್ದರು.
ಇದರ ಬೆನ್ನಲ್ಲೇ ಪೈಲ್ಸ್ ರೋಗದ ತಪಾಸಣೆಗೆ ಬಂದ ರೋಗಿಯೊಬ್ಬರು ತಪಾಸಣೆ ಮಾಡದೇ ಸೀಲ್ ತೆರೆದ ಔಷಧ ನೀಡಿದ್ದಾರೆ , ಕೆಟ್ಟದಾಗಿ ವೈದ್ಯರು ನಡೆದುಕೊಂಡರು ಎಂದು ಆರೋಪಿಸಿ ಈ ವೈದ್ಯನ ಮೇಲೆ ರೋಗಿಯೊಬ್ಬರು ಹಲ್ಲೆ ನಡೆಸಿದ್ದರು. ಈ ಕುರಿತು ಕಾರವಾರ ನಗರ ಠಾಣೆಯಲ್ಲಿ ದೂರು ದಾಖಲಿಸಿರುವ ಡಾ.ಸಂಗಮೇಶ್ ತನ್ನ ಮೇಲೆ ಹಲ್ಲೆಗೆ ಆಯುಷ್ಯ ಅಧಿಕಾರಿಗಳೇ ಕಾರಣ ಎಂದು ದೂರು ನೀಡಿದ್ದರು.
ಇದನ್ನೂ ಓದಿ:-Karwar ಆಯುಷ್ ವೈದ್ಯನ ಕೆನ್ನೆಗೆ ಬಾರಿಸಿ ಹಲ್ಲೆ
ಇನ್ನು ವೈದ್ಯ ಸಂಗಮೇಶ್ ರವರ ಅನೌಚಿತ ವರ್ತನೆಯಿಂದಾಗಿ ಜಿಲ್ಲಾ ಆಸ್ಪತ್ರೆ ವೈದ್ಯಾಧಿಕಾರಿ ಲಲಿತಾ ರವರು ಸಹ ಮಹಿಳಾ ಠಾಣೆಯಲ್ಲಿ ದೂರು ನೀಡಿದ್ದು ದೂರು ,ಪ್ರತಿ ದೂರು ದಾಖಲಾಗಿದೆ.
ಇನ್ನು ಜಿಲ್ಲಾಧಿಕಾರಿ ಸೂಚನೆ ಮೇರೆಗೆ ಜಿಲ್ಲಾ ಆರೋಗ್ಯಾಧಿಕಾರಿಗಳ ತಂಡ ತನಿಖೆ ಕೈಗೊಂಡಿದ್ದು ಗುತ್ತಿಗೆ ವೈದ್ಯ ಡಾ.ಸಂಗಮೇಶ್ ರವರು ಔಷಧ ಕೊಂಡೊಯ್ದ ಬಗ್ಗೆ ವರದಿ ನೀಡಿದೆ. ಈ ವರದಿ ಇದೀಗ ಜಿಲ್ಲಾಧಿಕಾರಿ ಹಾಗೂ ಸಿ.ಇ.ಓ ಕೈ ಸೇರಿದೆ.ಜೊತೆಗೆ ಆಯುಷ್ಯ ಇಲಾಖೆಯಿಂದ ಡಾ.ಸಂಗಮೇಶ್ ರವರ ಕರ್ತವ್ಯ ಲೋಪದ ಕುರಿತು ನೋಟಿಸ್ ಜಾರಿ ಮಾಡಿದೆ. ಇನ್ನು ತಪ್ಪಿತಸ್ಥ ವೈದ್ಯರ ಕುರಿತು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಸಹ ಆಯುಷ್ ಆಯುಕ್ತರಿಗೆ ಹಿಂಬರಹ ನೀಡುವುದಾಗಿ ತಿಳಿಸಿದ್ದಾರೆ.
ಇನ್ನು ನಿಯಮದ ಪ್ರಕಾರ ಇಲಾಖೆ ಸಂಬಂಧಿಸಿದ ಔಷಧಗಳನ್ನು ಹೊರಗೆ ಕೊಂಡೊಯ್ಯುವಂತಿಲ್ಲ. ಹೀಗಿದ್ದರೂ ಡಾ.ಸಂಗಮೇಶ್ ಔಷಧವನ್ನು ಕೊಂಡೊಯ್ದಿರುವುದು ಅಪರಾಧವಾಗಿರುತ್ತದೆ.
ಒಟ್ಟಿನಲ್ಲಿ ಬಡ ರೋಗಿಗಳಿಗೆ ಉಚಿತವಾಗಿ ಔಷಧ ಸಿಗಬೇಕು ಎಂಬ ಕಾರಣದಿಂದ ಸರ್ಕಾರ ಉಚಿತ ಔಷಧ ನೀಡುತ್ತಿದೆ.ಆದರೇ ಈ ಔಷಧಗಳು ಉಪಯೋಗ ಆಗಬೇಕಾದಲ್ಲಿ ಉಪಯೋಗವಾಗದೇ ದುರುಪಯೋಗ ಆಗುತಿದ್ದು ಕಾರವಾರದ ಆಯುಷ್ಯ್ ಇಲಾಖೆ ಈ ಘಟನೆ ಬಹಿರಂಗ ಪಡಿಸಿದೆ. ಆಯುಷ್ ಇಲಾಖೆ ಯಾವ ಕ್ರಮ ಕೈಗೊಳ್ಳಲಿದೆ ಎಂದು ಕಾದು ನೋಡಬೇಕಿದೆ.