Bjp ನಾಯಕರ ಮಾತಿನಿಂದ CM ಪತ್ನಿಗೆ ಕಿರಿಕಿರಿ ಕೈಮುಗಿದು ಕೇಳ್ತೀನಿ ಎಂದ ಮಂಕಾಳು!
ಬಿಜೆಪಿ ನಾಯಕರ ಮಾತಿನಿಂದ ಸಿಎಂ ಪತ್ನಿ ನೊಂದಿದ್ದಾರೆ- ಮಂಕಾಳು ವೈದ್ಯ
ಕಾರವಾರ:- ಬಿಜೆಪಿ ನಾಯಕರ ಮಾತಿನಿಂದ ಸಿಎಂ ಪತ್ನಿ ನೊಂದಿದ್ದಾರೆ, ನೊಂದು ಸೈಟ್ ಗಳು ನನಗೆ ಬೇಡವೆ ಬೇಡ ಅಂತಾ ಹಿಂತಿರುಗಿಸಿದ್ದಾರೆ ಎಂದು ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಹೇಳಿದ್ದಾರೆ.
ಇಂದು ಕಾರವಾರದ ಕೆಡಿಪಿ ಸಭೆಯಲ್ಲಿ ಭಾಗವಹಿಸಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು ಸಿಎಂ ಸಿದ್ದರಾಮಯ್ಯ ಯಾವುದೇ ತಪ್ಪು ಮಾಡಿಲ್ಲ, ಸಿಎಂ ಆಗಿ ಯಾವುದೇ ಆಸ್ತಿ ಮಾಡಿಲ್ಲ, ಸಿಎಂ ಪತ್ನಿಗೆ ಆಸ್ತಿಗಿಂತಲೂ ರಾಜ್ಯದ ಹಿತ ಮುಖ್ಯ .
ಇದನ್ನೂ ಓದಿ:-Karwar ನಗರಸಭೆಯಲ್ಲೊಂದು NIGHT SHELTER ಏನಿದು ಗೊತ್ತಾ? Video ನೋಡಿ
ರಾಜಕೀಯ ಟೀಕೆ ಗಳಿಂದ ನೊಂದು ಮುಡಾ (Muda) ಸೈಟ್ ಗಳನ್ನ ಹಿಂತಿರುಗಿಸಿದ್ದಾರೆ.ಕಳೆದ 40 ವರ್ಷಗಳಿಂದ ಸಿಎಂ ಪತ್ನಿ ಸರಳವಾಗಿ ಜೀವನ ಮಾಡಿದ್ದಾರೆ. ಸಿಎಂ ಪತ್ನಿ ಅಂತಾ ಯಾವತ್ತೂ ಅಧಿಕಾರ ದುರುಪಯೋಗ ಮಾಡಿಕೊಂಡಿಲ್ಲ, ಇಂದು ಅವರು ಸೈಟ್ ರಿಟರ್ನ್ ಮಾಡಿದನ್ನು ನೋಡಿ ನಂಗೆ ದುಃಖ ಆಯ್ತು.
ಬಿಜೆಪಿ ಯವರಿಗೆ ಕೈ ಮುಗಿದಿ ಕೇಳಿ ಕೊಳ್ತೆನಿ,ಈಗ ಮುಡಾದ 14 ಸೈಟ್ ಗಳನ್ನ ಹಿಂತಿರುಗಿಸಿ ಆಗಿದೆ
ಈಗ್ಲಾದ್ರೂ ನೆಮ್ಮದಿಯಿಂದ ರಾಜ್ಯದ ಅಭಿವೃದ್ಧಿ ಮಾಡಲು ಬಿಡಿ,ಚುನಾವಣೆ ಬಂದಾಗ ರಾಜಕೀಯ ಮಾಡೋಣ ಇದನ್ನ ಇಲ್ಲಿಗೆ ನಿಲ್ಲಿಸಿ ಎಂದ ಮೀನುಗಾರಿಕಾ ಸಚಿವ ಮಂಕಾಳು ವೈದ್ಯ ಹೇಳಿದರು.