Karnataka|ಕೇದಾರನಾಥ ಧಾಮದಲ್ಲಿ ಮೊಳಗಿದ ಶರಾವತಿ ಪಂಪ್ ಸ್ಟೋರೇಜ್ ಯೋಜನೆಗೆ ವಿರೋಧ ಧ್ವನಿ
Karnataka|ಕೇದಾರನಾಥ ಧಾಮದಲ್ಲಿ ಮೊಳಗಿದ ಶರಾವತಿ ಪಂಪ್ ಸ್ಟೋರೇಜ್ ಯೋಜನೆಗೆ ವಿರೋಧ ಧ್ವನಿ
ಕಾರವಾರ (21 october 2025):-ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಶರಾವತಿ(sharavathi) ಪಂಪ್ ಸ್ಟೋರೇಜ್ ಯೋಜನೆ ಯನ್ನು ವಿರೋಧಿಸಿ ಪವಿತ್ರ ಯಾತ್ರಾ ಕ್ಷೇತ್ರವಾದ ಕೇದಾರನಾಥ ಧಾಮದಲ್ಲಿ(kedaranath ) ಈ ಯೋಜನೆ ವಿರೋಧಿಸಿ ಪ್ಲೇ ಕಾರ್ಡ ಹುಡಿದು ,ಯೋಜನೆ ಜಾರಿಯಾಗದಂತೆ ದೇವರಲ್ಲಿ ಕೇಳಿಕೊಳ್ಳಲಾಯಿತು.
Sharavathi :ಶರಾವತಿ ಪಂಪ್ ಸ್ಟೋರೇಜ್ ಜಲವಿದ್ಯುತ್ ಯೋಜನೆ ಅನುಷ್ಟಾನಕ್ಕೆ MOEFCC ಯಿಂದ ತಿರಸ್ಕಾರ
ಕಾರವಾರ ನಗರದ ಅಭಿಷೇಕ ಕಳಸ ಮತ್ತು ಹೊನ್ನಾವರದ ವಿನಾಯಕ ನಾಯ್ಕ್ ಅವರು ಧಾರ್ಮಿಕ ಹಾಗೂ ಸಮಾಜಮುಖಿ ಮನೋಭಾವದಿಂದ ಉತ್ತರಾಖಂಡದ ಪ್ರಸಿದ್ಧ ಕೇದಾರನಾಥ ದೇವಾಲಯಕ್ಕೆ ಭಕ್ತಿ ಯಾತ್ರೆಗೆ ತೆರಳಿದರು. ದೇವಾಲಯದ ಪವಿತ್ರ ವಾತಾವರಣದಲ್ಲಿ ಭಕ್ತಿಯಿಂದ ಪೂಜೆ-ಪ್ರಾರ್ಥನೆ ಸಲ್ಲಿಸುವ ಜೊತೆಗೆ ಶರಾವತಿ ಪಂಪ್ ಸ್ಟೋರೇಜ್ ಯೋಜನೆ ಜಾರಿಯಾಗಬಾರದು ಎಂದು ವಿಶೇಷ ಪೂಜೆ ಅರ್ಪಿಸಿದರು.
Sharavathi |ಶರಾವತಿ ಭೂಗತ ಜಲವಿದ್ಯುತ್ ಯೋಜನೆ ಕುರಿತ ಸಾರ್ವಜನಿಕ ಅಹವಾಲು ಸ್ವೀಕಾರ-ಸಭೆಯಲ್ಲಿ ನಡೆದಿದ್ದು ಏನು?
ಇದಲ್ಲದೇ ದೇವಾಲಯದ ಹೊರಗೆ ಪ್ಲೇಕಾರ್ಡ ಹಿಡಿದು ಶರಾವತಿ ಪಂಪ್ ಸ್ಟೋರೇಜ್ ಯೋಜನೆ ಜಾರಿಯಾಗಬಾರದು,ಇದರಿಂದ ಪರಿಸರಕ್ಕೆ ಹಾನಿಯಾಗುತಿದ್ದು ಈ ಯೋಜನೆ ಜಾರಿಗೆ ವಿರೋಧ ವ್ಯಕ್ತಪಡಿಸಿದರು.