ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Karwar :ಶಾಸಕ ದಿನಕರ್ ಶಟ್ಟಿ ಲಾಟ್ರಿ ತಾಗಿ ಗೆದ್ದವರಲ್ಲ,ರಾಜಕೀಯಯಕ್ಕೆ ಬಂದು ಮಗನನ್ನು ಕಳೆದುಕೊಂಡರು- ಪ್ರಮೋದ್ ಹೆಗಡೆ.

MLA Dinkar Shatti is not a lottery winner, he entered politics and lost his son - Pramod Hegde.Karwar 16 December 2024:- ಮಾಧ್ಯಮದಲ್ಲಿ ಕುಮಟಾ ಶಾಸಕ ದಿನಕರ್ ಶಟ್ಟಿ  (mla denkar shatty )ರವರ ಕುರಿತು ಅಪಪ್ರಚಾರದ ಸುದ್ದಿಗಳು ಹರಿದಾಡಿದೆ. ದಿನಕರ್ ಶಟ್ಟಿ ವಿರುದ್ಧ ಪಿತೂರಿ ಮಾಡಲಾಗಿದೆ ,ಇದು ಕಪೋಲೋ ಕಲ್ಪಿತವಾಗಿ ಮಾಡಿದ ಸುದ್ದಿ , ರಾಜಕಾರಣಕ್ಕೆ ತೇಜೋವಧೆ ಮಾಡಿದ ಸುದ್ದಿ ಎಂದು ಹಿರಿಯ ಬಿಜೆಪಿ ಮುಖಂಡ ಹಾಗೂ 40 ವರ್ಷದಿಂದ ರಾಜಕೀಯದಿಂದ ಜೊತೆಯಾಗಿದ್ದ ಪ್ರಮೋದ್ ಹೆಗಡೆಯವರು ಹೇಳಿದರು.
10:31 PM Dec 16, 2024 IST | ಶುಭಸಾಗರ್

Karwar 16 December 2024:- ಮಾಧ್ಯಮದಲ್ಲಿ ಕುಮಟಾ ಶಾಸಕ ದಿನಕರ್ ಶಟ್ಟಿ  (mla denkar shatty )ರವರ ಕುರಿತು ಅಪಪ್ರಚಾರದ ಸುದ್ದಿಗಳು ಹರಿದಾಡಿದೆ. ದಿನಕರ್ ಶಟ್ಟಿ ವಿರುದ್ಧ ಪಿತೂರಿ ಮಾಡಲಾಗಿದೆ ,ಇದು ಕಪೋಲೋ ಕಲ್ಪಿತವಾಗಿ ಮಾಡಿದ ಸುದ್ದಿ , ರಾಜಕಾರಣಕ್ಕೆ ತೇಜೋವಧೆ ಮಾಡಿದ ಸುದ್ದಿ ಎಂದು ಹಿರಿಯ ಬಿಜೆಪಿ ಮುಖಂಡ ಹಾಗೂ 40 ವರ್ಷದಿಂದ ರಾಜಕೀಯದಿಂದ ಜೊತೆಯಾಗಿದ್ದ ಪ್ರಮೋದ್ ಹೆಗಡೆಯವರು ಹೇಳಿದರು.

Advertisement

ಇಂದು ಕಾರವಾರದ (karwar) ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ನನಗೀಗ 72 ವರ್ಷ ಜನತಾದಳ ದಿಂದ 40 ವರ್ಷಗಳ ಕಾಲ ದಿನಕರ್ ಶಟ್ಟಿ ಜೊತೆ ಗೆಳತನದಲ್ಲಿ ಇದ್ದೇನೆ. ಅವರ ಗುಣದಬಗ್ಗೆ ನನಗೆ ಅರಿವಿದೆ.

ಅವರು ಲಾಟ್ರಿ ತಾಗಿ ಗೆದ್ದವರಲ್ಲ.ನನ್ನ ಜೊತೆ ಪದಾದಿಕಾರಿಯಾಗಿ ಕೆಲಸ ಮಾಡಿದವರು.
ದುಃಖ ಮತ್ತು ಕಷ್ಟದಿಂದ ಶಾಸಕರಾದವರು.

ಇದನ್ನೂ ಓದಿ:-KUMTA -ವಿದ್ಯಾರ್ಥಿಗಳ ಮೇಲೆ ಹಲ್ಲೆಗೆ ಮುಂದಾದ KSRTC ನಿರ್ವಾಹಕ! ಮುಂದೇನಾಯ್ತು ?

Advertisement

ರಾಜಕೀಯಕ್ಕೆ ಬಂದು ಮಗನನ್ನೇ ಕಳೆದುಕೊಂಡವರು.
ಜಾತಿ ಬಲದಿಂದ ಬಂದವರಲ್ಲ. ಜಾತಿಯೇ ಇಲ್ಲದ ವ್ಯಕ್ತಿ ಮೂರು ಸಲ ಗೆದ್ದುಬಂದರು.ಚಾರಿತ್ಯ ವಧೆ ಮಾಡಿ ,ಅಪಮಾನ ಮಾಡಿ ಇಳಿಸುವ ಹುನ್ನಾರ ಇರಬಹುದು.ನಿನ್ನೆ ಕೇಳಿದ ದ್ವನಿ ಪಿತೂರಿ ಇರಬಹುದು. ಇದು ರಾಜಕಾರಣಕ್ಕಾಗಿ ಮಾಡಿದ ಘಟನೆ.
ಕಪೋ ಕಲ್ಪಿತವಾಗಿ ಮಾಡಿದ ಸುದ್ದಿ , ರಾಜಕಾರಣಕ್ಕೆ ತೇಜೋವಧೆ ಮಾಡಿದ ಸುದ್ದಿ ನಾನು ನೊಂದುಕೊಂಡಿದ್ದೇನೆ ಎಂದು ಹಿರಿಯ ರಾಜಕೀಯ ಮುಖಂಡ ಪ್ರಮೋದ್ ಹೆಗಡೆ ಹೇಳಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಹಿರಿಯ ವಕೀಲ ಹಾಗೂ ಬಿಜೆಪಿ ಮುಖಂಡ ನಾಗರಾಜ್ ನಾಯ್ಕ ರವರು
ಅವರನ್ನು ಟೀಕಿಸುವ ಹಕ್ಕು ಮಾಧ್ಯಮ ಕ್ಕೂ ಜನಕ್ಕೂ ಇದೆ ,ಆದರೇ ವಯಕ್ತಿಕ ಜೀವನ ತೇಜೋವಧೆ ಸಲ್ಲದು
ಕಳ್ಳತನದ ಘಟನೆ ನ.29 ಕ್ಕೆ ಆಗಿದೆ. ನ.30 ತಾರೀಕು ಅಹ್ಮದಾ ಬಾದ್ ಗೆ ಅವರು ಹೋಗಿದ್ದಾರೆ.

2/11/2024 ಕ್ಕೆ ನಂತರ ಠಾಣೆಯಲ್ಲಿ ದೂರು ನೀಡಿದ್ದರು.ನಂತರ ಮೂರರಂದು ಸುದ್ದಿ ಮಾಡುತ್ತಾರೆ.
ಮಹಿಳೆಯ ಆಡಿಯೋ ತೀರಾ ಅಶ್ಲೀಲವಾಗಿ ಮಾತನಾಡಿ ಆಪಾದನೆಯಾಗಿದೆ . AI ನಲ್ಲಿ ಅಡಿಯೋ ಮಾಡಿರಬಹುದು ಅಥವಾ ಯಾರೋ ಮಹಿಳೆಯಿಂದ ಹೇಳಿಸಿ ಮಾಡಿ ತೇಜೋವಧೆಗೆ ಈ ಆಡಿಯೋ ಬಳಸಲಾಗಿದೆ. ಈ ಬಗ್ಗೆ ತನಿಖೆ ನಂತರ ತಿಳಿಯಲಿದೆ.

ಆ ಮಹಿಳೆ ಯಾಕೆ ದೂರು ಕೊಟ್ಟಿಲ್ಲ, ಇಲ್ಲಿ ಶಾಸಕರ ತೇಜೋವಧೆ ಎದ್ದು ಕಾಣುತ್ತದೆ ಎಂದು ಆಪಾಧಿಸಿದರು.

Advertisement
Tags :
KarnatakaKarwarKumtaKumta ConstituencyMla denkar shatty
Advertisement
Next Article
Advertisement