Mundgod | ಎರಡು ಮಳಿಗೆಗಳಿಗೆ ಬೆಂಕಿ |50 ಲಕ್ಷಕ್ಕೂ ಹೆಚ್ಚು ಹಾನಿ
Mundgod | ಎರಡು ಮಳಿಗೆಗಳಿಗೆ ಬೆಂಕಿ |50 ಲಕ್ಷಕ್ಕೂ ಹೆಚ್ಚು ಹಾನಿ
ಕಾರವಾರ :- ಶಾರ್ಟ ಸರ್ಕ್ಯೂಟ್ ನಿಂದ ಪೀಟೋಪಕರಣ ಮಳಿಗೆಗೆ ಬೆಂಕಿ ಹೊತ್ತಿದ ಪರಿಣಾಮ
ಅಪಾರ ಪ್ರಮಾಣದ ಬೆಲೆಬಾಳುವ ಕಟ್ಟಿಗೆ ತುಂಡು, ಪೀಠೋಪಕರಣ ಹಾಗೂ ಕಾರು ಬೆಂಕಿಗಾಹುತಿಯಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಿನ (mundgod) ಕಿಲ್ಲೆ ಓಣಿಯ ಖಾದರ್ಲಿಂಕ್ ಬಳಿ ನಡೆದಿದೆ.
ಇಂದು ಮುಂಜಾನೆ ಹೊತ್ತಿದ ಬೆಂಕಿ ಅಕ್ಕ ಪಕ್ಕದ ಮಳಿಗೆಗಳಿಗೂ ಆವರಿಸಿದ್ದು ಅಂದಾಜು ಐವತ್ತು ಲಕ್ಷದಷ್ಟು ಹಾನಿ ಸಂಭವಿಸಿರುವ ಅಂದಾಜಿಸಲಾಗಿದೆ.

ಕಿಲ್ಲೆ ಓಣಿಯ ಯೂನುಸ್ ಹೊಸಕೊಪ್ಪ ಎಂಬುವವರಿಗೆ ಸೇರಿದ ಪೀಟೋಪಕರಣದ ಮಳಿಗೆ ಹಾಗೂ ಅಯಾನ್ ಹಾನಗಲ್ ಎಂಬುವವರಿಗೆ ಸೇರಿದ ಹಾರ್ಡವೇರ್ ಮಳಿಗೆಗೆ ದೊಡ್ಡ ಪ್ರಮಾಣದಲ್ಲಿ ಬೆಂಕಿ ತಗಲಿ ಹಾನಿಯಾಗಿದೆ.

ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಿದ್ದು,ದೊಡ್ಡ ಪ್ರಮಾಣದ ಅನಾಹುತ ತಪ್ಪಿದಲಾಗಿದೆ. ಸ್ಥಳಕ್ಕೆ ಕಂದಾಯ ಅಧಿಕಾರಿಗಳು ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಘಟನೆ ಸಂಬಂಧ ಮುಂಡಗೋಡು ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.