Karwar :ಕಾರಿನಮೇಲೆ ಬಿದ್ದ ಮರ ಮಲ್ಲಾಪುರದ ಮಹಿಳೆ ಸಾವು
Karwar :ಕಾರಿನಮೇಲೆ ಬಿದ್ದ ಮರ ಮಲ್ಲಾಪುರದ ಮಹಿಳೆ ಸಾವು
ಕಾರವಾರ :- ಅಬ್ಬರದ ಮಳೆಗೆ (rain)ಮರ ಉರುಳಿಬಿದ್ದು ಮಹಿಳೆ ಸಾವುಕಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದ(karwar) ಪಿಕಳೆ ರಸ್ತೆಯ ಪಿಕಳೆ ಆಸ್ಪತ್ರೆ ಮುಂಭಾಗ ನಡೆದಿದೆ.
ಮಲ್ಲಾಪುರ ಮೂಲದ ಲಕ್ಷ್ಮೀ ನಾರಾಯಣ ಮಮ್ತೆಕರ (55) ಮೃತ ದುರ್ದೈವಿಯಾಗಿದ್ದಾಳೆ.,ಮಲ್ಲಾಪುರದಿಂದ ಕಾರವಾರಕ್ಕೆ ಬಂದಿದ್ದ ಕುಟುಂಬ ಒಂದು ತಿಂಗಳ ಗರ್ಭಿಣಿಯಾಗಿದ್ದ ಸೊಸೆ ಸುನೀತಾ ಳನ್ನು ಪಿಕಳೆ ಆಸ್ಪತ್ರೆಗೆ ಕರೆದುಕೊಂಡ ಬಂದಿದ್ದ ಲಕ್ಷ್ಮೀ ರವರು ಸೊಸೆ ಯನ್ನು ಆಸ್ಪತ್ರೆಗೆ ಕಳುಹಿಸಿ ಕಾರಿನಲ್ಲಿ ಕುಳಿತಿದ್ದರು.
ಇದನ್ನೂ ಓದಿ:-Uttara kannada :ಉತ್ತರ ಕನ್ನಡ ಜಿಲ್ಲೆಯಲ್ಲಿ ಅಬ್ಬರದ ಮಳೆ ಹಲವುಕಡೆ ಹಾನಿ
ಈ ವೇಳೆ ಆಸ್ಪತ್ರೆಯ ಪಕ್ಕದಲ್ಲೇ ಇದ್ದ ಮರ ಬುಡ ಸಮೇತ ಬಿದ್ದು ಕಾರು ಪಾರ್ಕಿಂಗ್ ಮಾಡಿದ್ದ ಸ್ಥಳದಲ್ಲಿ ಬಿದ್ದಿದ್ದು ಈ ವೇಳೆ ಬೃಹತ್ ಗಾತ್ರದ ಮರದ ಟೊಂಗೆ ಕಾರಿನಮೇಲೆ ಬಿದ್ದು ಜಕಂ ಆಗಿದೆ.
ಕಾರಿನಲ್ಲೇ ಸಿಲುಕಿದ ಮಹಿಳೆಗೆ ಕಾರಿನ ಮೇಲ್ಭಾಗದ ಚಾವಣಿ ದೇಹದ ಅರ್ಧ ಭಾಗದ ವರೆಗೂ ಸಿಲುಕಿ ರಕ್ತಸ್ರಾವವಾಗಿ ಉಸಿರುಗಟ್ಟಿದೆ. ತಕ್ಷಣ ಸ್ಥಳೀಯರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಮರದ ಟೊಂಗೆ ಕತ್ತರಿಸಿ ಪೋಕ್ ಲೈನ್ ಮೂಲಕ ಮರ ಸರಿಸಿ ಕಾರಿನಲ್ಲಿದ್ದ ಲಕ್ಷ್ಮೀ ರವರನ್ನು ರಕ್ಷಿಸುವ ಪ್ರಯತ್ನ ನಡೆಸಿದರೂ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮೃತಪಟ್ಟಿದ್ದಾರೆ.