Karwar: ಕೊಡಸಳ್ಳಿಯಲ್ಲಿ ಭೂ ಕುಸಿತ ಹತ್ತು ದಿನದ ನಂತರ ಸಂಚಾರಕ್ಕೆ ಮುಕ್ತ
Karwar: ಕೊಡಸಳ್ಳಿಯಲ್ಲಿ ಭೂ ಕುಸಿತ ಹತ್ತು ದಿನದ ನಂತರ ಸಂಚಾರಕ್ಕೆ ಮುಕ್ತ
ಕಾರವಾರ :-ಭೂಕುಸಿತದಿಂದ ಹತ್ತು ದಿನಗಳಿಂದ ಸ್ಥಗಿತಗೊಂಡಿದ್ದ ಕೊಡಸಳ್ಳಿ ಭಾಗದ ಬಾಳೆಮನೆಯ ಕೆಪಿಸಿ ರಸ್ತೆಯಲ್ಲಿ ಲಘು ವಾಹನಗಳ ಸಂಚಾರ ಪ್ರಾರಂಭವಾಗಿದೆ. ಜುಲೈ 2ರ ರಾತ್ರಿ ಉಂಟಾದ ಭೂಕುಸಿತದಿಂದ ರಸ್ತೆ ಮುಚ್ಚಿಹೋಗಿತ್ತು. ಕೆಪಿಸಿ ಸಂಸ್ಥೆಯು ಹತ್ತು ದಿನಗಳ ಕಾರ್ಯಾಚರಣೆ ನಡೆಸಿ ಮಣ್ಣು ತೆರವುಗೊಳಿಸಿ ರಸ್ತೆಯನ್ನು ಸಿದ್ಧಪಡಿಸಿದೆ. ಇದು ಕೆಪಿಸಿ ಸಿಬ್ಬಂದಿ ಮತ್ತು ಸುಳಗೇರಿ, ಗ್ರಾಮಸ್ಥರಿಗೆ ಅನುಕೂಲವಾಗಲಿದೆ. ಆದಾಗ್ಯೂ, ಭೂಕುಸಿತ ಮರುಕಳಿಸುವ ಸಾಧ್ಯತೆಯ ಬಗ್ಗೆ ತಜ್ಞರು ಎಚ್ಚರಿಕೆ ನೀಡಿದ್ದಾರೆ.
ಹಿಂದೆ ಏನಾಗಿತ್ತು?
ಉತ್ತರ ಕನ್ನಡ (uttara kannada) ಜಿಲ್ಲೆಯಲ್ಲಿ ಅಬ್ಬರಿಸಿದ ಮಳೆಯಿಂದಾಗಿ(rain ) ಕಾರವಾರ ತಾಲೂಕಿನ ಕದ್ರಾ ಬಳಿಯ ಬಾಳೆ ಮನೆ ಗ್ರಾಮದ ಬಳಿ ದೊಡ್ಡ ಪ್ರಮಾಣದ ಭೂ ಕುಸಿತವಾಗಿತ್ತು(landslide)
ಇದರಿಂದಾಗಿ ಕದ್ರಾ (kadra) ಭಾಗದ ಬಾಳೆಮನೆ,ಸುಳಗೇರಿ ಕೊಡಸಳ್ಳಿ ಸಂಪರ್ಕ ರಸ್ತೆ ಕಡಿತವಾಗಿತ್ತು. ಕದ್ರಾ ದಿಂದ ಕೊಡಸಳ್ಳಿ ಡ್ಯಾಮ್ ಸಂಪರ್ಕಿಸುವ ರಸ್ತೆ ಭೂ ಕುಸಿತವಾದ್ದರಿಂದ ಕೊಡಸಳ್ಳಿ ಜಲ ವಿದ್ಯುತ್ ಗಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಕೆಪಿಸಿ ಸಿಬ್ಬಂದಿಗಳಿಗೆ ತೆರಳಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದ್ದು ಭೂ ವಿಜ್ಞಾನಿಗಳು ಈ ಭಾಗದಲ್ಲಿ ಅಧ್ಯಯನ ನಡೆಸಿ ಬಿದ್ದ ಮಣ್ಣನ್ನು ತೆರವುಗೊಳಿಸದಂತೆ ಸೂಚಿಸಿತ್ತು.
ಇದನ್ನೂ ಓದಿ:-kodasalli landslides : ಮೈ ಜುಮ್ಮ್ ಎನ್ನಿಸುವ ಭೂ ಕುಸಿತದ ವಿಡಿಯೋ ನೋಡಿ
ಇದರಿಂದಾಗಿ ವಿದ್ಯುತ್ ಗಾರಕ್ಕೆ ಹಾಗೂ ಸುತ್ತಮುತ್ತಲ ಗ್ರಾಮಕ್ಕೆ ತೆರಳಲು ಸಾಧ್ಯವಾಗುತ್ತಿರಲಿಲ್ಲ. ಆದ್ರೆ ಇದೀಗ ಮಣ್ಣು ತೆರವು ಮಾಡಿದ್ದರಿಂದ ಲಘು ವಾಹನಗಳು ತೆರಳಲು ಸಾಧ್ಯವಾಗಿದೆ.