Karwar news: ಈ ಗಣೇಶನಿಗೆ ಮುಸ್ಲೀಮರೇ ಪೂಜೆ-ಕಾರವಾರದಲ್ಲೊಂದು ಕೋಮು ಸೌಹಾರ್ಧ ಸಾರುವ ಗಣಪ
Karwar news: ಈ ಗಣೇಶನಿಗೆ ಮುಸ್ಲೀಮರೇ ಪೂಜೆ-ಕಾರವಾರದಲ್ಲೊಂದು ಕೋಮು ಸೌಹಾರ್ಧ ಸಾರುವ ಗಣಪ
ಕಾರವಾರ :- ಧರ್ಮ ,ಜಾತಿ ಎಂದು ಹೊಡೆದಾಡಿಕೊಳ್ಳುವ ಇಂದಿನ ದಿನದಲ್ಲಿ ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ (karwar) ಮುಸ್ಲೀಂ ಜನಾಂಗದವರೇ ಗಣೇಶ ಮೂರ್ತಿ ಪ್ರತಿಷ್ಟಾಪಿಸಿ ಕಳೆದ 25 ವರ್ಷದಿಂದ ಪೂಜಿಸುತ್ತಾ ಬಂದಿದ್ದು ಕೋಮು ಸೌಹಾರ್ಧತೆಗೆ ಮಾದರಿಯಾಗಿದ್ದಾರೆ.
ಹೌದು ಉತ್ತರ ಕನ್ನಡ ಜಿಲ್ಲೆ (uttarakannada) ಕೋಮು ಸೌಹಾರ್ದತೆಗೆ ಹೆಸರಾದ ಜಿಲ್ಲೆ.ಕರಾವಳಿಯಲ್ಲಿ ಕೆಲವು ಕಡೆ ಕೋಮು ದ್ವೇಷ ಇದ್ದಿದ್ದನ್ನು ಹೊರತುಪಡಿಸಿದರೇ ಇನ್ನುಳಿದ ಕಡೆ ಕೋಮು ಸೌಹಾರ್ದತೆ ಕಾಪಾಡುವಲ್ಲಿ ಹಿಂದು ಮುಸ್ಲಿಂ ಧರ್ಮದ ಜನ ಮುಂದೆ ಇದ್ದಾರೆ.
ಇದನ್ನೂ ಓದಿ:-Karwar|ಊಟ ಮಾಡುವಾಗ ಗಂಟಲಲ್ಲಿ ಅನ್ನ ಸಿಲುಕಿ ಯುವಕ ಸಾವು
ಇದಕ್ಕೆ ಉದಾಹರಣೆ ಎನ್ನುವಂತೆ ಕಳೆದ 25ವರ್ಷದಿಂದ ಕಾರವಾರದ ಕೋಣೆ ವಾಡದಲ್ಲಿ ಹಿಂದು ಮತ್ತು ಮುಸ್ಲಿಮ್ ಧರ್ಮಿಯರು ಒಂದಾಗಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸುತ್ತಿದ್ದಾರೆ. ಪ್ರತಿ ವರ್ಷ ಒಂಬತ್ತು ದಿನಗಳಕಾಲ ಪೂಜಿಸಿ ವಿಸರ್ಜನೆ ಮಾಡುತ್ತಾರೆ, ಗಣೇಶೋತ್ಸವ ಸಮಿತಿಗೆ ಇಲ್ಲಿ ಮುಸ್ಲಿಂ ಸಮೂದಾಯದವರೇ ಪದಾಧಿಕಾರಿಗಳು .ಈ ಬಡಾವಣೆಯಲ್ಲಿ ಯಾವುದೆ ಬೇದಬಾವ ಇಲ್ಲ.ಒಂದು ದಿನ ಮುಸ್ಲಿಂ ಯುವಕರ ತಂಡದವರಿಂದ ಪೂಜೆ ನೆರವೇರಿದರೇ ಇನ್ನೊಂದು ದಿನ ಹಿಂದು ಯುವಕರ ತಂಡದಿಂದ ಪೂಜೆ ನೆರವೇರುತ್ತದೆ.ಹಿಂದು ಮುಸ್ಲೀಂ ಕೇವಲ ಧರ್ಮ ಮಾತ್ರ ಆದ್ರೆ ತಾವೆಲ್ಲರು ಮನುಷ್ಯರು ಎಂದು ಸಾರುತ್ತಿದ್ದಾರೆ ಕೋಣೆವಾಡದ ಜನ ಎಲ್ಲಾ ಹಬ್ಬವನ್ನು ಒಟ್ಟಿಗೇ ಆಚರಿಸುವ ಮೂಲಕ ಸೌಹಾರ್ಥತೆ ಮೆರೆಯುತಿದ್ದಾರೆ.
ನಮ್ಮಲ್ಲಿ ಹಿಂದೂ ,ಮುಸ್ಲಿಂ ಎಂಬ ಬೇಧಬಾವ ಇಲ್ಲ ,ಈವರೆಗೂ ಧರ್ಮದ ವಿಷಯಕ್ಕೆ ಬಡಿದಾಡಿಕೊಂಡಿಲ್ಲ, ನಾವೆಲ್ಲರೂ ಒಂದೇ ಎಂದು ಬದುಕುತಿದ್ದೇವೆ ಎಂಬುದು ಗಣೇಶ ಉತ್ಸವದ ಉಸ್ತುವಾರಿ ಹೊತ್ತಿರುವ ಬಾಬು ಶೇಖ್ ರವರ ಮಾತು.
Karwar: ಹಬ್ಬದ ಖುಷಿಯನ್ನು ಉಡುಗೊರೆ ಜೊತೆ ಉಳಿತಾಯ ಮಾಡಿ ಆನಂದಿಸಿ ಜಿಲಾನಿ ಹೋಲ್ ಸೇಲ್ ಮಾರ್ಟ ನಲ್ಲಿ ಬಂಪರ್ ಆಫರ್
ಇನ್ನು ಗಣೇಶ ಹಬ್ಬ ಮತ್ತು ಈದ್ ಮಿಲಾದ್ ಹಬ್ಬ ಒಂದೆ ತಿಂಗಳಲ್ಲಿ ಆಚರಣೆಗೆ ಬರೋದ್ರಿಂದ ಈದ್ ಮಿಲಾದ್ ಹಬ್ಬದ ಉಸ್ತುವಾರಿ ಕಮಿಟಿಗೆ ಹಿಂದು ಧರ್ಮಿಯರು ಪದಾಧಿಕಾರಿಗಳು, ಹೀಗೆ ಸಾಮರಸ್ಯದಿಂದ ಇಲ್ಲಿ ಈದ್ ಮಿಲಾದ್ ಹಬ್ಬ ಮತ್ತು ಗಣೇಶೋತ್ಸವ ವನ್ನ ಆಚರಣೆ ಮಾಡುತ್ತಾರೆ.

ನಮ್ಮ ಬಡಾವಣೆಯಲ್ಲಿ ಕಳೆದ 25ವರ್ಷದಲ್ಲಿ ಒಂದೆ ಒಂದು ಗಲಾಟೆ ಆದ ಬಗ್ಗೆಯೂ ಉದಾಹರಣೆ ಇಲ್ಲ, ಯಾರೇ ಕೂಡಾ ಇಲ್ಲಿ ಕೋಮು ವೈಷ್ಯಮ್ಯ ಹರಡಲು ಬಂದ್ರೆ ಅವರಿಗೆ ತಾವೆಲ್ಲ ಒಂದು ಎನ್ನುವ ಮೂಲಕ ಬುದ್ದಿ ಹೇಳುತ್ತೇವೆ ಎನ್ನುತ್ತಾರೆ ಇಲ್ಲಿನ ಜನ.ಕೋಣೆವಾಡ ಕಾರವಾರ ನಗರಸಭೆ ವ್ಯಾಪ್ತಿಯಲ್ಲಿ ಬರುತ್ತದೆ ,ಇಲ್ಲಿ ಹಿಂದು ಮತ್ತು ಮುಸ್ಲಿಂ ಧರ್ಮದವರು ಒಂದೇ ಏರಿಯಾದಲ್ಲಿ ವಾಸವಿದ್ದಾರೆ.
ಮಿಲನ್ ನಲ್ಲಿ ಫೇಸ್ಟಿವಲ್ ಆಫರ್ |ಇಂದೇ ಭೇಟಿನೀಡಿ
ಹಬ್ಬ ಹರಿದಿನ ವಾದ್ರೆ ಎಲ್ಲರು ಒಟ್ಟಾಗಿ ಹಬ್ಬ ಮಾಡಿ ಸಂಭ್ರಮಿಸುತ್ತಾರೆ. ಅದರಲ್ಲಿ ಗಣೇಶೋತ್ಸವಕ್ಕೆ ಮಾತ್ರ ಜಾತಿ ಧರ್ಮಗಳನ್ನು ಬಿಟ್ಟು ಹಬ್ಬ ಸಂಭ್ರಮಿಸಿ ಅನ್ನ ಪ್ರಸಾದ ಕೂಡಾ ವಿತರಿಸುತ್ತಾರೆ ಇಲ್ಲಿನ ಜನ.
ಜಾತಿ ,ಧರ್ಮ ಎಂದು ಹೊಡೆದಾಡುವ ಇಂದಿನ ದಿನದಲ್ಲಿ ಕಳೆದ 25 ವರ್ಷಗಳಿಂದ ಮುಸ್ಲೀಂ ಸಮುದಾಯದವರ ಮುಂದಾಳತ್ವದಲ್ಲಿ ಗಣೇಶ ಪೂಜೆ ನಡೆದರೇ ,ಈದ್ ಮಿಲಾದ್ ಹಬ್ಬವನ್ನ ಹಿಂದೂ ಜನರು ನಡೆಸಿಕೊಂಡು ಬರುವ ಮೂಲಕ ಮಾದರಿಯಾಗಿದ್ದಾರೆ.
