Karwar ಜೈಲಿನಲ್ಲಿ ಸೊಳ್ಳೆ ಕಾಟ, ಸುಣ್ಣ ಬಣ್ಣ ಕಾಣದ ಗೋಡೆಗಳು ಕೈದಿಗಳಿಂದ ಮಾನವ ಹಕ್ಕು ಆಯೋಗಕ್ಕೆ ದೂರು !
Karwar news 11 November:- ನಟ ದರ್ಶನ್ ಪರಪ್ಪನ ಅಗ್ರಹಾರದಲ್ಲಿ ನಿಯಮ ಮೀರಿ ಎಲ್ಲಾ ಸವಲತ್ತು ಪಡೆಯುತಿದ್ದಾರೆ ಎಂಬ ವಿವಾದ ಏಳುತಿದ್ದಂತೆ ರಾಜ್ಯದ ಎಲ್ಲಾ ಜೈಲುಗಳಲ್ಲಿ (jaile)ಕಠಿಣ ನಿಯಮ ಜಾರಿ ಮಾಡಿದ್ದಾರೆ.
ಆದ್ರೆ ಕಾರವಾರದಲ್ಲಿ (karwar) ಕೂಡ ಕೈದಿಗಳು ತಮಗೆ ತಂಬಾಕು,ಗುಟ್ಕ ನೀಡುವಂತೆ ಪ್ರತಿಭಟನೆ ನಡೆಸಿ ತಮಗೆ ತಾವೇ ಹಲ್ಲೇ ಮಾಡಿಕೊಳ್ಳುವ ಮೂಲಕ ಸದ್ದು ಮಾಡಿದ್ದರು.
ಆದ್ರೆ ಇದೀಗ ತಾವಿರುವ ಜೈಲಿನಲ್ಲಿ ಸೊಳ್ಳೆಗಳ ಕಾಟಕ್ಕೆ ಬೇಸತ್ತು ಮಾನವ ಹಕ್ಕುಗಳ ಆಯೋಗದ ಸದಸ್ಯರಿಗೆ ದೂರು ನೀಡಿದ್ದಾರೆ.
ಇದನ್ನೂ ಓದಿ:-Karwar | ಹದ್ದಿನ ದೇಹದಲ್ಲಿ ಟ್ರ್ಯಾಕರ್ ಕೊನೆಗೂ ಸತ್ಯ ಬಯಲು
ಜೊತೆಗೆ ಹಲವು ವರ್ಷದಿಂದ ಸುಣ್ಣ ಬಣ್ಣ ಕಾಣದೇ ಸ್ಲಂ ನಂತಾಗಿದ್ದ ಜೈಲಿಗೆ ಸುಣ್ಣ ಬಣ್ಣ ಬಳಿಸುವ ಬೇಡಿಕೆ ಇಟ್ಟಿದ್ದಾರೆ.
ಹೌದು ಕಾರವಾರದ ಜಿಲ್ಲಾ ಕಾರಾಗೃಹದಲ್ಲಿ ಇಂದು
ರಾಜ್ಯ ಮಾನವ ಹಕ್ಕು ಆಯೋಗದ ನ್ಯಾಯಾಂಗ ಸದಸ್ಯರಾದ ಎಸ್.ಕೆ. ವಂತಿಕೋಡಿ ಭೇಟಿ ನೀಡಿದ್ದರು.
ಇದನ್ನೂ ಓದಿ:-Karwar : ತರಕಾರಿಗೆ ಎಂಜಲು ಉಗಿದು ಹಲಾಲ್ ಮಾಡಿದ ತರಕಾರಿ ವ್ಯಾಪಾರಿ ! ಕೊನೆಗೆ ಆಗಿದ್ದೇನು ಗೊತ್ತಾ?
ಈ ಭೇಟಿ ಸಂದರ್ಭದಲ್ಲಿ ಶಿಥಿಲಾವಸ್ತೆಯಲ್ಲಿರುವ ಜೈಲಿನ ವೀಕ್ಷಣೆ ಮಾಡಿದ ಅವರಿಗೆ ಜೈಲಿನ ಕೈದಿಗಳು ಇಲ್ಲಿ ಸೊಳ್ಳೆಗಳ ಕಾಟದ ಬಗ್ಗೆ ದೂರು ನೀಡಿದ್ದಾರೆ. ಇದಲ್ಲದೇ ಹಲವು ವರ್ಷದಿಂದ ಸುಣ್ಣ ,ಬಣ್ಣ ಕಾಣದ ಗೋಡೆಗಳಿಗೆ ಬಣ್ಣ ಬಳಿಸುವಂತೆ ಕೇಳಿಕೊಂಡಿದ್ದಾರೆ.
ಇದನ್ನೂ ಓದಿ:-SIRSI:ಮಾವನ ಜನ್ಮ ದಿನಕ್ಕಾಗಿ ಶಿರಸಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದ ನಟ ಶಿವರಾಜ್ ಕುಮಾರ್| ವಿಡಿಯೋ ನೋಡಿ
ಕಾರವಾರ ಜಿಲ್ಲಾ ಕಾರಾಗೃಹದ ನಿವಾಸಿಗಳಿಗೆ ಸೊಳ್ಳೆ ಕಡಿತವಾಗದಂತೆ ತಡೆಯಲು ಜೈಲಿನ ಕಿಟಕಿಗಳಿಗೆ ಸೊಳ್ಳೆಗಳು ಬಾರದಂತೆ ಮೆಶ್ ಹಾಕಿಸಿ ಹಾಗೂ ಗೋಡೆಗಳಿಗೆ ಹೊಸದಾಗಿ ಪೈಂಟ್ ಮಾಡಿಸುವಂತೆ ಕಾರಾಗೃಹ ಇಲಾಖೆಯ ಅಧಿಕಾರಿಗಳಿಗೆ ರಾಜ್ಯ ಮಾನವ ಹಕ್ಕು ಆಯೋಗದ ನ್ಯಾಯಾಂಗ ಸದಸ್ಯರಾದ ಎಸ್.ಕೆ. ವಂತಿಕೋಡಿ ಸೂಚನೆ ನೀಡಿದರು.
ಕಾರಾಗೃಹದ ಸುತ್ತಮುತ್ತ ಸ್ವಚ್ಛತೆಗೆ ಇಲ್ಲದೇ ಕಸದ ತೊಟ್ಟಿಯಾಗಿದ್ದು ಸ್ಪಚ್ಛತೆಗೆ ಆದ್ಯತೆ ನೀಡುವಂತೆ ಮತ್ತು ವೈದ್ಯರಿಂದ ನಿಯಮಿತವಾಗಿ ಆರೋಗ್ಯ ತಪಾಸಣೆ ನಡೆಸುವಂತೆ ಸೂಚಿಸಿದರು.
ಕಾರಾಗೃಹದ ಅಡುಗೆ ಮನೆಗೆ ಭೇಟಿ ನೀಡಿದ ಅವರು ಸ್ವತ: ಆಹಾರ ಸೇವಿಸಿ, ಯಾವುದೇ ಕಾರಣಕ್ಕೂ ಆಹಾರದ ಗುಣಮಟ್ಟದಲ್ಲಿ ಕೊರತೆ ಕಂಡುಬಾರದಂತೆ ಎಚ್ಚರಿಕೆ ವಹಿಸುವಂತೆ ಹಾಗೂ ತಾಜಾ ಮತ್ತು ಗುಣಮಟ್ಟದ ಕಾಳುಗಳು ಮತ್ತು ತರಕಾರಿಗಳನ್ನು ಬಳಕೆ ಮಾಡುವಂತೆ ಹಾಗೂ ಕೊಠಡಿಗಳು ಮತ್ತು ಶೌಚಾಲಯಗಳಲ್ಲಿ ಪ್ರತಿನಿತ್ಯ ಸ್ವಚ್ಛತೆ ಕಾಪಾಡುವಂತೆ ನಿರ್ದೇಶನ ನೀಡಿದರು.
ನಂತರ ಜೈಲಿನಲ್ಲಿ ಅಳವಡಿಸಿರುವ ಸಿಸಿಟಿವಿಗಳನ್ನು ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಬೆಳಗಾವಿ ಕಾರಾಗೃಹದ ಸಹಾಯಕ ಅಧೀಕ್ಷಕ ಕೃಷ್ಣಮೂರ್ತಿ, ಕಾರವಾರ ಕಾರಾಗೃಹದ ಪ್ರಭಾರ ಅಧೀಕ್ಷಕ ಫಕೀರಪ್ಪ ತಮ್ಮಣ್ಣ ದಾಂಡೇನವರ್, ನಗರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ರಮೇಶ್ ಹೂಗಾರ್ ಉಪಸ್ಥಿತರಿದ್ದರು.
ನಂತರ ಕಾರವಾರ ನಗರ ಪೊಲೀಸ್ ಠಾಣೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.