Karwar | ಮಹಡಿ ಮೇಲಿಂದ ಬಿದ್ದು ವೃದ್ಧ ಸಾವು ಶವದ ಮುಂದೆ ಮಕ್ಕಳ ಗಲಾಟೆ
ಕಾರವಾರ:- ಮಕ್ಕಳ ಕಾಟಕ್ಕೆ ಬೇಸತ್ತು ನಾಲ್ಕು ಮಹಡಿ ಕಟ್ಟಡದಿಂದ ಹಾರಿ ವಯೋವೃದ್ಧ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾರವಾರದಲ್ಲಿ (karwar) ನಡೆದಿದ್ದು ಈ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ವೃದ್ಧ ನ ಸಾವಿನ ವಿಡಿಯೋ ನೋಡಿ :-
ಕಾರವಾರ ನಗರದ ಶಂಕರಮಠ ರಸ್ತೆಯ ಮನೋಹರ್ ಅಪಾರ್ಟಮೆಂಟ್ ನಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು , 76 ವರ್ಷದ ಕೃಷ್ಣನಾಂದ ಶಿವರಾಮ ಪಾವಸ್ಕರ ಆತಹತ್ಯೆ ಮಾಡಿಕೊಂಡ ವ್ಯಕ್ತಿ
ಅಪ್ಪನ ಮೃತ ದೇಹದ ಮುಂದೆ ಮಕ್ಕಳಿಬ್ಬರೂ ಜಗಳ ಮಾಡಿಕೊಂಡಿದ್ದು ಇದು ಆತ್ಮಹತ್ಯೆ ಅಲ್ಲ ಎಂದು ಹಿರಿಯ ಮಗ ಸಂಜಯ ಪಾವಸ್ಕರ್ ಆರೋಪ ಮಾಡಿದ್ದಾರೆ.
ನಮ್ಮ ಅಪ್ಪನಿಗೆ ಇಷ್ಟು ದೊಡ್ಡ ಕಟ್ಟಡ ಮೇಲೆ (floor)ಹೊಗೊಕೆ ಆಗಲ್ಲ, ನಮ್ಮ ಅಪ್ಪ ಒಬ್ರೆ ಅಷ್ಟು ಎತ್ತರಕ್ಕೆ ಹೋಗಲು ಸಾದ್ಯ ಇಲ್ಲ, ಇದು ಸರಿಯಾದ ತನಿಖೆ ಆಗಬೇಕು ಎಂದು ಪಟ್ಟು ಹಿಡಿದರು.
ಮೂವರು ಮಕ್ಕಳನ್ನು ಹೊಂದಿರುವ ಕೃಷ್ಣನಂದ ಗೆ ಮಕ್ಕಳಿಂದ ನೆಮ್ಮದಿ ಹಾಳಾಗಿತ್ತು ಎಂದು ಹೇಳಲಾಗಿತ್ತು.
ಕಳೆದ ಕೆಲವು ದಿನಗಳಿಂದ ಮೂವರು ಮಕ್ಕಳು ಜಗಳ ಮಾಡಿಕೊಂಡಿದ್ದರು.ಕಾರವಾರ (karwar) ನಗರದಲ್ಲಿ ಮೂವರು ಮಕ್ಕಳು ಪ್ರತ್ಯೇಕವಾಗಿ ವಾಸವಾಗಿದ್ದರು.ಮೂವರು ಮಕ್ಕಳಿಗೆ ಒಬ್ಬರನ್ನು ಕಂಡ್ರೆ ಇನ್ನೊಬ್ಬರಿಗೆ ಆಗುತ್ತಿರಲಿಲ್ಲ .
ಕೆಲವು ದಿನದ ಹಿಂದೆ ತಾಯಿಯನ್ನು ಮಾತಾಡಿಸಲು ಬಂದ ಹಿರಿಯ ಮಗನಿಗೆ ಕಿರಿಯ ಮಗ ಮಾತನಾಡಿಸಲು ಬಿಟ್ಟಿರಲಿಲ್ಲವಂತೆ ,ಇನ್ನು ಕಳೆದ ಕೆಲವು ತಿಂಗಳಿನಿಂದ ಕಿರಿಯ ಮಗನ ಮನೆಯಲ್ಲೆ ವಯೋವೃದ್ಧರು ವಾಸವಾಗಿದ್ದರು.
ಇದನ್ನೂ ಓದಿ:-Karwar ಜೈಲಿನಲ್ಲಿ ಸೊಳ್ಳೆ ಕಾಟ, ಸುಣ್ಣ ಬಣ್ಣ ಕಾಣದ ಗೋಡೆಗಳು ಕೈದಿಗಳಿಂದ ಮಾನವ ಹಕ್ಕು ಆಯೋಗಕ್ಕೆ ದೂರು !
ಸಹೋದರರ ಕಲಹಕ್ಕೆ ಬೇಸತ್ತಿದ್ದರು ಎಂದು ಹೇಳಲಾಗಿದೆ. ಆದರೇ ತನಿಖೆ ನಂತರವೇ ಆತ್ಮಹತ್ಯೆಯೋ ಅಥವಾ ಹತ್ಯೆಯೋ ಎಂದು ತಿಳಿದು ಬರಲಿದ್ದು ಕಾರವಾರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.