For the best experience, open
https://m.kannadavani.news
on your mobile browser.
Advertisement

Karwar :ಕರಾವಳಿಯಲ್ಲಿ "OP TRIGGER " ಆಪರೇಷನ್-ಕಡಲಿನಲ್ಲಿ ಕಟ್ಟೆಚ್ಚರ

ಕಾರವಾರ:- ಪಹಲ್ಗಾಮ್‌ನಲ್ಲಿ(pahalgav) ಉಗ್ರರ ದಾಳಿಯ ಬಳಿಕ ರಾಜ್ಯದ ಕರಾವಳಿಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.
09:49 PM May 03, 2025 IST | ಶುಭಸಾಗರ್
karwar  ಕರಾವಳಿಯಲ್ಲಿ  op trigger   ಆಪರೇಷನ್ ಕಡಲಿನಲ್ಲಿ ಕಟ್ಟೆಚ್ಚರ

Karwar :ಕರಾವಳಿಯಲ್ಲಿ "OP TRIGGER " ಆಪರೇಷನ್-ಕಡಲಿನಲ್ಲಿ ಕಟ್ಟೆಚ್ಚರ

Advertisement

ಪ್ರಕೃತಿ ಮೆಡಿಕಲ್ ,ಕಾರವಾರ.

ಕಾರವಾರ:- ಪಹಲ್ಗಾಮ್‌ನಲ್ಲಿ(pahalgav) ಉಗ್ರರ ದಾಳಿಯ  ಬಳಿಕ ರಾಜ್ಯದ ಕರಾವಳಿಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.

ರಾಜ್ಯದ ಕರಾವಳಿ ಭಾಗಗಳಲ್ಲಿ ಹದ್ದಿನ ಕಣ್ಣಿರಿಸಿರುವ ಇಂಡಿಯನ್ ನೇವಿ, ಇಂಡಿಯನ್ ಕೋಸ್ಟ್ ಗಾರ್ಡ್ಸ್ ಹಾಗೂ ಕೋಸ್ಟಲ್ ಪೊಲೀಸರು ಕೊಂಬಿಂಗ್  ಕಾರ್ಯಾಚರಣೆ ಯನ್ನು ತೀವ್ರಗೊಳಿಸಿದ್ದಾರೆ.

ಇದನ್ನೂ ಓದಿ:-Navy :ಹಿಂದು ಮಹಾಸಾಗರ ದಲ್ಲಿ 9 ಮಿತ್ರ ರಾಷ್ಟ್ರದೊಂದಿಗೆ IOS ಸಾಗರ ಹೆಸರಿನ ಕಾರ್ಯಾಚರಣೆಗೆ ಕಾರವಾರ ದಲ್ಲಿ ಚಾಲನೆ

"OP TRIGGER" ಹೆಸರಿನಲ್ಲಿ ಆಪರೇಷನ್ ನಡೆಸ್ತಿರುವ ಇಂಡಿಯನ್ ನೇವಿ, ಇಂಡಿಯನ್ ಕೋಸ್ಟ್ ಗಾರ್ಡ್ಸ್ ಹಾಗೂ ಕೋಸ್ಟಲ್ ಪೊಲೀಸರು ಅರಬ್ಬಿ ಸಮುದ್ರ ಭಾಗದಲ್ಲಿ ತಪಾಸಣೆ ನಡೆಸುತಿದ್ದಾರೆ.

kannadavani news banner
ಫೋಟೋ ಮೇಲೆ ಕ್ಲಿಕ್ ಮಾಡಿ ನಮ್ಮ WhatsApp ಗ್ರೂಪ್ ಗೆ join ಆಗಿ.

ದೇಶದ ಆಂತರಿಕ ಭದ್ರತೆ ಹಿನ್ನಲೆಯಲ್ಲಿ ಸಮುದ್ರದಲ್ಲಿರುವ ಸಾಗುವ ಪ್ರತೀ ಬೋಟುಗಳು ಹಾಗೂ ಬಂದರುಗಳಲ್ಲಿರುವ ಬೋಟುಗಳು, ಕಾರ್ಮಿಕರ ಪರಿಶೀಲನೆ ನಡೆಸಿ ಮಾಹಿತಿ ಕಲೆಹಾಕುತಿದ್ದು ,ಯಾವುದೇ ಉಗ್ರರು ರಾಜ್ಯದ  ಕರಾವಳಿಯ ಮೂಲಕ ದೇಶಕ್ಕೆ ಎಂಟ್ರಿಕೊಡಬಾರದು ಎಂಬ ಉದ್ದೇಶದಿಂದ ಭಾರೀ ತಪಾಸಣೆ ಕೈಗೊಳ್ಳಲಾಗಿದೆ.

ಅತೀ ಸೂಕ್ಷ್ಮ ಪ್ರದೇಶವಾಗಿರುವ ಕಾರವಾರದ ನೌಕಾನೆಲೆ ಹಾಗೂ ಕೈಗಾ ಅಣುವಿದ್ಯುತ್ ಸ್ಥಾವರದ ಸುತ್ತಮುತ್ತಲೂ ಭಿಗಿ ಭದ್ರತೆ ನೀಡಲಾಗಿದೆ. ಜೊತೆಗೆ ತೀರ ಪ್ರದೇಶಗಳಲ್ಲಿ ಡ್ರೋನ್‌ಗಳನ್ನು ಕೂಡಾ ಬಳಸಿ ಪರಿಶೀಲನೆ‌ ನಡೆಸಲಾಗುತ್ತಿದೆ.

ಇನ್ನು ಕರಾವಳಿ ಕಾವಲು ಪಡೆ ಸಿಬ್ಬಂದಿಗಳು ಪ್ರತಿ ದಿನ ಕೂಂಬಿಂಗ್ ಕಾರ್ಯಾಚರಣೆಯನ್ನು ಹೆಚ್ಚಿಸಿದ್ದು ಮೀನುಗಾರರಿಗೆ ಯಾರೇ ಅನುಮಾನಸ್ಪದ ಬೋಟುಗಳು ಅರಬ್ಬಿ ಸಮುದ್ರದಲ್ಲಿ ಕಂಡಲ್ಲಿ ತಕ್ಷಣ ಮಾಹಿತಿ ನೀಡಲು ತಿಳಿಸಾಗಿದೆ.

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ