Karwar| ಸೇತುವೆ ಇದ್ರೂ ರಸ್ತೆ ಇಲ್ಲ ದೋಣಿಯಲ್ಲೇ ಸಾಗಿಸಿದ್ರು ಶವ
Karwar| ಸೇತುವೆ ಇದ್ರೂ ರಸ್ತೆ ಇಲ್ಲ ದೋಣಿಯಲ್ಲೇ ಸಾಗಿಸಿದ್ರು ಶವ
ಕಾರವಾರ :-ಸೇತುವೆ ನಿರ್ಮಾಣವಾದ್ರು ರಸ್ತೆ ನಿರ್ಮಾಣವಾಗದೆ ಶವ ಸಂಸ್ಕಾರಕ್ಕಾಗಿ ದೋಣಿಯಲ್ಲಿ (Boat) ಶವ ವಿಟ್ಟು ಅಂತ್ಯ ಸಂಸ್ಕಾರಕ್ಕೆ ತೆರಳಿದ ಅವಮಾನೀಯ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಉಮಳೆಜೂಗ್ ನಲ್ಲಿ ಇಂದು ನಡೆದಿದೆ.
ಕಾಳಿ ನದಿಯಿಂದ ದ್ವೀಪವಾಗಿರುವ ಈ ಗ್ರಾಮಕ್ಕೆ ಸೇತುವೆ ನಿರ್ಮಾಣ ಮಾಡಲಾಗಿದೆ. ಆದರೇ ಸೇತುವೆಯ ಮೂಲಕ ಸಂಚರಿಸಲು ರಸ್ತೆಯನ್ನು ಈವರೆಗೂ ಮಾಡದೇ ಹಾಗೆಯೇ ಬಿಡಲಾಗಿದೆ.
ಇದನ್ನೂ ಓದಿ:-Karwar|ನಗರಸಭೆ ವಾರ್ಡ ಗೆ ರಸ್ತೆ ಇಲ್ಲ ಕಟ್ಟಿಗೆ ಕಂಬಕ್ಕೆ ಶವ ಕಟ್ಟಿ ಹೊತ್ತ ವಾರ್ಡ ಜನ
ಇದಲ್ಲದೇ ಗ್ರಾಮದಲ್ಲಿ ಸ್ಮಶಾನ ಸಹ ಇಲ್ಲದೇ ಊರಿನಿಂದ ಮತ್ತೊಂದು ಭಾಗಕ್ಕೆ ತೆರಳಬೇಕು. ಹೀಗಾಗಿ ಇಂದು ಗ್ರಾಮದಲ್ಲಿ ಗುಲ್ಬಾ ಕೋಳಮಕರ್ ಹೆಸರಿನ ವ್ಯಕ್ತಿ ಸಾವನಪ್ಪಿದ್ದು, ಅವರ ಶವವನ್ನು ಸೇತುವೆ ಮೂಲಕ ಕೊಂಡೊಯ್ಯಲಾಗದೇ ನದಿಯಲ್ಲಿ ದೋಣಿ ಮೂಲಕ ಕೊಂಡೊಯ್ದು ಶವ ಸಂಸ್ಕಾರ ಮಾಡಿದ್ದಾರೆ.
ಇದನ್ನೂ ಓದಿ:-Karwar ನಗರಸಭೆಯಲ್ಲೊಂದು NIGHT SHELTER ಏನಿದು ಗೊತ್ತಾ? Video ನೋಡಿ