For the best experience, open
https://m.kannadavani.news
on your mobile browser.
Advertisement

Karwar :ಪಾಕಿಸ್ತಾನದ ಏಜಂಟೆಗೆ ಕದಂಬ ನೌಕಾನೆಲೆಯ ಮಾಹಿತಿ ಹಂಚಿಕೆ -ಇಬ್ಬರು ಆರೋಪಿಗಳು NIA ವಶಕ್ಕೆ.

ಕಾರವಾರ :- ಐ.ಎನ್.ಎಸ್ ಕದಂಬ (INS Kadambha) ನೌಕಾ ನೆಲೆಯ ಮಾಹಿತಿಗಳನ್ನು ಪಾಕಿಸ್ತಾನದ ಏಜೆಂಟ್ ಗಳಿಗೆ ನೀಡಿದ ಆರೋಪದಡಿ ಹೈದ್ರಬಾದ್ ನ ಎನ್.ಐ.ಎ ತಂಡ (NIA) ಇಬ್ಬರು ಆರೋಪಿಗಳನ್ನು ಕಾರವಾರದಲ್ಲಿ ಬಂಧಿಸಿ ತನಿಖೆ ಕೈಗೊಂಡಿದೆ.
12:59 PM Feb 18, 2025 IST | ಶುಭಸಾಗರ್
karwar  ಪಾಕಿಸ್ತಾನದ ಏಜಂಟೆಗೆ ಕದಂಬ ನೌಕಾನೆಲೆಯ ಮಾಹಿತಿ ಹಂಚಿಕೆ  ಇಬ್ಬರು ಆರೋಪಿಗಳು nia ವಶಕ್ಕೆ
Karwar: Two Accused in NIA Custody for Sharing Kadamba Naval Base Information with Pakistani Agent

Karwar :ಪಾಕಿಸ್ತಾನದ ಏಜಂಟೆಗೆ ಕದಂಬ ನೌಕಾನೆಲೆಯ ಮಾಹಿತಿ ಹಂಚಿಕೆ -ಇಬ್ಬರು ಆರೋಪಿಗಳು NIA ವಶಕ್ಕೆ.

Advertisement

ಪ್ರಕೃತಿ ಮೆಡಿಕಲ್ ,ಕಾರವಾರ.

ಕಾರವಾರ  :- ಐ.ಎನ್.ಎಸ್ ಕದಂಬ (INS Kadamba) ನೌಕಾ ನೆಲೆಯ ಮಾಹಿತಿಗಳನ್ನು ಪಾಕಿಸ್ತಾನದ ಏಜೆಂಟ್ ಗಳಿಗೆ ನೀಡಿದ ಆರೋಪದಡಿ ಹೈದ್ರಬಾದ್ ನ ಎನ್.ಐ.ಎ(NIA) ತಂಡ ಇಬ್ಬರು ಆರೋಪಿಗಳನ್ನು ಕಾರವಾರದಲ್ಲಿ ಬಂಧಿಸಿ ತನಿಖೆ ಕೈಗೊಂಡಿದೆ.ಕಾರವಾರ(karwar) ತಾಲೂಕಿನ ಮುದುಗಾದ ವೇತನ್ ತಾಂಡೇಲ್,  ಹಳವಳ್ಳಿಯ ಅಕ್ಷಯ್ ನಾಯ್ಕ್‌ ಬಂಧಿತ ಆರೋಪಿಗಳು.

Astrology advertisement
Astrology advertisement

ಬಂಧಿತರು 2023 ರಲ್ಲಿ  ಫೇಸ್ ಬುಕ್ ಮೂಲಕ ಪರಿಚಯವಾಗಿದ್ದ ಪಾಕಿಸ್ತಾನದ ಏಜಿಂಟ್ ಆಗಿದ್ದ ಮಹಿಳೆಯೊಂದಿಗೆ ಪರಿಚಯವಾಗಿದ್ದು ಆಕೆ ತಾನು ನೌಕಾದಳದ ಅಧಿಕಾರಿ ಎಂದು ಪರಿಚಯ ಮಾಡಿಕೊಂಡು ನೌಕಾದಳದ ಯುದ್ದ ನೌಕೆಗಳು ,ಅದರ ಚಲನ ವಲನ,ನೌಕೆಗಳ ಚಿತ್ರಗಳು, ಕದಂಬ ನೌಕಾದಳದ ಸ್ಥಳಗಳ ಮಾಹಿತಿ ಪಡೆದಿದ್ದಳು.

ಇದನ್ನೂ ಓದಿ:-Karnataka Navy day ದೀಪಾಲಂಕಾರ ಗೊಂಡ ನೌಕೆಗಳು ಹೇಗಿತ್ತು ಗೊತ್ತಾ | ವಿಡಿಯೋ ನೋಡಿ

ಇದಕ್ಕಾಗಿ ಪ್ರತಿ ತಿಂಗಳು 5 ಸಾವಿರದಂತೆ ಎಂಟು ತಿಂಗಳ ಕಾಲ ಈ ಮೂವರ ಖಾತೆಗೆ ದೀಪಕ್ ಎನ್ನುವ ಖಾತೆಯಿಂದ ಹಣ ಕಳುಹಿಸುತಿದ್ದರು. 2023 ರಲ್ಲಿ ಹೈದ್ರಾಬಾದ್ ನ ಎನ್.ಐ.ಎ ತಂಡ ದೀಪಕ್ ಹಾಗೂ ಆತನ ತಂಡವನ್ನು ಬಂಧಿಸಿದಾಗ ಕಾರವಾರದ  ಮೂವರು ಮಾಹಿತಿ ನೀಡುತಿದ್ದ ಹಾಗೂ ನೌಕಾದಳದ ಅಧಿಕಾರಿಗಳು ಹನಿಟ್ರಾಪ್ ಗೆ ಒಳಗಾದ ಕುರಿತು ಮಾಹಿತಿ ದೊರೆತಿತ್ತು.

ತಕ್ಷಣ 2023 ರ ಆಗಷ್ಟ್ 28 ರಂದು ಕಾರವಾರದಲ್ಲಿ ಮುದುಗಾದ ವೇತನ್ ತಾಂಡೇಲ್, ತೋಡೂರಿನ ಸುನೀಲ್ ಹಾಗೂ ಹಳವಳ್ಳಿಯ ಅಕ್ಷಯ್ ನಾಯ್ಕ್‌ ಈ ಮೂವರನ್ನು ವಶಕ್ಕೆ ಪಡೆದು ಇವರ ಬಳಿ ಇದ್ದ ಎಲೆಕ್ಟ್ರಾನಿಕ್ ಉಪಕರಣ, ಮೊಬೈಲ್ ಗಳನ್ನು ವಶಕ್ಕೆ ಪಡೆದು ನೋಟಿಸ್ ನೀಡಿ ಹೈದ್ರಬಾದ್ ನ ಎನ್.ಐ.ಎ ಕಚೇರಿಗೆ ಹೆಚ್ಚಿನ ತನಿಖೆಗೆ ಹಾಜುರಾಗುವಂತೆ ಸೂಚಿಸಿತ್ತು.

ಇದನ್ನೂ ಓದಿ:-Karwar : 10 ಸಾವಿರ ಲಂಚ ಪಡೆದ ಅಧಿಕಾರಿ ಲೋಕಾಯುಕ್ತ ಬಲೆಗೆ

ಇದರ ನಂತರ ಇದೇ ಪ್ರಕರಣದಲ್ಲಿ ತನಿಖೆ ಮುಂದುವರೆಸಿದ್ದ ಹೈದ್ರಾಬಾದ್ ಹಾಗೂ ಬೆಂಗಳೂರು ಎನ್.ಐ .ಎ ತಂಡ ಇದೀಗ ಕಾರವಾರ ತಾಲೂಕಿನ ಮುದುಗಾದ ವೇತನ್ ತಾಂಡೇಲ್,  ಹಳವಳ್ಳಿಯ ಅಕ್ಷಯ್ ನಾಯ್ಕ್‌ ಬಂಧಿಸಿದ್ದು ಕಾರವಾರದ ಕ್ರಿಮ್ಸ್ ವೈದ್ಯಕೀಯ ಕಾಲೇಜಿನಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಿ ನ್ಯಾಯಾಲಯಕ್ಕೆ ಹಾಜುರು ಪಡಿಸಿ ಹೆಚ್ಚಿನ ತನಿಖೆಗಾಗಿ ಹೈದ್ರಾಬಾದ್ ಅಥವಾ ದೆಹಲಿಗೆ ಕರೆದೊಯ್ಯುವ ಸಾಧ್ಯತೆಗಳಿವೆ.

ಮೂರು ಜನರ ಮೇಲೆ ಇರುವ ಆರೋಪ ಏನು?

ಕಾರವಾರದ ಚೆಂಡಿಯಾ ದಲ್ಲಿ ಇರುವ ಮರ್ಕ್ಯುರಿ ಹಾಗೂ ಅಲ್ಟ್ರಾ ಮರೈನ್ ಕಂಪನಿಯಲ್ಲಿ ವೇತನ್ ಹಾಗೂ ಅಕ್ಷಯ್ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತಿದ್ದರು. ಈ ಕಂಪನಿ ಕದಂಬ ನೌಕಾನೆಲೆಯಲ್ಲಿ ಯುದ್ದ ನೌಕೆಗಳ ರಿಪೇರಿ ಕಾರ್ಯವನ್ನು ನಡೆಸುತ್ತದೆ. ಇನ್ನು ತೋಡೂರಿನ ಸುನಿಲ್ ಕದಂಬ ನೌಕಾನೆಲೆಯ ನೇವಿ ಕ್ಯಾಂಟೀನ್ ನಲ್ಲಿ ಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತಿದ್ದು ನಂತರ ಚಾಲಕ ವೃತ್ತಿ ಮಾಡುತಿದ್ದನು.

2023 ರಲ್ಲಿ  ಪಾಕಿಸ್ತಾನದ ಮಹಿಳಾ ಏಜೆಂಟ್ ಫೇಸ್‌ಬುಕ್‌ನಲ್ಲಿ ಫ್ರೆಂಡ್‌ ರಿಕ್ವೆಸ್ಟ್ ಕಳುಹಿಸಿದ ನಂತರ ಮುದುಗಾದ ವೇತನ್ ತಾಂಡೇಲ್, ತೋಡೂರಿನ ಸುನೀಲ್ ಹಾಗೂ ಹಳವಳ್ಳಿಯ ಅಕ್ಷಯ್ ನಾಯ್ಕ್‌ ಈ ಮಹಿಳೆಗೆ ಹತ್ತಿರವಾಗಿದ್ದರು.

ಈ ಮಹಿಳೆ ದೀಪಕ್ ಎಂಬುವವನನ್ನು ಮಧ್ಯವರ್ತಿಯಾಗಿ ಬಳಸಿಕೊಂಡು ಇವರಿಗೆ ಮಾಹಿತಿ ನೀಡುವುದಕ್ಕಾಗಿ ತಲಾ 5 ಸಾವಿರದಂತೆ ಹಣ ಸಂದಾಯ ಮಾಡುತಿದ್ದಳು.

ಇದನ್ನೂ ಓದಿ:-Navy base fire: ನೌಕಾನೆಲೆಯ ಕಾರ್ಮಿಕ ಶಡ್ ನಲ್ಲಿ ಸಿಲೆಂಡರ್ ಸ್ಪೋಟ ಹಲವು ಮನೆಗೆ ಬೆಂಕಿ.

ದೀಪಕ್ ಬಂಧನವಾಗುತಿದ್ದಂತೆ  ಸುನಿಲ್ ಮೂರು ವರ್ಷಗಳ ಹಿಂದೆ ನೌಕಾ ನೆಲೆಯಲ್ಲಿ ತನ್ನ ಕೆಲಸವನ್ನು ಬಿಟ್ಟು ಗೋವಾದ ರೆಸ್ಟೋರೆಂಟ್‌ಗೆ ಸೇರಿಕೊಂಡನು.

ಇನ್ನು ವೇತನ್ ತಾಂಡೇಲ್ ಕೆಲಸ ಬಿಟ್ಟರೂ ನೌಕಾ ನೆಲೆಯಲ್ಲಿ ಕೆಲಸ ಮಾಡುವ ತನ್ನ ಸ್ನೇಹಿತರು ಮತ್ತು ಸಂಬಂಧಿಕರಿಂದ ನೌಕಾನೆಲೆಯ ಮಾಹಿತಿ ಪಡೆದು ಪಾಕಿಸ್ತಾನದ ಏಜೆಂಟ್ ಗಳಿಗೆ ಕಳುಹಿಸುತಿದ್ದನು.

ಮೂವರಿಂದ ಮೊಬೈಲ್ ಫೋನ್, ಎಲೆಕ್ಟ್ರಾನಿಕ್ ಉಪಕರಣಗಳು ವಶ.

ಹೈದರಾಬಾದ್‌ನ ಎನ್‌ಐಎ ಅಧಿಕಾರಿಗಳು 2023 ರಲ್ಲಿ ವಿಶಾಖಪಟ್ಟಣದಲ್ಲಿ ಇದೇ ರೀತಿಯ ಪ್ರಕರಣದಲ್ಲಿ ದೀಪಕ್ ಮತ್ತು ಇತರ ಕೆಲವರನ್ನು ಬಂಧಿಸಿನಂತರ ಅವರು ತಮ್ಮ ಕಾರವಾರ ಜಾಲವನ್ನು ಬಹಿರಂಗಪಡಿಸಿದರು.

ದೀಪಕ್ ಮತ್ತು ಅವರ ತಂಡವು ಹಣ ಪಡೆಯುತ್ತಿದ್ದ ಅದೇ ಖಾತೆಯಿಂದ ವೇತನ್, ಸುನಿಲ್ ಮತ್ತು ಅಕ್ಷಯ್ ತಮ್ಮ ಬ್ಯಾಂಕ್ ಖಾತೆಗಳಿಗೆ ಹಣವನ್ನು ವರ್ಗಾಯಿಸಿಕೊಂಡಿರುವ ಮಾಹಿತಿ ದೊರೆತಿತ್ತು.

ದೀಪಕ್ ಮತ್ತು ಅವರ ತಂಡದ ಬಂಧನದ ನಂತರ, ವೇತನ್ ಮತ್ತು ಅಕ್ಷಯ್ ಹಣ ಪಡೆಯುವುದನ್ನು ನಿಲ್ಲಿಸಿದರು. ಈ ಸಾಕ್ಷ್ಯದ ಆಧಾರದ ಮೇಲೆ, ಬೆಂಗಳೂರು ಮತ್ತು ಹೈದರಾಬಾದ್‌ನ ಎನ್‌ಐಎ ಅಧಿಕಾರಿಗಳು ಆಗಸ್ಟ್ 27 ರಂದು ಕಾರವಾರಕ್ಕೆ ಆಗಮಿಸಿ ಆಗಸ್ಟ್ 28 ರಂದು ಮೂವರನ್ನು ಮೊದಲಬಾರಿ  ವಶಕ್ಕೆ ಪಡೆದಿದ್ದರು.

ತನಿಖಾಧಿಕಾರಿಗಳು ಮೂವರಿಂದ ಮೊಬೈಲ್ ಫೋನ್‌ಗಳು ಮತ್ತು ಕೆಲವು ಎಲೆಕ್ಟ್ರಾನಿಕ್ ಸಾಧನಗಳನ್ನು ವಶಪಡಿಸಿಕೊಂಡಿದ್ದರು. ಈ ಮೂವರಿಗೆ

ನೋಟಿಸ್ ನೀಡಲಾಗಿತ್ತು. ಹೆಚ್ಚಿನ ತನಿಖೆಗಾಗಿ ಹೈದರಾಬಾದ್‌ಗೆ ಹೋಗುವಂತೆ ವೇತನ್‌ಗೆ ಸೂಚಿಸಲಾಗಿತ್ತು. ಇದಲ್ಲದೇ  ಎನ್‌ಐಎ ಅಧಿಕಾರಿಗಳ ತಂಡದ ಮುಂದೆ ಕರೆದಾಗ ಹಾಜರಾಗುವಂತೆ ಅಕ್ಷಯ್‌ಗೆ ಸೂಚಿಸಲಾಗಿತ್ತು.

ಮೊಬೈಲ್ ಹಾಗೂ ಎಲಕ್ಟಾನಿಕ್ ಗೆಜೆಟ್ ನಲ್ಲಿತ್ತು ಮಾಹಿತಿ.

ಇನ್ನು ವಶಪಡಿಸಿಕೊಂಡ ಮೊಬೈಲ್ ,ಎಲಕ್ಟ್ರಾನಿಲ್ ಉಪಕರಣಗಳ ಶೋಧ ನಡೆಸಿದ ಎನ್.ಐ.ಎ ತಂಡಕ್ಕೆ ನೌಕಾದಳದ ಅಧಿಕಾರಿಗಳು, ನೌಕಾನೆಲೆಯ ಯುದ್ದ ನೌಕೆಯಲ್ಲಿ ತಾಂತ್ರಿಕ ತಜ್ಞರಾಗಿ ಕಾರ್ಯನಿರ್ವಹಿಸುವ ಗುತ್ತಿಗೆ ನೌಕರರ ಸಂಪರ್ಕ ವನ್ನು ನಿರಂತರ ಹೊಂದಿದ್ದ ಮಾಹಿತಿ ಹೊರಬಿದ್ದಿದೆ.

ಇದಲ್ಲದೇ ನೌಕಾದಳದ ಅಧಿಕಾರಿಗಳು ಹನಿಟ್ರಾಪ್ ಆಗಿರುವ ಸಾಧ್ಯತೆಗಳಿದ್ದು ಈ ಬಗ್ಗೆ ಸಹ ತನಿಖೆ ಕೈಗೊಳ್ಳಲಾಗಿದೆ.

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ