KDCC Bank | ರಂಗೇರಿದ ಚುನಾವಣೆ 44 ನಾಮಪತ್ರ ಅಂಗೀಕಾರ| ಹಾಲಿ ಮಾಜಿ ಸಚಿವರ ಕುಸ್ತಿ ಅಕಾಡಕ್ಕೆ ಇಂದು ಕೊನೇ ದಿನ !
KDCC Bank | ರಂಗೇರಿದ ಚುನಾವಣೆ 44 ನಾಮಪತ್ರ ಅಂಗೀಕಾರ| ಹಾಲಿ ಮಾಜಿ ಸಚಿವರ ಕುಸ್ತಿ ಅಕಾಡಕ್ಕೆ ಇಂದು ಕೊನೇ ದಿನ !
ಶಿರಸಿ (october19 ): ಉತ್ತರ ಕನ್ನಡ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ (KDCC) ಆಡಳಿತ ಮಂಡಳಿ ಚುನಾವಣೆಗೆ ರಂಗೇರಿದೆ. ಹಾಲಿ ಅಧ್ಯಕ್ಷರಾಗಿರುವ ಶಿವರಾಮ್ ಹೆಬ್ಬಾರ್ ತಮ್ಮ ಅಸ್ತಿತ್ವ ಉಳಿಸಿಕೊಳ್ಳುತ್ತಾರ ಎಂಬ ಪ್ರಶ್ನೆ ಅನೇಕರದ್ದು .
ಮಾಜಿ ಸಚಿವ ಯಲ್ಲಾಪುರ ಶಾಸಕ ಶಿವರಾಮ್ ಹೆಬ್ಬಾರ್(shivarm hebbar) ವಿರುದ್ಧ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ತೊಡೆತಟ್ಟಿದ್ದಾರೆ. ಮಂಕಾಳು ವೈದ್ಯರಿಗೆ (mankalu vaidya) ಹಿಂಭಾಗಿಲಿನಿಂದ ಬಿಜೆಪಿ ನಾಯಕರಾಧಿಯಾಗಿ ಬೆಂಬಲ ನೀಡಿದೆ. ಹೀಗಿರುವಾಗ ಇದೀಗ ಮಂಕಾಳು v/s ಹೆಬ್ಬಾರ್ ಎನ್ನುವಂತಾಗಿದೆ. ಇಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ. ಎಷ್ಟು ಜನ ಕಣದಲ್ಲಿ ಇರಲಿದ್ದಾರೆ ಎಂಬುದು ಇಂದು ಸಂಜೆ ತಿಳಿಯಲಿದೆ.
KDCC Bank| ಬೆಳೆ ಹಾನಿ ವಿಮೆ ಯಲ್ಲಾಪುರ ಕ್ಷೇತ್ರಕ್ಕೆ 34 ಕೋಟಿ ಬಿಡುಗಡೆ- ಹೆಬ್ಬಾರ್.
ಕೆಡಿಸಿಸಿ ಬ್ಯಾಂಕ್ ಚುನಾವಣೆಗೆ ನಾಮಪತ್ರ ಪರಿಶೀಲನೆ ಶನಿವಾರ ನಡೆದಿದೆ. ಭಟ್ಕಳ ಪ್ರಾಥಮಿಕ ಪತ್ತಿನ ಸಹಕಾರಿ ಸಂಘಕ್ಕೆ ನಾಮಪತ್ರ ಸಲ್ಲಿಸಿದ್ದ ಇಬ್ಬರ ಪೈಕಿ ಓರ್ವರ ನಾಮಪತ್ರ ತಿರಸ್ಕೃತವಾಗಿದ್ದು, ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಅವಿರೋಧವಾಗಿ ಆಯ್ಕೆ ಆಗಿದ್ದಾರೆ.
ಭಟ್ಕಳ ಕ್ಷೇತ್ರಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಸ್ಪರ್ಧೆ ನಡೆಸಿದ್ದರೆ ಇವರ ವಿರುದ್ಧ ಮಾದೇವ ಗೋವಿಂದ ನಾಯ್ಕ ತಮ್ಮ ಉಮೇದುದಾರಿಕೆ ಸಲ್ಲಿಸಿದ್ದರು. ಆದರೆ, ಅವರ ನಾಮಪತ್ರಕ್ಕೆ ಅರ್ಹ ಸೂಚಕರಿಲ್ಲ ಎಂಬ ಕಾರಣದಿಂದ ಅವರ ನಾಮಪತ್ರ ತಿರಸ್ಕಾರವಾಗಿದ್ದು, ಮಂಕಾಳ ವೈದ್ಯ ಅವರ ದಾರಿ ಸುಗಮವಾಗಿದೆ.
Sirsi|ರೆಸಾರ್ಟ ಗೆ ಹೋದ ಶಿಕ್ಷಕಿ ಏಳು ಲಕ್ಷಕ್ಕೂ ಹೆಚ್ಚು ಮೌಲ್ಯದ ವಸ್ತುಗಳು ಮನೆಯಲ್ಲಿ ಕಳ್ಳತನ.
ಅದೇ ರೀತಿ ಸಿದ್ದಾಪುರ ಪ್ರಾಥಮಿಕ ಪತ್ತುಗಳ ಸಹಕಾರಿ ಸಂಘದ ಮತ ಕ್ಷೇತ್ರಕ್ಕೆ ತಮ್ಮ ಉಮೇದುದಾರಿಕೆ ಸಲ್ಲಿಸಿದ್ದ ವಿವೇಕ ಭಟ್ ಗಡಿ ಹಿತ್ಲು ಅವರ ನಾಮಪತ್ರದಲ್ಲಿ ಮಾಹಿತಿಗಳನ್ನು ಸಮರ್ಪಕವಾಗಿ ಪೂರೈಸಿಲ್ಲ ಎಂಬ ಕಾರಣದಿಂದ ನ್ಯಾಯಾಲಯ ಅವರ ಮತ ಹಾಗೂ ಸ್ಪರ್ಧೆಯನ್ನು ಅನರ್ಹ ಮಾಡಿದ್ದು, ಕಾರಣ ಅವರ ನಾಮಪತ್ರವನ್ನು ರಿಟರ್ನಿಂಗ್ ಆಫೀಸರ್ ಕೆ.ವಿ ಕಾವ್ಯರಾಣಿ ಪರಿಶೀಲನೆ ವೇಳೆ ತಿರಸ್ಕಾರ ಮಾಡಿದ್ದಾರೆ. ಇದರಿಂದಾಗಿ ಬ್ಯಾಂಕಿನ 16 ನಿರ್ದೇಶಕ ಸ್ಥಾನಕ್ಕೆ ಒಟ್ಟು 44 ಅಭ್ಯರ್ಥಿಗಳಿಂದ ಸಲ್ಲಿಕೆಯಾದ 84 ನಾಮಪತ್ರಗಳು ಸ್ವೀಕಾರ್ಹವಾಗಿವೆ.
ಹಿಂಪಡೆಯಲು ಇಂದು ಕೊನೆ ದಿನ
ಇಂದು (ಭಾನುವಾರ )KDCC ಬ್ಯಾಂಕ್ ಚುನಾವಣೆಗೆ ಸಂಬಂಧಿಸಿ ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ. ಹೀಗಾಗಿ 44 ಅಭ್ಯರ್ಥಿಗಳಲ್ಲಿ ಸಾಕಷ್ಟು ನಾಮಪತ್ರ ಹಿಂಪಡೆಯುವ ಸಾಧ್ಯತೆಯಿದೆ. ಕೆಲವರು ಅಧಿಕೃತ ಅಭ್ಯರ್ಥಿಗಳಿಗೆ ನ್ಯಾಯಾಲಯದಲ್ಲಿ ತೊಂದರೆ ಆದಲ್ಲಿ, ನಾಮಪತ್ರ ಪರಿಶೀಲನೆ ವೇಳೆ ತಿರಸ್ಕೃತ ಆದಲ್ಲಿ ಉಮೇದುವಾರಿಕೆ ಇರಬೇಕು ಎಂದು ನಾಮಪತ್ರ ಸಲ್ಲಿಸಿದ್ದಾರೆ. ಹೀಗಾಗಿ ಅಂತವರು ಕೆಲವರು ಉಮೇದುವಾರಿಕೆ ಪರತ್ ತೆಗೆಯುವ ಸಾಧ್ಯತೆಗಳಿದೆ ಎನ್ನಲಾಗಿದೆ.
ಶಾಸಕರು/ಪ್ರಭಾವಿಗಳು
ಶಾಸಕ ಸತೀಶ ಸೈಲ್ (ಕಾರವಾರ), ಶಾಸಕ ಶಿವರಾಮ ಹೆಬ್ಬಾರ (ಯಲ್ಲಾಪುರ), ಜಿಲ್ಲಾ ಉಸ್ತುವಾರಿ ಸಚಿವ
ಪ್ರಮುಖ ನಾಯಕರ ನಾಮಪತ್ರ ಸ್ವೀಕಾರ :-
ಕಾರವಾರದಿಂದ (karwar)ನಂದಕಿಶೋರ ನಾಯ್ಕ, ಸುರೇಶ ರಾಮ ಪೆಡೇಕರ್ ,ಶಿರಸಿಯಿಂದ ಜಿ.ಆರ್.ಹೆಗಡೆ ಬೆಳ್ಳೇಕೇರಿ, ಗಣಪತಿ ಜೋಶಿ ಕೊಪ್ಪಲತೋಟ, ಸಿದ್ದಾಪುರದಿಂದ ಬಾಲಚಂದ್ರ ಹೆಗಡೆ ಹಳದೋಟ, ರಾಘವೇಂದ್ರ ಶಾಸ್ತ್ರಿ,ಯಲ್ಲಾಪುರದಿಂದ ರಾಮಕೃಷ್ಣ ಹೆಗಡೆ ಗೋರ್ಸಗದ್ದೆ,ಮುಂಡಗೋಡದಿಂದ ಎಲ್.ಟಿ.ಪಾಟೀಲ್; ಹಳಿಯಾಳದಿಂದ ಎಸ್.ಎಲ್.ಘೋಟೆಕರ, ಅಂಕೋಲಾದಿಂದ ಬೀರಣ್ಣ ನಾಯಕ, ಕುಮಟಾದಿಂದ (kumta)ಗಜಾನನ ಪೈ, ರಾಜಗೋಪಾಲ ಅಡಿ, ಹೊನ್ನಾವರದಿಂದ ಶಿವಾನಂದ ಹೆಗಡೆ ಕಡತೋಕ,ಜೊಯಿಡಾ ದಿಂದ ಕೃಷ್ಣ ದೇಸಾಯಿ, ಹಾಗೂ ಒಕ್ಕಲುತನ, ಗ್ರಾಹಕರ, ಅರ್ಬನ್ ಬ್ಯಾಂಕ್ ಸೇರಿದಂತೆ ಇತರೆ ಕ್ಷೇತ್ರಗಳಿಂದ ಗೋಪಾಲಕೃಷ್ಣ ವೈದ್ಯ, ಆರ್.ಎಂ.ಹೆಗಡೆ ಬಾಳೇಸರ, ತಿಮ್ಮಯ್ಯ ಹೆಗಡೆ ಉಲ್ಲಾಳ, ಮೋಹನದಾಸ ನಾಯಕ ಮುಂತಾದವರ ನಾಮಪತ್ರಗಳು ಸ್ವೀಕೃತಗೊಂಡಿವೆ.
Honnavar : ಮಹಿಳೆ ಸ್ನಾನ ಮಾಡುವಾಗ ಇಣುಕಿದ ಕಾಮುಕ ಪೊಲೀಸರ ವಶಕ್ಕೆ
ನಾಮಪತ್ರ ವಾಪಸ್ ಪಡೆಯುವ ಪ್ರಕ್ರಿಯೆ ಮುಗಿದ ನಂತರ ಅಕ್ಟೋಬರ್ 25 ರಂದು ನಡೆಯಲಿರುವ ಚುನಾವಣೆಯ ಅಂತಿಮ ಸ್ಪರ್ಧಿಗಳ ಪಟ್ಟಿ ಪ್ರಕಟವಾಗಲಿದೆ.

And for orders more than 2499 rs 15% discount ( for Deepavali)We also take birthday parties and family get together etc also.


