For the best experience, open
https://m.kannadavani.news
on your mobile browser.
Advertisement

KFD:ಉತ್ತರ ಕನ್ನಡ ಜಿಲ್ಲೆಯಲ್ಲಿ 4 ಮಂಗನ ಕಾಯಿಲೆ (KFD) ಸೊಂಕು ಪತ್ತೆ! ಎಲ್ಲೆಲ್ಲಿ ವಿವರ ನೋಡಿ

ಕಾರವಾರ :- ಉತ್ತರ ಕನ್ನಡ (uttara kannda)ಜಿಲ್ಲೆಯಲ್ಲಿ ಮತ್ತೆ ಮಂಗನಕಾಯಿಲೆ (kasnur forest disease )ಕಾಣಿಸಿಕೊಂಡಿದ್ದು ಜಿಲ್ಲೆಯಲ್ಲಿ ನಾಲ್ಕು ಜನರಲ್ಲಿ ಮಂಗನ ಕಾಯಿಲೆ (KFD)ಸೋಂಕು ಪತ್ತೆಯಾಗಿದೆ.
02:53 PM Apr 07, 2025 IST | ಶುಭಸಾಗರ್
kfd ಉತ್ತರ ಕನ್ನಡ ಜಿಲ್ಲೆಯಲ್ಲಿ 4 ಮಂಗನ ಕಾಯಿಲೆ  kfd  ಸೊಂಕು ಪತ್ತೆ  ಎಲ್ಲೆಲ್ಲಿ ವಿವರ ನೋಡಿ

Uttara kannda: ಜಿಲ್ಲೆಯಲ್ಲಿ 4 ಮಂಗನ ಕಾಯಿಲೆ (KFD) ಸೊಂಕು ಪತ್ತೆ! ಎಲ್ಲೆಲ್ಲಿ ವಿವರ ನೋಡಿ

Advertisement

ಕಾರವಾರ :- ಉತ್ತರ ಕನ್ನಡ (uttara kannda)ಜಿಲ್ಲೆಯಲ್ಲಿ ಮತ್ತೆ ಮಂಗನಕಾಯಿಲೆ (kasnur forest disease )ಕಾಣಿಸಿಕೊಂಡಿದ್ದು ಜಿಲ್ಲೆಯಲ್ಲಿ ನಾಲ್ಕು ಜನರಲ್ಲಿ ಮಂಗನ ಕಾಯಿಲೆ (KFD)ಸೋಂಕು ಪತ್ತೆಯಾಗಿದೆ.

ಕಳೆದ ವರ್ಷ ಮಾರ್ಚ ತಿಂಗಳಲ್ಲಿ 47 ಜನರಿಗೆ ಮಂಗನಕಾಯಿಲೆ ಕಾಣಿಸಿಕೊಂಡಿತ್ತು. ಎರಡು ಸಾವುಗಳು ಸಂಭವಿಸಿದ್ದವು. ಆದ್ರೆ ಇದೀಗ ಆರೋಗ್ಯ ಇಲಾಖೆ ಮುಂಚಿತವಾಗಿ ಕ್ರಮ ಕೈಗೊಂಡಿದ್ದರೂ ಸೊಂಕು ಮತ್ತೆ ಪತ್ತೆಯಾಗಿದೆ.

ಉತ್ತರ ಕನ್ನಡ ಜಿಲ್ಲೆಯ ಶಿರಸಿ,ಸಿದ್ದಾಪುರ, ಹೊನ್ನಾವರ ತಾಲೂಕಿನಲ್ಲಿ ಮಂಗನಕಾಯಿಲೆ ಸೊಂಕು ಪತ್ತೆಯಾಗಿದೆ.

ಇದನ್ನೂ ಓದಿ:-ಉತ್ತರ ಕನ್ನಡ ಜಿಲ್ಲೆಯಲ್ಲಿ ಮಂಗನ ಕಾಯಿಲೆಗೆ ಎರಡು ಸಾವು-43 ಕ್ಕೆ ಏರಿಕೆ ಕಂಡ KFD ಗೆ ಸೊಳ್ಳೆ ತಿಗಣೆ ಓಡಿಸುವ ಔಷಧವೇ ಗತಿ!

ಶಿರಸಿ ತಾಲೂಕಿನ ಹೆಗಡೆ ಕಟ್ಟದ ರೇವಣ ಕಟ್ಟ ದಲ್ಲಿ 58 ವರ್ಷದ ಮಹಿಳೆಗೆ ಸೋಂಕು ಕಾಣಿಸಿಕೊಂಡರೆ ಹೊನ್ನಾವರದ ಜನಕಡಕಲ್ ನಲ್ಲಿ ಇಬ್ಬರು ಮಹಿಳೆಯರು  ಹಾಗೂ ಸಿದ್ದಾಪುರ ತಾಲೂಕಿನ ಕಾನಸೂರಿನಲ್ಲಿ ಹಾವೇರಿಯಿಂದ ಬಂದ 14 ವರ್ಷದ ಬಾಲಕನಲ್ಲಿ ಸೋಂಕು ಪತ್ತೆಯಾಗಿದೆ.

ಕಳೆದಬಾರಿ ಹೋಲಿಸಿದರೆ ತಡವಾಗಿ ಸೋಂಕು ಪತ್ತೆಯಾಗಿದೆ. ಹೀಗಾಗಿ ಆರೋಗ್ಯ ಇಲಾಖೆ ಸಹ ಕ್ರಮ ಕೈಗೊಂಡಿದ್ದು ಮುನ್ನೆಚ್ಚಿರಿಕಾ ಕ್ರಮ ಕೈಗೊಂಡಿದೆ. ಹಳ್ಳಿಗಳಲ್ಲಿ ಜನರಿಗೆ ಕಾಡಿನತ್ತ ತೆರಳದಂತೆ ಸೂಚನೆ ನೀಡಲಾಗಿದ್ದು ಡಿ.ಎಮ್.ಪಿ ಆಯಲ್ ಗಳನ್ನು ಉಣುಗು ಕಚ್ಚದಂತೆ ಹಚ್ಚಿಕೊಳ್ಳಲು ಸಲಹೆ ನೀಡಿದೆ.

ಆರೋಗ್ಯ ಇಲಾಖೆ ಮಾಹಿತಿ ಪ್ರಕಾರ ಸುಮಾರು 20 ವರ್ಷಗಳ ಹಿಂದೆ ಮಂಗನ ಕಾಯಿಲೆ ಕಂಡು ಬಂದಿತ್ತು. ಮಂಗನ ಕಾಯಿಲೆಯನ್ನು ಕ್ಯಾಸನೂರು ಫಾರೆಸ್ಟ್ ಕಾಯಿಲೆ (KFD) ಎನ್ನುತ್ತಾರೆ. ಈ ವೈರಸ್ ಫ್ಲಾವಿವಿರಿಡೆ ಎಂಬ ವೈರಸ್ ಪಂಗಡಕ್ಕೆ ಸೇರಿದೆ. ಶಿವಮೊಗ್ಗ ಜಿಲ್ಲೆ ಕ್ಯಾಸನೂರು ಕಾಡಿನಲ್ಲಿ ಈ ಕಾಯಿಲೆಗೆ ತುತ್ತಾದ ಒಂದು ಮಂಗನ ದೇಹದಲ್ಲಿ 1957ರಲ್ಲಿ ಈ ವೈರಸ್‌ನ್ನು ಮೊದಲ ಬಾರಿ ಗುರುತಿಸಲಾಯಿತು. ಅಂದಿನಿಂದ ವರ್ಷವೂ 400-500 ಜನರಿಗೆ ಈ ಕಾಯಿಲೆ ಕಂಡು ಬಂದಿದೆ. ಉಣುಗುಗಳ ಕಡಿತದಿಂದ ಹರಡುವ ಈ ಕಾಯಿಲೆ ಡಿಸೆಂಬರ್‌ನಿಂದ ಎಪ್ರಿಲ್ ತಿಂಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತದೆ. ಉಣುಗು ಯೌವ್ವನಾವಸ್ಥೆಯಲ್ಲಿರುವಾಗ ಮಾತ್ರ ಕಚ್ಚುತ್ತವೆ ಎನ್ನುತ್ತಾರೆ ವೈದ್ಯರು. ಈ ವೈರಸ್ ಎಲ್ಲಿಂದ ಬಂತು ಎಂಬುದು ಈವರೆಗೂ ಪತ್ತೆಯಾಗಿಲ್ಲ.

ಹೆಚ್ಚು ಬಾಧಿತವಾಗುವ ಪ್ರದೇಶಗಳು:-

ಶಿವಮೊಗ್ಗ ಜಿಲ್ಲೆಯ ಸಾಗರ, ತೀರ್ಥಹಳ್ಳಿ, ಹೊಸನಗರ, ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ, ಭಟ್ಕಳ, ಸಿದ್ದಾಪುರ, ಜೊಯಿಡಾ, ದಕ್ಷಿಣ ಕನ್ನಡದ ಪುತ್ತೂರು, ಬೆಳ್ತಂಗಡಿ ತಾಲೂಕುಗಳು, ಉಡುಪಿ ಜಿಲ್ಲೆ, ಚಾಮರಾಜನಗರದ ಬಂಡೀಪುರ, ಮೈಸೂರಿನ ಕೆಲ ಅರಣ್ಯ ಪ್ರದೇಶದಲ್ಲಿ ಈ ಕಾಯಿಲೆ ಹೆಚ್ಚಾಗಿ ಹರಡುವ ಪ್ರದೇಶಗಳು.

ರೋಗ ಲಕ್ಷಣಗಳು

ಮನುಷ್ಯರಿಗೆ ಉಣುಗು ಕಚ್ಚಿದ 3-8 ದಿನಗಳ ಕಾಲ ರೋಗದ ಲಕ್ಷಣಗಳಿರುವುದಿಲ್ಲ. ನಂತರ ಜ್ವರ, ಚಳಿ ಜ್ವರ, ತಲೆನೋವು ಕಾಣುತ್ತದೆ. ವಾಂತಿಯೊಂದಿಗೆ ಮೈ-ಕೈ ನೋವು, ಜಠರ, ಕರುಳಿನ ರೋಗ ಲಕ್ಷಣಗಳು, ರಕ್ತಸ್ರಾವಗಳು ಕಾಣಿಸಿಕೊಳ್ಳುತ್ತವೆ.

ಕಡಿಮೆ ರಕ್ತದೊತ್ತಡ, ಕಡಿಮೆ ಪ್ಲೇಟ್‌ಲೆಟ್ ಸಂಖ್ಯೆ, ಕೆಂಪು ರಕ್ತಕಣ, ಬಿಳಿ ರಕ್ತಕಣಗಳ ಸಂಖ್ಯೆ ಇಳಿಮುಖವಾಗುವ ಲಕ್ಷಣ ಕಂಡು ಬರಬಹುದು.

ಒಂದೆರಡು ವಾರಗಳ ಬಳಿಕ ಕೆಲವು ರೋಗಿಗಳು ಚೇತರಿಸಿಕೊಳ್ಳುತ್ತಾರೆ.ಕೆಲವರಲ್ಲಿ (ಶೇ.10-20) ಮೂರನೇ ವಾರದ ಆರಂಭದಲ್ಲಿ ಎರಡನೇ ಹಂತದ ರೋಗ ಲಕ್ಷಣ ಕಾಣಿಸುತ್ತದೆ.

ಇದನ್ನೂ ಓದಿ:-Kumta :ಕತಗಾಲ್ ನಲ್ಲಿ ಆಹಾರ ಸಿಗದೇ ನಿತ್ರಾಣಗೊಂಡ ಕರಿ ಚಿರತೆ ರಕ್ಷಣೆ

ಜ್ವರ, ನರಸಂಬಂಧಿ ತೊಂದರೆಗಳಾದ ತೀವ್ರ ತಲೆ ನೋವು,ಮಾನಸಿಕ ತೊಂದರೆ, ನಡುಕ, ದೃಷ್ಟಿ ನ್ಯೂನತೆ ಇದರ ಲಕ್ಷಣಗಳು.ಸಾವು ಸಂಭವಿಸುವ ಸಾಧ್ಯತೆ ಸುಮಾರು ಶೇ.3-5 ಮಾತ್ರ.ಆದರೆ ಸಾವು ಸಂಭವಿಸುವುದು ತೀವ್ರ ರಕ್ತ ಸ್ರಾವದಿಂದ ಹೀಗಾಗಿ ಜಾಗೃತಿ ಇರಬೇಕು.

ಈ ರೋಗಕ್ಕೆ ಈವರೆಗೂ ಔಷಧ ಕಂಡು ಹಿಡಿದಿಲ್ಲ. ಸದ್ಯ ಶಿವಮೊಗ್ಗದಲ್ಲಿ ರೋಗ ಪತ್ತೆಗೆ ಲ್ಯಾಬ್ ಇದೆ. ಉತ್ತರ ಕನ್ನಡ ದಲ್ಲಿ ಲ್ಯಾಬ್  ಪ್ರಾರಂಭವಾಗಬೇಕಿದೆ.ಇತ್ತೀಚಿನ ವರೆಗೂ ಬೂಸ್ಟಿಂಗ್ ಡೋಸ್ ನೀಡುತಿದ್ದು ಇದೀಗ ಅದರ ವೈಫಲ್ಯದಿಂದ ಬೂಸ್ಟರ್ ಡೋಸ್ ಚುಚ್ಚುಮದ್ದು ನೀಡುವುದನ್ನು  ನಿಲ್ಲಿಸಲಾಗಿದೆ.

ಮಂಗನ ಕಾಯಿಲೆ ತಡೆಗೆ ಏನು ಮಾಡಬೇಕು?

1)ಮಂಗ ಸಾವಿಗೀಡಾದರೆ ಪಶುವೈದ್ಯಾಲಯ/ ಆರೋಗ್ಯ ಪ್ರಾಧಿಕಾರಕ್ಕೆ ಮಾಹಿತಿ ನೀಡಬೇಕು.

2)ಅರಣ್ಯದಲ್ಲಿ ಕೆಲಸ ಮಾಡುವವರು/ ಭೇಟಿ ನೀಡುವವರು ರಕ್ಷಣಾತ್ಮಕ ಬಟ್ಟೆ, ಗೌಸ್, ಬೂಟ್ಸ್ ಬಳಸಬೇಕು.

3)ಅರಣ್ಯಕ್ಕೆ ತೆರಳುವ ಮೊದಲು ಮುಚ್ಚದೆ ಇರುವ ದೇಹದ ಭಾಗಗಳಿಗೆ ಕೀಟಾಣುಗಳನ್ನು ಓಡಿಸುವ ಡಿಎಂಪಿಯಂತಹ ಎಣ್ಣೆ ಹಚ್ಚಬೇಕು.

4)ಅರಣ್ಯದಿಂದ ಹಿಂದಿರುಗಿದ ಬಳಿಕ ಬಿಸಿ ನೀರು/ ಸೋಪಿನಿಂದ ತೊಳೆದು ಸ್ನಾನ ಮಾಡಬೇಕು.

5)ಮಂಗಗಳು ಸಾವಿಗೀಡಾದ ಅರಣ್ಯಕ್ಕೆ ಹೋಗದಂತೆ ಎಚ್ಚರ ವಹಿಸಬೇಕು.

6) ಜಾನುವಾರು, ಸಾಕುಪ್ರಾಣಿಗಳಲ್ಲಿ ನೆಲೆಸುವ ಪರೋಪಜೀವಿಗಳನ್ನು ನಿಯಂತ್ರಿಸಬೇಕು.

7) ಮಂಗಗಳು ಸತ್ತ ಜಾಗದ ಸುತ್ತಮುತ್ತ ಕ್ರಿಮಿನಾಶಕ ಸಿಂಪಡಿಸಬೇಕು.

8)ರೋಗ ಭಾದಿತ ಪ್ರದೇಶದಲ್ಲಿ ಹಾಗೂ ಮನೆಯ ಸುತ್ತಮುತ್ತ ಎಲೆಗಳ ಸಂಗ್ರಹ,ಹುಲ್ಲುಗಳ ಸಂಗ್ರಹ ಇರದಂತೆ ನೋಡಿಕೊಳ್ಳಬೇಕು.

9) ರಕ್ಷಣಾ ಸಾಧನ ಇಲ್ಲದೇ ಮೃತ ಮಂಗಗಳ ದೇಹ ಮುಟ್ಟಬಾರದು.

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ