Kumta | ವೈದ್ಯಕೀಯ ಪರೀಕ್ಷೆ ವೇಳೆ ಪರಾರಿಯಾಗಿ ಹುಡುಗಿ ಜೊತೆ ನಿಶ್ಚಿತಾರ್ಥ ಮಾಡಿಕೊಳ್ಳಲು ಹೋಗಿದ್ದ ಆರೋಪಿ ಸೆರೆ!
Kumta | ವೈದ್ಯಕೀಯ ಪರೀಕ್ಷೆ ವೇಳೆ ಪರಾರಿಯಾಗಿ ಹುಡುಗಿ ಜೊತೆ ನಿಶ್ಚಿತಾರ್ಥ ಮಾಡಿಕೊಳ್ಳಲು ಹೋಗಿದ್ದ ಆರೋಪಿ ಸೆರೆ!
ಕುಮಟಾ (October 14):- ಉತ್ತರ ಕನ್ನಡ ಜಿಲ್ಲೆಯ ಕುಮಟಾ (kumta) ದಲ್ಲಿ ಕಳ್ಳತನ ಪ್ರಕರಣವೊಂದರ ಆರೋಪಿಯಾಗಿದ್ದ ಭಟ್ಕಳ ಮೂಲದ ಪೌಸಿನ್ ಅಹ್ಮದ್ ಎಂಬಾತ ಶುಕ್ರವಾರ ಕುಮಟಾ ಪೊಲೀಸರು ನ್ಯಾಯಾಲಯಕ್ಕೆ ಹಾಜುರು ಪಡಿಸಲು ವೈದ್ಯಕೀಯ ಪರೀಕ್ಷೆಗೆ ಕರೆದೊಯ್ದ ವೇಳೆ ಪರಾರಿಯಾಗಿದ್ದನು.
Kumta| ಕೊನೆಗೂ ಸಿಕ್ಕ ಪುರಸಭೆ ಆರ್.ಓ ವೆಂಕಟೇಶ್ |ಜಿಲ್ಲಾಧಿಕಾರಿ ಹೇಳಿದ್ದೇನು?
ಈತನನ್ನು ಇಂದು ಮಂಡ್ಯದ ಮದ್ದೂರಿನಲ್ಲಿ ಕುಮಟಾ ಠಾಣೆ ಪಿ.ಎಸ್.ಐ ,ಮಯೂರ್ ಪಟ್ಟಣಶಟ್ಟಿ ,ಸಿಬ್ಬಂದಿಗಳಾದ ಗಣೇಶ್ ನಾಯಕ್ ,ಕಿರಣ್ ನಾಯಕ್ ,ಚಿದಾನಂದ ನಾಯ್ಕ ರವರು ಮತ್ತೆ ವಶಕ್ಕೆ ಪಡೆದು ಬಂದಿಸಿ ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ.

ಘಟನೆ ಏನಾಗಿತ್ತು?
ಅಂಗಡಿಯೊಂದರ ಲಕ್ಷಾಂತರ ಮೌಲ್ಯದ ಎಕ್ಸಿಟ್ ಬ್ಯಾಟರಿಗಳ ಕಳ್ಳತನ ಹಾಗೂ ಕಾರುಗಳ ಕಳ್ಳತನದಲ್ಲಿ ಆರೋಪಿಯಾಗಿರುವ ಭಟ್ಕಳದ(bhatkal) ಫೌಸಿನ್ ಅಹ್ಮದ್ ಪರಾರಿಯಾದವನಾಗಿದ್ದು ,ಹಲವು ಕಳ್ಳತನ ಪ್ರಕರಣದಲ್ಲಿ ಈತನನ್ನು ಪಿ.ಎಸ್.ಐ ಮಯೂರ್ ಪಟ್ಟಣಶಟ್ಟಿ ಬಂಧಿಸಿ ಕುಮಟಾ ಠಾಣೆಗೆ ಕರೆತಂದಿದ್ದರು. ಭಟ್ಕಳದಿಂದ ಕುಮಟಾಕ್ಕೆ ವಿಚಾರಣೆಗೆ ಕರೆತಂದಿದ್ದರು .
Bhatkal| ಮುರುಡೇಶ್ವರ-ಸಮುದ್ರದಲ್ಲಿ ಮುಳಗಿ ಬಾಲಕ ಸಾವು
ನ್ಯಾಯಾಲಯಕ್ಕೆ ಹಾಜುರು ಪಡಿಸಿ ದೋಷಾರೋಪಣೆ ಪಟ್ಟಿ ಸಲ್ಲಿಸುವ ಸಲವಾಗಿ ಈತನನ್ನು ವೈದ್ಯಕೀಯ ಪರೀಕ್ಷೆಗಾಗಿ ಕುಮಟಾ ಸರ್ಕಾರಿ ಆಸ್ಪತ್ರೆಗೆ ಮೂರುಜನ ಪೊಲೀಸ್ ಸಿಬ್ಬಂದಿ ಕರೆದೊಯ್ದಿದ್ದರು.
ಈವೇಳೆ ಪೊಲೀಸ್ ಸಿಬ್ಬಂದಿಗಳ ನಿರ್ಲಕ್ಷತನದ ಅವಕಾಶ ಪಡೆದುಕೊಂಡ ಮೌಸಿನ್ ಅಹ್ಮದ್ ತಪ್ಪಿಸಿಕೊಂಡು ಪರಾರಿಯಾಗಿದ್ದ.ಈತನನ್ನು ಹುಡುಕಲು ತಂಡ ರಚಿಸಿ ,ಶೋಧ ಕಾರ್ಯ ಮುಂದುವರೆಸಿದ್ದರು.
ಹುಡುಗಿ ಜೊತೆ ನಿಶ್ಚಿತಾರ್ಥ ಕ್ಕೆ ಸಿದ್ದವಾಗಿದ್ದ!
ಇನ್ನು ಕುಮಟಾದ (kumta)ಆಸ್ಪತ್ರೆಯಿಂದ ಪರಾರಿಯಾದ ಈತ ನೇರ ಮಂಡ್ಯದ ಮದ್ದೂರು ಕಡೆ ತೆರಳಿದ್ದನು. ಅಲ್ಲಿ ಈತ ಯುವತಿಯೊಬ್ಬಳನ್ನು ಪ್ರೀತಿಸುತಿದ್ದು ,ಆಕೆಯೊಂದಿಗೆ ನಿಶ್ಚಿತಾರ್ಥ ನಿರ್ಧಾರವಾಗಿತ್ತು. ಹೀಗಾಗಿ ಕುಟುಂಬ ಸಹ ಭಟ್ಕಳದಿಂದ ಮಂಡ್ಯದ ಕಡೆ ಹೊರಟಿತ್ತು.
Kumta|ಅನಧಿಕೃತ ಕಟ್ಟಡ ಅನುಮತಿಗೆ ಶಾಸಕ,ಪುರಸಭೆ ಮುಖ್ಯಾಧಿಕಾರಿ ಒತ್ತಡ -ಮನನೊಂದ ಆರ್.ಓ ಪತ್ರ ಬರೆದಿಟ್ಟು ಕಾಣೆ!
ಇನ್ನು ಈತ ನೇರ ಮಂಡ್ಯಕ್ಕೆ ಹೋಗಿದ್ದು,ತಾಯಿಗೆ ಕರೆಮಾಡಿದ್ದನು. ತಪ್ಪಿಸಿಕೊಳ್ಳುವಾಗ ಸ್ವಲ್ಪ ಗಾಯಗಳಾಗಿದ್ದರಿಂದ ಮದ್ದೂರಿನ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆಯಲು ಹೋದಾಗ ಈತನನ್ನು ಪೊಲೀಸರು ಬಂಧಿಸಿದ್ದಾರೆ.
ಇದೀಗ ಈ ಆರೋಪಿಯನ್ನು ಕುಮಟಾಗೆ ಕರೆತರಲಾಗಿದ್ದು ,ಇಂದು ನ್ಯಾಯಾಲಯಕ್ಕೆ ಹಾಜುರು ಪಡಿಸಲಿದ್ದಾರೆ.