ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Kumta :ಕರ್ತವ್ಯದಲ್ಲಿ ಮದ್ಯ ಸೇವಿಸಿ  ಹಿರಿಯ ಅಧಿಕಾರಿ ಜೊತೆ ಅನುಚಿತ ವರ್ತನೆ -ಸೇವೆಯಿಂದ ಅಮಾನತು.

ಕಾರವಾರ :- ಮದ್ಯ ಸೇವಿಸಿ ಕರ್ತವ್ಯ ನಿರ್ವಹಿಸುತಿದ್ದನ್ನು ಪ್ರಶ್ನೆ ಮಾಡಿದ ಮೇಲಾಧಿಕಾರಿ ಜೊತೆ ಅನುಚಿತ ವರ್ತನೆ ಮಾಡಿದ ಉತ್ತರ ಕನ್ನಡ ಜಿಲ್ಲೆಯ ಕುಮಟಾ(kumta) ಪೊಲೀಸ್ (police) ಠಾಣೆಯ ಎ.ಎಸ್.ಐ ನಾಗರಾಜಪ್ಪನವರನ್ನು ಅಮಾನತು ಮಾಡಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಎಂ. ನಾರಾಯಣ್ ಅಮಾನತು ಮಾಡಿ ಆದೇಶಿಸಿದ್ದಾರೆ.
10:38 PM Mar 14, 2025 IST | ಶುಭಸಾಗರ್

Kumta :ಕರ್ತವ್ಯದಲ್ಲಿ ಮದ್ಯ ಸೇವಿಸಿ  ಹಿರಿಯ ಅಧಿಕಾರಿ ಜೊತೆ ಅನುಚಿತ ವರ್ತನೆ -ಸೇವೆಯಿಂದ ಅಮಾನತು.

Advertisement

ಕಾರವಾರ :- ಮದ್ಯ ಸೇವಿಸಿ ಕರ್ತವ್ಯ ನಿರ್ವಹಿಸುತಿದ್ದನ್ನು ಪ್ರಶ್ನೆ ಮಾಡಿದ ಮೇಲಾಧಿಕಾರಿ ಜೊತೆ ಅನುಚಿತ ವರ್ತನೆ ಮಾಡಿದ ಉತ್ತರ ಕನ್ನಡ ಜಿಲ್ಲೆಯ ಕುಮಟಾ (kumta)ಪೊಲೀಸ್ ಠಾಣೆಯ ಎ.ಎಸ್.ಐ ನಾಗರಾಜಪ್ಪನವರನ್ನು ಅಮಾನತು ಮಾಡಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಎಂ. ನಾರಾಯಣ್  ಅಮಾನತು ಮಾಡಿ ಆದೇಶಿಸಿದ್ದಾರೆ.

ಪ್ರಕೃತಿ ಮೆಡಿಕಲ್ ,ಕಾರವಾರ.

ಎ.ಎಸ್ .ಐ ನಾಗರಾಜಪ್ಪ ಇವರನ್ನು ಕುಮಟಾ ತಾಲೂಕಿನ ಕತಗಾಲ್ ಚಕ್ ಪೋಸ್ಟ್ ಗೆ ನಿಯೋಜನೆ ಮಾಡಲಾಗಿತ್ತು‌ . ಈ ವೇಳೆ ಕತಗಾಲ ಚೆಕ್‌ಪೋಸ್ಟ್  ನಲ್ಲಿ ಕರ್ತವ್ಯದಲ್ಲಿ ಸರಾಯಿ ಕುಡಿದು ಕರ್ತವ್ಯ ನಿರ್ವಹಿಸಿ ಹಿರಿಯ ಅಧಿಕಾರಿಗಳ ಜೊತೆಗೆ ಅನುಚಿತವಾಗಿ ಹಾಗೂ ಉದ್ಧಟತನದಿಂದ ವರ್ತಿಸಿ ವೈದ್ಯಕೀಯ ಪರೀಕ್ಷೆಗೆ ನಿರಾಕರಿಸಿ ಗಲಾಟೆ ಮಾಡುವ ಮೂಲಕ ಅಶಿಸ್ತು ತೋರಿದ್ದಾರೆ‌ .

ಇದನ್ನೂ ಓದಿ:-Kumta :ಕತಗಾಲ್ ನಲ್ಲಿ ಆಹಾರ ಸಿಗದೇ ನಿತ್ರಾಣಗೊಂಡ ಕರಿ ಚಿರತೆ ರಕ್ಷಣೆ

Advertisement

ಈ ಕಾರಣ ಅದ್ಯ ಕರ್ತವ್ಯದಲ್ಲಿ ಅತೀವ ಆಶಿಸ್ತು, ನಿರ್ಲಕ್ಷತನ ಹಾಗೂ ಬೇಜವಾಬ್ದಾರಿತನವನ್ನು ಪ್ರದರ್ಶಿಸಿದ ಕಾರಣ  ನಾಗರಾಜಪ್ಪ ಎನ್. ಎಎಸ್‌ಐ ಕುಮಟಾ ಪೊಲೀಸ್ ಠಾಣೆ ರವರನ್ನು ಅವರ ಮೇಲಿನ ಆರೋಪ ಗಳ ಬಗ್ಗೆ ಇಲಾಖಾ ವಿಚಾರಣೆಯನ್ನು ಬಾಕಿಯಿರಿಸಿ ತಕ್ಷಣದಿಂದ ಜಾರಿಗೆ ಬರುವಂತೆ ಸೇವೆಯಿಂದ ಅಮಾನತ್ತುಗೊಳಿಸಲಾಗಿದೆ.

ಇದನ್ನೂ ಓದಿ:-Kumta :ಫೈನಾನ್ಸ್ ನಿಂದ ಮಹಿಳಾ ವ್ಯಾಪಾರಿಗೆ ಬೆದರಿಕೆ: ಐವರ ವಿರುದ್ಧ ಪ್ರಕರಣ ದಾಖಲು

ಅಮಾನತ್ತಿನ ಅವಧಿಯಲ್ಲಿ ಅವರು ನಿಯಮ 104 (ಕರ್ನಾಟಕ ನಾಗರಿಕ ಸೇವಾ ನಿಯಮಾವಳಿ) ವಿಭಂದನೆಗಳ ಪ್ರಕಾರ ಮೇಲಾಧಿಕಾರಿಯವರ ಅನುಮತಿಯಿಲ್ಲದೇ ಕೇಂದ್ರ ಸ್ಥಾನವನ್ನು ಬಿಟ್ಟು ಹೋಗಬಾರದು. ಅಮಾನತ್ತಿನ ಅವಧಿಯಲ್ಲಿ ಅವರು ನಿಯಮ 98 (2) ಕರ್ನಾಟಕ ನಾಗರಿಕ ಸೇವಾ ನಿಯಮಾವಳಿ ತದನಂತರ ತಿದ್ದುಪಡಿ ಪ್ರಕಾರ ಅವರ ವೇತನದ ಶೇಕಡಾ 50 ರಷ್ಟು ಜೀವನಾಧಾರ ಭತ್ಯೆಗಳಿಗೆ ಅರ್ಹರಾಗಿರುತ್ತಾರೆ. ಅವರು ಸರಕಾರಿ ವಸತಿಗೃಹದಲ್ಲಿ ವಾಸವಾಗಿದ್ದಲ್ಲಿ ಅಮಾನತ್ತಿನಲ್ಲಿದ್ದ ದಿನಾಂಕದಿಂದ ಈ ಸೌಕರ್ಯವನ್ನು ಕಳೆದುಕೊಳ್ಳುವುದರಿಂದ ನಿಯಮಾವಳಿಗಳ ಪ್ರಕಾರ ಬಾಡಿಗೆ ವಸೂರಿಗೆ ಅರ್ಹರಾಗಿರುತ್ತಾರೆ.

ಇದನ್ನೂ ಓದಿ:- KUMTA -ವಿದ್ಯಾರ್ಥಿಗಳ ಮೇಲೆ ಹಲ್ಲೆಗೆ ಮುಂದಾದ KSRTC ನಿರ್ವಾಹಕ! ಮುಂದೇನಾಯ್ತು ?

ಅಮಾನತ್ತಿನ ಅವಧಿಯಲ್ಲಿ ಯಾವುದೇ ಖಾಸಗಿ ಉದ್ಯೋಗವನ್ನು ಮಾಡಬಾರದು. ಈ ಬಗ್ಗೆ ಪ್ರತಿ ತಿಂಗಳು ಖಾಸಗಿ ಉದ್ಯೋಗ ಮಾಡುತ್ತಿಲ್ಲವೆಂದು ದ್ವಿ ಪ್ರತಿಯಲ್ಲಿ ಪ್ರಮಾಣ ಪತ್ರ ಸಲ್ಲಿಸಿ ಜೀವನಾಧಾರ ಭತ್ಯೆ ಪಡೆಯತಕ್ಕದ್ದು. ಅಮಾನತ್ತಿಗೆ ಸಂಬಂಧಿಸಿದ ಕೆ.ಸಿ.ಎಸ್.ಆರ್ ನ ಎಲ್ಲಾ ನಿಯಮಗಳ ಷರತ್ತುಗಳು ಅನ್ವಯವಾಗುತ್ತವೆ ಎಂದು ಅಮಾನತು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

Advertisement
Tags :
AlcoholASI suspendedKannda newsKarnatakaKumta newsPolice
Advertisement
Next Article
Advertisement