Kumta: ದೇವಿಮನೆ ಘಟ್ಟ ಭಾಗದಲ್ಲಿ ಗುಡ್ಡ ಕುಸಿತ
ಕಾರವಾರ :- ಉತ್ತರ ಕನ್ನಡ (uttara kannada) ಜಿಲ್ಲೆಯಾಧ್ಯಾಂತ ಹೆಚ್ಚಿನ ಮಳೆಯಾಗುತಿದ್ದು ,ಕಳೆದ 24 ಗಂಟೆಯಲ್ಲಿ ಕುಮಟಾ ತಾಲೂಕಿನಲ್ಲಿ ಸುರಿದ ಮಳೆಗೆ ಕುಮಟಾ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 766E ನಲ್ಲಿ ಗುಡ್ಡ ಕುಸಿದಿದೆ.
10:18 AM May 21, 2025 IST | ಶುಭಸಾಗರ್
Kumta: ದೇವಿಮನೆ ಘಟ್ಟ ಭಾಗದಲ್ಲಿ ಗುಡ್ಡ ಕುಸಿತ.
Advertisement

ಕಾರವಾರ :- ಉತ್ತರ ಕನ್ನಡ (uttara kannada) ಜಿಲ್ಲೆಯಾಧ್ಯಾಂತ ಹೆಚ್ಚಿನ ಮಳೆಯಾಗುತಿದ್ದು ,ಕಳೆದ 24 ಗಂಟೆಯಲ್ಲಿ ಕುಮಟಾ ತಾಲೂಕಿನಲ್ಲಿ ಸುರಿದ ಮಳೆಗೆ ಕುಮಟಾ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 766E ನಲ್ಲಿ ಗುಡ್ಡ ಕುಸಿದಿದೆ.
ರಾಷ್ಟ್ರೀಯ ಹೆದ್ದಾರಿ 766E ನಲ್ಲಿ ಹೆದ್ದಾರಿ ಕಾಮಗಾರಿ ನಡೆಯುತಿದ್ದು , ಈ ಹಿಂದೆ ಗುಡ್ಡವನ್ನು ತುಂಡರಿಸಿ ರಸ್ತೆಮಾಡಲಾಗಿತ್ತು.
ಆದರೇ ಇದೀಗ ಇದೇ ಭಾಗದಲ್ಲಿ ಗುಡ್ಡ ಕುಸಿಯುತಿದ್ದು ಇಂದು ಗುಡ್ಡ ಕುಸಿದು ಕಲ್ಲುಬಂಡೆಗಳು ಹೆದ್ದಾರಿಗೆ ಬಂದು ಬಿದ್ದಿದೆ.ಹೆಚ್ಚಿನ ಮಳೆಯಾದರೇ ಈ ಭಾಗದಲ್ಲಿ ದೊಡ್ಡ ಮಟ್ಟದ ಭೂ ಕುಸಿಯುವ ಸಾಧ್ಯತೆಗಳಿವೆ.
ಇದನ್ನೂ ಓದಿ:-Rain news: ರಾಜ್ಯಾಧ್ಯಾಂತ ಮೂರು ದಿನಗಳಕಾಲ ಮಳೆ
ಕಳೆದ ವರ್ಷ ಸಹ ದೇವಿಮನೆ ಗಟ್ಟ ಭಾಗದಲ್ಲಿ ಗುಡ್ಡ ಕುಸಿದು ಸಂಚಾರ ಸಂಪೂರ್ಣ ಬಂದ್ ಆಗಿತ್ತು.
ಇನ್ನು ಈ ಭಾಗದಲ್ಲಿ ಯಾವಾಗ ಬೇಕಾದರೂ ಗುಡ್ಡ ಕುಸಿತ ( landslide) ಆಗುವ ಸಾಧ್ಯತೆಗಳಿದ್ದು ವಾಹನ ಸವಾರರು ಎಚ್ಚರಿಕೆಯಿಂದ ಸಂಚರಿಸಬೇಕಿದೆ.
Advertisement