Kumta Breaking News :ಮದ್ಯದ ಅಮಲ್ಲಿ ಕೊಲೆ ಆರೋಪಿಗಳ ಬಂಧನ.
Kumta Breaking News :ಮದ್ಯದ ಅಮಲ್ಲಿ ಕೊಲೆ ಆರೋಪಿಗಳ ಬಂಧನ.
Kumta news 28 october 2024 :-ಉತ್ತರಕನ್ನಡ ಜಿಲ್ಲೆಯ ಕುಮಟಾದ ಸರ್ಕಾರಿ ಆಸ್ಪತ್ರೆ ಕ್ವಾಟ್ರಸ್ ಬಳಿ ಗಾರೆ ಕೆಲಸಕ್ಕೆ ಬಂದಿದ್ದ ಹುಬ್ಬಳ್ಳಿ ಮೂಲದ ಇಮ್ತಿಯಾಜ್ (25 ) ಎಂಬಾತನನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದ ಇಬ್ಬರು ಆರೋಪಿಗಳನ್ನು ಕುಮಟಾ ಪೊಲೀಸರು ಬಂಧಿಸಿದ್ದಾರೆ.
ಹುಬ್ಬಳ್ಳಿಯ ಮೌನೇಶ್ ಹಾಗೂ ಸಾಧಿಕ್ ಬಂಧಿತ ಆರೋಪಿಗಳಾಗಿದ್ದಾರೆ.
ಇದನ್ನೂ ಓದಿ:-KUMTA ದಲ್ಲಿ ಪ್ರತ್ಯಕ್ಷವಾಗಿದ್ದು ಚಿರುತೆಯೋ ಕಾಡುಬೆಕ್ಕೋ? ವಿಡಿಯೋ ನೋಡಿ.
ಆರೋಪಿಗಳನ್ನು ಹುಬ್ಬಳ್ಳಿಯಲ್ಲಿ ಬಂಧಿಸಿ ಕುಮಟಾಕ್ಕೆ ಪಿಎಸ್‌ಐ ಮಯೂರ್ ನೇತೃತ್ವದ ತಂಡ ಕತೆತರುತ್ತಿದೆ.
ನಿನ್ನೆ ಮಧ್ಯ ರಾತ್ರಿ ಸುಮಾರು 12ಗಂಟೆ ಅಂದಾಜಿಗೆ ಒಂದೇ ರೂಮಿನಲ್ಲಿದ್ದ ನಾಲ್ಕು ಜನರು ಮಧ್ಯದ ಪಾರ್ಟಿ ಮಾಡಿದ್ದರು. ಕ್ಷುಲ್ಲಕ ಕಾರಣಕ್ಕೆ ಜಗಳ ವಾಗಿದೆ.
ನಾಲ್ವರ ಪೈಕಿ ಮೊಯುದ್ದೀನ್ ಎಂಬಾತ ಊಟ ಮಾಡಿ ನಿದ್ದೆಗೆ ಜಾರಿದ್ರೆ ಮದ್ಯದ ಅಮಲಿನಲ್ಲಿ ಇಬ್ಬರು ಇಮ್ತಿಯಾಝ ನನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.
ಬೆಳಿಗ್ಗೆ ಮೊಯುದ್ದೀನ್ ಎದ್ದು ನೋಡುವಷ್ಟರಲ್ಲಿ ರೂಂ ಮುಂದೆ ಹೆಣವಾಗಿ ಇಮ್ತಿಯಾಜ್ ಬಿದ್ದಿದ್ದು ನಂತರ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.
ಕೊಲೆ ಮಾಡಿ ಹುಬ್ಬಳ್ಳಿಯತ್ತ ಪರಾರಿಯಾಗಿದ್ದ ಆರೋಪಿಗಳಾದ ಮೌನೇಶ್ ಹಾಗೂ ಸಾಧಿಕ್ ನನ್ನು ಬಂಧಿಸಲಾಗಿದ್ದು ಘಟನೆಗೆ ನಿಕರ ಕಾರಣ ತಿಳಿಯಬೇಕಿದೆ.
- ONLINE TRADING FRAUD:ಕೋಟಿ ಆಸೆಗೆ 41 ಲಕ್ಷ ಕಳೆದುಕೊಂಡ ಹೊನ್ನಾವರ ವ್ಯಾಪಾರಿ
- Karwar:ಅರಣ್ಯ ಇಲಾಖೆ ನಿರ್ಲಕ್ಷ ದಿಕ್ಕು ಕಳೆದುಕೊಂಡ ಕಾಂಡ್ಲಾ ನಡಿಗೆ ಪಥ!
- HoneyTrap:ಮಾಲೀಕಯ್ಯ ಗುತ್ತೆದಾರ್ ಗೆ ಕಾಂಗ್ರೆಸ್ ನಾಯಕಿ ಹನಿಟ್ರ್ಯಾಪ್; 20 ಲಕ್ಷಕ್ಕೆ ಬೇಡಿಕೆಯಿಟ್ಟ ಮಹಿಳೆ ಪೊಲೀಸರ ವಶಕ್ಕೆ
- Mla sathish sail ಗೆ ಶಿಕ್ಷೆ ಪ್ರಕಟ ಎಷ್ಟು ವರ್ಷ ವಿವರ ಇಲ್ಲಿದೆ.
- SIRSI :ಸಿದ್ದರಾಮಯ್ಯನವರನ್ನು ಯಾರೂ ಇಳಿಸಲು ರಡಿ ಇಲ್ಲ. -ಸಚಿವ ಮಧು ಬಂಗಾರಪ್ಪ