ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Kumta ಶಾಸಕ ದಿನಕರ್ ಶಟ್ಟಿ ಬೆಡ್ ರೂಮ್ ಕಥೆ ! ಬೆಡ್ ರೂಮ್ ಗೆ ಬಂದ್ಲಾ ಆ ಮಹಿಳೆ!

Kumta :- ಉತ್ತರ ಕನ್ನಡ (uttara kannda ) ಜಿಲ್ಲೆಯ ಕುಮಟಾ (kumta) ಶಾಸಕ ದಿನಕರ್ ಶಟ್ಟಿ ಮನೆಯಲ ಬೆಡ್ ರೂಮ್ ನಲ್ಲಿದ್ದ 80 ಸಾವಿರ ನಗದು ಹಣ ಕಾಣೆಯಾಗಿದೆ.
12:02 PM Dec 04, 2024 IST | ಶುಭಸಾಗರ್

Kumta :- ಉತ್ತರ ಕನ್ನಡ (uttara kannda ) ಜಿಲ್ಲೆಯ ಕುಮಟಾ (kumta) ಶಾಸಕ ದಿನಕರ್ ಶಟ್ಟಿ ಮನೆಯ ಬೆಡ್ ರೂಮ್ ನಲ್ಲಿದ್ದ 80 ಸಾವಿರ ನಗದು ಹಣ ಕಾಣೆಯಾಗಿದೆ ಎಂದು ಸುದ್ದಿಯಾಗಿದೆ.

Advertisement

ಪರಿಚಿತ ಮಹಿಳೆಯೊಬ್ಬರು ಬೆಡ್ ರೂಮ್ ಗೆ ಬಂದು 80 ಸಾವಿರ ಕದ್ದು ಹೋಗಿದ್ದಾರೆ ಎಂದು ಸುದ್ದಿಯಾಗಿದೆ. ಆದರೇ ಶಾಸಕ ದಿನಕರ್ ಶಟ್ಟಿ ಕುಮಟಾ ಠಾಣೆಯಲ್ಲಿ ಈ ಬಗ್ಗೆ ಲಿಖಿತ ದೂರು ನೀಡಿಲ್ಲ.

ಬದಲು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಅಷ್ಟೆ. ಶಾಸಕರು ವ್ಯವಹಾರಕ್ಕಾಗಿ ಹಣವನ್ನು ತಂದಿಟ್ಟಿದ್ದರಂತೆ.

ಪ್ರತಿ ದಿನ ಹಲವು ಜನರು ಶಾಸಕರ ಮನೆಗೆ ಸಹಾಯ ಕೇಳಿ ಬರೋದು ಮಾಮೂಲು . ಅವರಿಗೆ ಚೂರುಪಾರು ಹಣ ನೀಡಿ ಕಳಿಸೋ ವಾಡಿಕೆ ಶಾಸಕರದ್ದು.

Advertisement

ಇದನ್ನೂ ಓದಿ:-KUMTA KSRTC ಡಿಫೋದಲ್ಲಿ ದಹಿಸಿದ ಬಸ್

ಇನ್ನು ಶಾಸಕರಿಗೆ ಪರಿಚಿತವಾದ ಹೊನ್ನಾವರದ ಮಹಿಳೆಯೊಬ್ಬರು ಶಾಸಕರ ಮನೆಯಲ್ಲಿ ಓಡಾಡಿಕೊಂಡು ಅದು-ಇದು ಅಂತ ಸಹಾಯ ಪಡಿತಾರೆ.

ಆದ್ರೆ ಈ ಬಾರಿ ಈ ಮಹಿಳೆ ಶಾಸಕರ ಬೆಡ್ ರೂಮ್ ಗೆ ಹೋಗಿ ಅಲ್ಲಿದ್ದ 80 ಸಾವಿರ ಕಳ್ಳತನ ಮಾಡಿ ಹೋಗಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನು ಶಾಸಕರ ಬೆಡ್ ರೂಮ್ ನಲ್ಲಿ ಇದ್ದ 80 ಸಾವಿರ ಮಾತ್ರ ಮಿಸ್ ಆಗಿದೆ ಎನ್ನಲಾಗಿದೆ.

ಈ ಬಗ್ಗೆ ಶಾಸಕರು ದೂರು ಕೊಡದೇ ಮೌಖಿಕ ತನಿಖೆ ಮಾಡುವಂತೆ ಪೊಲೀಸರಿಗೆ ತಿಳಿಸಿದ್ದಾರೆ. ತಕ್ಷಣ ಮಹಿಳೆಯ ಜಾಡು ಹಿಡಿದ ಪೊಲೀಸರು ಆಕೆಯನ್ನು ಹಿಡಿದು ವಿಚಾರಿಸಿದ್ದಾರೆ.

ಆದ್ರೆ ಆಕೆ ತನಗೆ ಶಾಸಕರು ಸಹಾಯಕ್ಕೆ ಹಣ ಕೊಟ್ಟಿದ್ದಾರೆ ಆದರೇ ಯಾವುದೇ ಹಣ ಕದ್ದಿಲ್ಲ ಎಂದು ಹೇಳಿದ್ದಾರೆ.

ಇನ್ನು ಎಲ್ಲಾ ರೀತಿಯಲ್ಲಿ ಪೊಲೀಸರು ತನಿಖೆ ಕೈಗೊಂಡರೂ ಶಾಸಕರ ಮನೆಯ ಬೆಡ್ ರೂಮ್ ನಲ್ಲಿದ್ದ 80 ಸಾವಿರಕ್ಕೆ ಲೆಕ್ಕ ಸಿಗದೇ ಶಟ್ರು ತಲೆಬಿಸಿ ಮಾಡಿಕೊಂಡಿದ್ದಾರೆ.

ಶಾಸಕರ ಮನೆಯ ಜಗಲಿಗೆ ಬರುವ ಜನ ಬೆಡ್ ರೂಮ್ ಗೆ ಹೋಗಿ ಹಣ ಕದಿಯುತ್ತಾರಾ? ಎಂಬ ಪ್ರಶ್ನೆ ಎದ್ದರೇ , ಶಾಸಕರು ಎಲ್ಲೋ ಲೆಕ್ಕ ಮಿಸ್ ಮಾಡಿಕೊಂಡ್ರ ಎಂಬ ಮಾತು ಸಹ ಆಪ್ತರಿಂದ ಕೇಳಿಬಂದಿದೆ.

ಆದರೂ ಒಬ್ಬ ಮಹಿಳೆಗೆ ಶಾಸಕರ ಮನೆಯಲ್ಲಿ ಬೆಡ್ ರೂಮ್ ಗೆ ಹೋಗುವಷ್ಟು ದೈರ್ಯವೇ ‌ಎಂದು ಜನ ಮಾತನಾಡಿಕೊಳ್ಳುತಿದ್ದಾರೆ.

ಬಂದ ಜನರಿಗೆ ಸಹಾಯ ಮಾಡುವ ಶಾಸಕರ ದುಡ್ಡನ್ನೇ ಕದಿಯುವ ಕಳ್ಳರಿಗೆ ತಕ್ಕ ಶಾಸ್ತಿ ಆಗಬೇಕು ಎಂಬುದು ಜನರ ಮಾತು ಒಟ್ಟಿನಲ್ಲಿ ಶಾಸಕರ" ಬೆಡ್ ರೂಮ್ " ಕಥೆ ಕುಮಟಾದ ಓಣಿಗಳಲ್ಲಿ ಸದ್ದು ಮಾಡುತ್ತಿದೆ, ಕಳ್ಳರು ಯಾರು ಎಂಬ ಬಗ್ಗೆ ಚರ್ಚೆ ಜೋರಾಗಿದೆ.

Advertisement
Tags :
KarnatakaKumtakumta mlaMla denkar shattyUttara Kannada
Advertisement
Next Article
Advertisement