Kumta ಶಾಸಕ ದಿನಕರ್ ಶಟ್ಟಿಯಿಂದ ಅಧಿಕಾರಿಗಳ ಸಭೆಗೆ ಅಡ್ಡಿ - ಅಧಿಕಾರಿಗಳಿಗೆ ತರಾಟೆ
Kumta news:-ಉತ್ತರ ಕನ್ನಡ ಜಿಲ್ಲೆಯ ಕುಮಟಾದ (kumta)ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆಯುತಿದ್ದ ಅಧಿಕಾರಿಗಳ ಸಾಮಾನ್ಯ ಸಭೆಗೆ ಕುಮಟಾ ಶಾಸಕ ದಿನಕರ್ ಶಟ್ಟಿ ಅಡ್ಡಿ ಪಡಿಸಿ ಅಧಿಕಾರಿಗಳಿಗೆ (officer )ತರಾಟೆ ತೆಗೆದುಕೊಂಡ ಘಟನೆ ನಡೆದಿದೆ.
ಜನವರಿ ಆರರಂದು ಕುಮಟಾದ (kumta) ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಅಧಿಕಾರಿಗಳ ಸಾಮಾನ್ಯ ಸಭೆ ನಡೆಸಲಾಗುತಿತ್ತು. ಈ ಸಭೆಗೆ ದಿಡೀರ್ ಆಗಮಿಸಿದ ಶಾಸಕ ದಿನಕರ್ ಶಟ್ಟಿ( Mla Denkar shatty) ಸಭೆಯನ್ನು ನಿಲ್ಲಿಸುವಂತೆ ಪಟ್ಟು ಹಿಡಿದರು.ನನ್ನ ಗಮನಕ್ಕೆ ತಾರದೆ ನಿಮಗೆ ಬೇಕಾದ ಹಾಗೆ ಸಭೆ ಮಾಡಿಕೊಳ್ತಾ ಇದ್ದೀರ, ಹೊನ್ನಾವರದಲ್ಲಿ ನಾನು ಹೇಳಿದ ಹಾಗೆ ಕೆಲಸಗಳು ಆಗುತ್ತೆ ಆದ್ರೆ ಕುಮಟಾ ದಲ್ಲಿ ಆಗಲ್ಲ. ಜನಪರ ಕೆಲಸ ಮಾಡೊಕೆ ಆಗದೆ ಕೇವಲ ಸಭೆ ಮಾಡಿದ್ರೆ ಏನ್ ಪ್ರಯೋಜನ ಎಂದು ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡರು.
ಸುಮ್ಮನೆ ಯಾಕೆ ಸಭೆ ಮಾಡ್ತಿರಾ ಇಲ್ಲಿಗೆ ನಿಲ್ಲಿಸಿ ಬೇರೆ ಏನಾದ್ರೂ ಕೆಲಸ ಮಾಡಿ,ನೀವು ಕಚೇರಿಗಳಲ್ಲಿ ಕುಳಿತು ಸಭೆ ಮಾಡುವುದು ನಾನು ಜನರಿಂದ ಬೈಸ್ಕೊಳ್ಳಬೇಕಾ, ಕ್ಷೇತ್ರದಲ್ಲಿ ಅಭಿವೃದ್ಧಿ ಆಗದೆ ಇದ್ರೆ ಮಾಧ್ಯಮದಲ್ಲಿ ನನ್ನ ಹೆಸರು ಹಾಕ್ತಾರೆ, ನೀವು ಸಭೆ ಮಾಡಿ ಒಳ್ಳೆಯ ಮೈಲೇಜ್ ತೊಗೊಳ್ತಿರಾ ಆದ್ರೆ ನಮ್ಮ ಹೆಸರ ಹಾಳಾಗುತ್ತೆ ಏನು ಕೆಲಸ ಆಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಧಿಕಾರಿಗಳು ಸಮಜಾಯಿಷಿ ಹೇಳಿದ ಬಳಿಕ ಸಭೆ ನಡೆಸಲು ಅನುವು ಮಾಡಿ ಕೊಟ್ಟು ಶಾಸಕ ಹೊರ ಬಂದರು. ಈಕುರಿತು ಮಾತನಾಡಿದ ಅವರು ಮಂಜೂರಾದ ಅನುದಾನ ಸದ್ಬಳಕೆ ಮಾಡಿಕೊಳ್ಳಬೇಕಿದೆ. ಹಣ ಖರ್ಚು ಮಾಡದೆ ಇದ್ರೆ, ಮಾರ್ಚ್ ತಿಂಗಳಿನಲ್ಲಿ ಮತ್ತೆ ರಿಟರ್ನ್ ಆಗುತ್ತೆ.
ಇದನ್ನೂ ಓದಿ:-KUMTA -ವಿದ್ಯಾರ್ಥಿಗಳ ಮೇಲೆ ಹಲ್ಲೆಗೆ ಮುಂದಾದ KSRTC ನಿರ್ವಾಹಕ! ಮುಂದೇನಾಯ್ತು ?
ಇಷ್ಟೊಂದು ಬೆಜವಾಬ್ದಾರಿತನವನ್ನ ಅಧಿಕಾರಿಗಳು ತೊರುತ್ತಿರುವುದು ಯಾಕೆ ಅಂತಾ ಕೆಳೊಕೆ ಬಂದಿದ್ದೆ. ಕಚೇರಿಯಲ್ಲಿ ಕುಳಿತು ಸುಮ್ಮನೆ ಸಭೆ ಮಾಡಿದ್ರೆ ಜನರ ಸಮಸ್ಯೆ ಬಗೆ ಹರಿಯುವುದಿಲ್ಲ, ಈಗಾಗಲೇ ನಮ್ಮ ಕ್ಷೇತ್ರದಲ್ಲಿ ಬಹಳಷ್ಟು ಹುದ್ದೆಗಳು ಪ್ರಭಾರಿಯಾಗಿ ನಿಭಾಯಿಸುತ್ತಿದ್ದಾರೆ.
ಕಳೆದ ಆರು ತಿಂಗಳಿನಿಂದ ಹೊನ್ನಾವರ ಕ್ಕೆ ಸರ್ಕಲ್ ಇನಸ್ಪೆಕ್ಟರ್ ಇಲ್ಲ,PWD, ಜಲಸಂಪನ್ಮೂಲ, ತಾಲೂಕು ಪಂಚಾಯತ ಹೀಗೆ ಪ್ರಮುಖ ಇಲಾಖೆಯ ಅಧಿಕಾರಿಗಳು ಪ್ರಭಾರ ಆಗಿ ಕಾರ್ಯನಿರ್ವಹಣೆ ಮಾಡುತಿದ್ದಾರೆ.ನಮ್ಮ ಕ್ಷೇತ್ರಕ್ಕೆ ಯಾಕೆ ಅಧಿಕಾರಿಗಳನ್ನ ನೇಮಕ ಮಾಡಲಾಗುತ್ತಿಲ್ಲ?
ಎಲ್ಲವೂ ಪ್ರಭಾರ ಹುದ್ದೆ ಆದ್ರೆ ನಮ್ಮ ಕ್ಷೇತ್ರದ ಅಭಿವೃದ್ಧಿ ಆಗುವುದು ಹೇಗೆ ಎಂದು ಪ್ರಶ್ನೆ ಮಾಡಿದರು.