Kumta|ಅನಧಿಕೃತ ಕಟ್ಟಡ ಅನುಮತಿಗೆ ಶಾಸಕ,ಪುರಸಭೆ ಮುಖ್ಯಾಧಿಕಾರಿ ಒತ್ತಡ -ಮನನೊಂದ ಆರ್.ಓ ಪತ್ರ ಬರೆದಿಟ್ಟು ಕಾಣೆ!
Kumta|ಅನಧಿಕೃತ ಕಟ್ಟಡ ಅನುಮತಿಗೆ ಶಾಸಕ,ಪುರಸಭೆ ಮುಖ್ಯಾಧಿಕಾರಿ ಒತ್ತಡ -ಮನನೊಂದ ಆರ್.ಓ ಪತ್ರ ಬರೆದಿಟ್ಟು ಕಾಣೆ!
ಕಾರವಾರ :- ಅನಧಿಕೃತ ಕಟ್ಟಡ ಅನುಮತಿಗೆ ಶಾಸಕ ಹಾಗೂ ಪುರಸಭೆ ಮುಖ್ಯಾಧಿಕಾರಿ ಯಿಂದ ಒತ್ತಡ ಬಂದ ಹಿನ್ನಲೆಯಲ್ಲಿ ಪತ್ರ ಬರೆದಿಟ್ಟು ಕುಮಟಾ(kumta) ಪುರಸಭೆ ಕಂದಾಯ ನಿರೀಕ್ಷಕ ಪತ್ರ ಬರೆದಿಟ್ಟು ನಾಪತ್ತೆಯಾದ ಘಟನೆ ಕುಮಟಾದಲ್ಲಿ ನಡೆದಿದೆ.
ಭಟ್ಕಳ ಮೂಲದ ವೆಂಕಟೇಶ ಆರ್, ನಾಪತ್ತೆಯಾಗಿರುವ ಪುರಸಭೆ ಯ ಆರ್.ಓ ಆಗಿದ್ದು ಈ ಕುರಿತು ಭಟ್ಕಳ ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕುಮಟಾ ಪುರಸಭೆಯಲ್ಲಿ ರೆವೆನ್ಯೂ ಇನ್ಸ್ ಪೆಕ್ಟರ್ ಆಗಿದ್ದ ವೆಂಕಟೇಶ .ಆರ್ ಗೆ ಕುಮಟಾದ ವಿನಾಯಕ್ ಹೋಟಲ್ ಎಂಬ ಅನಧಿಕೃತ ಕಟ್ಟಡವನ್ನು ಅಧಿಕೃತ ಗೊಳಿಸುವಂತೆ ಪುರಸಭೆ ಮುಖ್ಯಾಧಿಕಾರಿ ಎಂ.ಆರ್ .ಸ್ವಾಮಿ ಮೊದಲು ಒತ್ತಡ ಹಾಕಿದ್ದು ,ನಾಲ್ಕು ಲಕ್ಷ ಸಿಗುತ್ತದೆ ,ಶಾಸಕ ದಿನಕರ್ ಶಟ್ಟಿ ತುಂಬಾ ಒತ್ತಡ ಹಾಕುತಿದ್ದಾರೆ, ಸಹಿ ಮಾಡುವಂತೆ ಮುಖ್ಯಾಧಿಕಾರಿ ಅವಾಚ್ಯ ಶಬ್ದದಿಂದ ಬೈದು ಹಲ್ಲೆಗೆ ಮುಂದಾಗಿದ್ದಾರೆ ಎಂದು ಪತ್ರದಲ್ಲಿ ಉಲ್ಲೇಖಿಸಿ ಈ ಪತ್ರವನ್ನು ತನ್ನ ತಾಯಿಗೆ ಕಳುಹಿಸಿ ನಂತರ ಸಿಬ್ಬಂದಿಗಳ ವಾಟ್ಸ್ ಅಪ್ ಗ್ರೂಪ್ ಗೂ ಶೇರ್ ಮಾಡಿ ನಾಪತ್ತೆಯಾಗಿದ್ದಾನೆ. ಇನ್ನು ಈ ಸಂಬಂಧ ಕುಟುಂಬಸ್ತರು ಭಟ್ಕಳ ಶಹರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇನ್ನು ಈ ಕುರಿತು ಕುಮಟಾ ಪುರಸಭೆ ಅಧ್ಯಕ್ಷರಿಗೆ ಮುಖ್ಯಾಧಿಕಾರಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಸಹ ನೀಡಿದ್ದಾರೆ.
ನಾಲ್ಕು ಲಕ್ಷಕ್ಕೆ ಡೀಲ್ ಆರೋಪ !
ಇನ್ನು ಅನಧಿಕೃತ ಹೋಟಲ್ ಕಟ್ಟಡ ಕ್ಕೆ ಅನುಮತಿ ಗೆ ನಾಲ್ಕು ಲಕ್ಷ ಮಾತೂಕತೆ ನಡೆದಿತ್ತು ಎನ್ನಲಾಗಿದೆ .ಇದರಲ್ಲಿ ಶಾಸಕರದ್ದು ಸಹ ಪಾಲಿತ್ತು ಎನ್ನಲಾಗಿದ್ದು ಹೋಟೆಲ್ ಅನ್ನು ತಕ್ಷಣ ಉದ್ಘಾಟನೆ ಮಾಡಬೇಕಿದ್ದು ಇದಕ್ಕಾಗಿ ಶಾಸಕರು ಮುಖ್ಯಾಧಿಕಾರಿಗೆ ಒತ್ತಡ ಹೇರಿದ್ದರು ಎನ್ನಲಾಗಿದ್ದು ,ಮುಖ್ಯಾಧಿಕಾರಿ ಸ್ವಾಮಿ ನಿನ್ನೆ ದಿನ ಈ ವಿಷಯವಾಗಿ ಆರ್.ಓ ಹತ್ತಿರ ಮಾತನಾಡಿ ಬೈದು ಹೊಡೆಯಲು ಹೋಗಿದ್ದರು ಎನ್ನಲಾಗಿದೆ.
ತುಂಬಾ ಸೂಕ್ಷ್ಮ ಹಾಗೂ ಪ್ರಾಮಾಣಿಕ ವ್ಯಕ್ತಿಯಾಗಿದ್ದ ಈತ ಮನನೊಂದು ಹೀಗೆ ಪತ್ರ ಬರೆದು ಕಾಣೆಯಾಗಿದ್ದಾರೆ.