Kumta| ಕೊನೆಗೂ ಸಿಕ್ಕ ಪುರಸಭೆ ಆರ್.ಓ ವೆಂಕಟೇಶ್ ! ಕೊನೆಗೆ ಹೇಳಿದ್ದೇನು?
Kumta| ಕೊನೆಗೂ ಸಿಕ್ಕ ಪುರಸಭೆ ಆರ್.ಓ ವೆಂಕಟೇಶ್ ! ಕೊನೆಗೆ ಹೇಳಿದ್ದೇನು?
ಕುಮಟಾ (october 09): ಉತ್ತರ ಕನ್ನಡ ಜಿಲ್ಲೆಯ ಕುಮಟಾ(kumta) ಪುರಸಭೆಯ ಮುಖ್ಯಾಧಿಕಾರಿ ಎಂ.ಆರ್. ಸ್ವಾಮಿ ಅವರ ಕಿರುಕುಳದ ಕುರಿತು ಪತ್ರ ಬರೆದು ನಾಪತ್ತೆಯಾಗಿದ್ದ ಪುರಸಭೆ ರೆವೆನ್ಯೂ ಅಧಿಕಾರಿ ಕೊನೆಗೂ ಬೆಳಗಾವಿಯಲ್ಲಿ ಪತ್ತೆಯಾಗಿದ್ದಾರೆ.
ಕುಮಟಾ ಪುರಸಭೆಯಲ್ಲಿ ರೆವಿನ್ಯೂ ಇನ್ಸ್‌ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ವೆಂಕಟೇಶ ಆರ್ ಅವರು ಮಂಗಳವಾರ ರಾತ್ರಿ ಭಟ್ಕಳದಲ್ಲಿರುವ ತಮ್ಮ ಮನೆಯಿಂದ ನಾಪತ್ತೆಯಾಗಿದ್ದರು.
Kumta|ಅನಧಿಕೃತ ಕಟ್ಟಡ ಅನುಮತಿಗೆ ಶಾಸಕ,ಪುರಸಭೆ ಮುಖ್ಯಾಧಿಕಾರಿ ಒತ್ತಡ -ಮನನೊಂದ ಆರ್.ಓ ಪತ್ರ ಬರೆದಿಟ್ಟು ಕಾಣೆ!
ನಾಪತ್ತೆಯಾಗುವುದಕ್ಕೂ ಮುನ್ನ ವೆಂಕಟೇಶ ಆರ್. ಅವರು, ಅನಧಿಕೃತ ಕಟ್ಟಡಕ್ಕೆ ಅನುಮತಿ ನೀಡುವಂತೆ ಮುಖ್ಯಾಧಿಕಾರಿ ಎಂ.ಆರ್. ಸ್ವಾಮಿ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಪತ್ರವೊಂದನ್ನು ಬರೆದು ಪುರಸಭೆಯ ಸದಸ್ಯರ ವಾಟ್ಸಾಪ್ ಗ್ರೂಪ್‌ಗೆ ಕಳುಹಿಸಿದ್ದರು. ಈ ಕುರಿತು ಆತಂಕಗೊಂಡ ಕುಟುಂಬಸ್ಥರು ಭಟ್ಕಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಇದಲ್ಲದೇ ಕುಟುಂಬಸ್ತರು ಪುರಸಭೆ ಎದುರು ಸಹ ಪ್ರತಿಭಟನೆ ಮಾಡಿದ್ದರು.
ನಾಪತ್ತೆಯಾಗಿದ್ದ ವೆಂಕಟೇಶ ಆರ್. ಅವರು ನಿನ್ನೆದಿನ ಎಟಿಎಂ ದರಲ್ಲಿ ಹಣ ಡ್ರಾ ಮಾಡಿದ ಕುರಿತು ಮಾಹಿತಿ ಕಲೆಹಾಕಿದ್ದ ಭಟ್ಕಳ ಪೊಲೀಸರು ,ಇಂದು ತಾಯಿಗೆ ಬೆಳಗಾವಿಯಿಂದ ದೂರವಾಣಿ ಕರೆ ಮಾಡಿ, ತಾನು ಬೆಳಗಾವಿಯಲ್ಲಿದ್ದೇನೆ ಎಂದು ಮಾಹಿತಿ ನೀಡಿದರು.
ಕೂಡಲೇ ಕಾರ್ಯಪ್ರವೃತ್ತರಾದ ಭಟ್ಕಳ ಪೊಲೀಸರು ಬೆಳಗಾವಿಗೆ ತೆರಳಿದ್ದಾರೆ. ಸದ್ಯ ಅವರು ಬೆಳಗಾವಿ ನಗರದ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿದ್ದಾರೆ ಎಂದು ತಿಳಿದುಬಂದಿದೆ. ಮುಖ್ಯಾಧಿಕಾರಿಯ ಕಿರುಕುಳದ ಆರೋಪದ ಬಗ್ಗೆ ಪೊಲೀಸರು ಹೆಚ್ಚಿನ ತನಿಖೆ ನಡೆಸುವ ಸಾಧ್ಯತೆ ಇದೆ.
ಇನ್ನು ಈ ಬಗ್ಗೆ ವೆಂಕಟೇಶ ರವರು ಸಹ ನೋವು ತೋಡಿಕೊಂಡಿದ್ದು ಮೇಲಾಧಿಕಾರಿ ವರ್ತನೆ ಹಾಗೂ ಬೆದರಿಸಿದ್ದು ಕೆಟ್ಟದಾಗಿ ಬೈದಿದ್ದರಿಂದ ಮನನೊಂದು ಹೀಗೆ ಮಾಡಿದೆ ಎಂದು ಬೆಳಗಾವಿಯ ಪೊಲೀಸ್ ಸಿಬ್ಬಂದಿಯವರಿಗೆ ತಿಳಿಸಿದ್ದಾಗಿ ತಿಳಿದು ಬಂದಿದೆ.