Kumta |ಸಮುದ್ರಪಾಲಾಗುತಿದ್ದ ಬೆಂಗಳೂರಿನ ಇಬ್ಬರನ್ನ ಕುಡ್ಲೆ ಬೀಚ್ ನಲ್ಲಿ ರಕ್ಷಣೆ
Kumta, October 21, 2025 – Two Bengaluru tourists were rescued from drowning at Kudle Beach in Gokarna, Uttara Kannada district. Quick response by lifeguards and the My Stick Adventure team prevented a major tragedy.
07:37 PM Oct 21, 2025 IST | ಶುಭಸಾಗರ್
Kumta |ಸಮುದ್ರಪಾಲಾಗುತಿದ್ದ ಬೆಂಗಳೂರಿನ ಇಬ್ಬರನ್ನ ಕುಡ್ಲೆ ಬೀಚ್ ನಲ್ಲಿ ರಕ್ಷಣೆ.
ಕಾರವಾರ(October 21) :- ಸಮುದ್ರದಲ್ಲಿ ನೀರುಪಾಲಾಗುತಿದ್ದ ಇಬ್ಬರು ಪ್ರವಾಸಿಗರನ್ನು ರಕ್ಷಣಾ ಸಿಬ್ಬಂದಿ ರಕ್ಷಣೆ ಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ (kumta) ತಾಲೂಕಿನ ಗೋಕರ್ಣದ ಕುಡ್ಲೆ ಬೀಚ್ ನಲ್ಲಿ ನಡೆದಿದೆ.
Advertisement
ಬೆಂಗಳೂರು ಮೂಲದ ಗಣೇಶ್ ಕೃಷ್ಣಪ್ಪ (32), ಸುಬ್ರಹ್ಮಣ್ಯ (31) ರಕ್ಷಣೆಗೊಳಗಾದ ಪ್ರವಾಸಿಗರಾಗಿದ್ದು ,ಬೆಂಗಳೂರಿನಿಂದ 9 ಜನ ಪ್ರವಾಸಿಕ್ಕೆ ಕುಮಟಾ (kumta)ತಾಲೂಕಿನ ಕುಡ್ಲೆ ಬೀಚ್ ಬಂದಿದ್ದರು.ಕಕುಟ್ಲೆ ಬೀಚ್(beach) ನಲ್ಲಿ ನೀರಿಗಿಳಿದಾಗ ಅಲೆಯ ಹೊಡೆತಕ್ಕೆ ಇಬ್ಬರು ತೇಲಿ ಹೋಗಿದ್ದರು.
ರಕ್ಷಣೆಗಾಗಿ ಕೂಗಿಕೊಂಡಾಗ ಜೀವ ರಕ್ಷಕ ಸಿಬ್ಬಂದಿಗಳಾದ ನಾಗೇಂದ್ರ ಎಸ್ .ಕುರ್ಲೆ, ಮಂಜು ಹರಿಕಾಂತ್, ಪ್ರವಾಸಿ ಮಿತ್ರ ಶೇಖರ್ ಹರಿಕಾಂತ್ , ಮೈ ಸ್ಟಿಕ್ ಅಡ್ವೆಂಚರ್ ತಂಡದಿಂದ ತಕ್ಷಣ ರಕ್ಷಣೆ ಮಾಡಿದ್ದಾರೆ. ಘಟನೆ ಸಂಬಂಧ ಗೋಕರ್ಣ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.


Advertisement