ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Kumta :ಕತಗಾಲ್ ನಲ್ಲಿ ಆಹಾರ ಸಿಗದೇ ನಿತ್ರಾಣಗೊಂಡ ಕರಿ ಚಿರತೆ ರಕ್ಷಣೆ

ಕಾರವಾರ :- ತಾಯಿಯಿಂದ ಬೇರ್ಪಟ್ಟು ಆಹಾರ ಸಿಗದೇ ನಿತ್ರಾಣಗೊಂಡು ರಸ್ತೆಯ ಬದಿ ಓಡಾಡುತಿದ್ದ ಕಪ್ಪು ಚಿರತೆಯನ್ನು (black panther )ಅರಣ್ಯಾಧಿಕಾರಿಗಳು ರಕ್ಷಣೆ ಮಾಡಿ ಶಿವಮೊಗ್ಗದ ತ್ಯಾವರೆಕೊಪ್ಪ ಮೃಗಾಲಯಕ್ಕೆ ಕರೆದೊಯ್ಯಲಾಯಿತು.
09:53 PM Feb 26, 2025 IST | ಶುಭಸಾಗರ್
Kumta :ಕತಗಾಲ್ ನಲ್ಲಿ ಆಹಾರ ಸಿಗದೇ ನಿತ್ರಾಣಗೊಂಡ ಕರಿ ಚಿರತೆ ರಕ್ಷಣೆ

Kumta :ಕತಗಾಲ್ ನಲ್ಲಿ ಆಹಾರ ಸಿಗದೇ ನಿತ್ರಾಣಗೊಂಡ ಕರಿ ಚಿರತೆ ರಕ್ಷಣೆ

Advertisement

ಪ್ರಕೃತಿ ಮೆಡಿಕಲ್ ,ಕಾರವಾರ.

ಕಾರವಾರ :- ತಾಯಿಯಿಂದ ಬೇರ್ಪಟ್ಟು ಆಹಾರ ಸಿಗದೇ ನಿತ್ರಾಣಗೊಂಡು ರಸ್ತೆಯ ಬದಿ ಓಡಾಡುತಿದ್ದ ಕಪ್ಪು ಚಿರತೆಯನ್ನು (black panther )ಅರಣ್ಯಾಧಿಕಾರಿಗಳು ರಕ್ಷಣೆ ಮಾಡಿ ಶಿವಮೊಗ್ಗದ (shivamogga) ತ್ಯಾವರೆಕೊಪ್ಪ ಮೃಗಾಲಯಕ್ಕೆ ಕರೆದೊಯ್ಯಲಾಯಿತು.

ಅರವಳಿಕೆ ಮದ್ದು ನೀಡಿ ರಕ್ಷಣೆ ಮಾಡುತ್ತಿರುವುದು

ಕುಮಟಾದ(kumta) ಕತಗಾಲ್ ಹೆದ್ದಾರಿ ಬಳಿ ಎರಡು ದಿನದಿಂದ ಓಡಾಡುತಿದ್ದ ಅಪರೂಪದ ಕಪ್ಪು ಚಿರತೆ ಮರಿಯನ್ನು ಸ್ಥಳೀಯ ಜನರು ನೋಡಿ ಭಯಪಟ್ಟಿದ್ದರು. ಆಹಾರ ಹುಡುಕಿ ಹೆದ್ದಾರಿಯಲ್ಲಿ ಓಡಾಡುತಿದ್ದ ಈ ಚಿರತೆ ಮರಿಗೆ ಆಹಾರವೇ ಸಿಗದೇ ನಿತ್ರಾಣಗೊಂಡಿತ್ತು.

ಇದನ್ನೂ ಓದಿ:-KUMTA -ವಿದ್ಯಾರ್ಥಿಗಳ ಮೇಲೆ ಹಲ್ಲೆಗೆ ಮುಂದಾದ KSRTC ನಿರ್ವಾಹಕ! ಮುಂದೇನಾಯ್ತು ?

Advertisement

ಕತಗಾಲದ ಸುತ್ತಮುತ್ತ ಓಡಾಡಿಕೊಂಡಿದ್ದ ಈ ಚಿರತೆ ಮರಿಯು ಜನರಲ್ಲಿ ಆತಂಕ ಸೃಷ್ಟಿಸಿತ್ತು. ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು ಈ ವೇಳೆ ಆಹಾರವಿಲ್ಲದೇ ನಿತ್ರಾಣಗೊಂಡಿದ್ದ ಚಿರತೆ ಮರಿಗೆ ಶಿವಮೊಗ್ಗ ದಿಂದ ಆಗಮಿಸಿದ ವೈದ್ಯ ಮುರಳಿ ಮನೋಹರ್ ರವರು ಅರವಳಿಕೆ ಮದ್ದು ನೀಡಿ ರಕ್ಷಣೆ ಮಾಡಿದರು.

https://play.google.com/store/apps/details?id=com.kannadavani.app

ಇನ್ನು ಈ ಚಿರತೆ ಒಂದರಿಂದ ಒಂದೂವರೆ ವರ್ಷದ್ದಾಗಿದ್ದು ಹೆಣ್ಣು ಚಿರತೆಯಾಗಿದೆ.ತಾಯಿಯೊಂದಿಗೆ ಇದ್ದ ಈ ಚಿರತೆ ಬೇರ್ಪಟ್ಟಿದ್ದು ಆಹಾರ ಭೇಟೆಯಾಡಲು ಆಗದೇ ನಿತ್ರಾಣಗೊಂಡಿದೆ. ಇದೀಗ ಇದನ್ನು ಹಿಡಿದು ಪ್ರಥಮ ಚಿಕಿತ್ಸೆ ನೀಡಿ ಮೇಲಾಧಿಕಾರಿಗಳ ಸಲಹೆಯಂತೆ ಶಿವಮೊಗ್ಗದ ತ್ಯಾವರೇ ಕೊಪ್ಪದ ಹುಲಿ ಸಿಂಹದಾಮಕ್ಕೆ ಹೆಚ್ಚಿನ ಚಿಕಿತ್ಸೆಗೆ ಕಳುಹಿಸಲಾಗಿದೆ ಎಂದು ಹೊನ್ನಾವರ ವಿಭಾಗದ ಡಿ.ಎಫ್.ಓ ಯೋಗಿಷ್ ರವರು ತಿಳಿಸಿದ್ದಾರೆ.

Advertisement
Tags :
AnimalRescueBigCatsBlackPantherForestDepartmentKarnatakaWildlifeKatagalKumtaUttarakannadaWildlifeConservationWildlifeRescue
Advertisement
Next Article
Advertisement