Lokayukta ride| ಬ್ರಷ್ಟರ ಮನೆಯ ಮೇಲೇ ಲೋಕಾಯುಕ್ತ ದಾಳಿ
Lokayukta ride| ಬ್ರಷ್ಟರ ಮನೆಯ ಮೇಲೇ ಲೋಕಾಯುಕ್ತ ದಾಳಿ
ಬೆಂಗಳೂರು (October 14) :-ರಾಜ್ಯದ ಹಲವು ಕಡೆ ಬೆಳಂಬೆಳಗ್ಗೆ ಭ್ರಷ್ಟ ಅಧಿಕಾರಿ ಮನೆಯ ಮೇಲೆ ಲೋಕಾಯುಕ್ತ ದಾಳಿ (lokayukta ride) ನಡೆಸಿದ್ದಾರೆ.ಕಾರವಾರ ,ಉಡುಪಿ,ದಾವಣಗೆರೆ ಹಾಗೂ ಬಳ್ಳಾರಿ ಭಾಗದಲ್ಲಿ ಲೋಕಾಯುಕ್ತ ಅಧಿಕಾರಿಗಳು ಆಧಾಯಕ್ಕಿಂತ ಅಧಿಕ ಮೌಲ್ಯದ ಆಸ್ತಿ,ಹಣ ಮಾಡಿದ ಅಧಿಕಾರಿ ಮನೆ ಮೇಲೆ ದಾಳಿ ಮಾಡಿದ್ದಾರೆ.

ಕಾರವಾರ(karwar) ಲೋಕಾಯುಕ್ತ ಪಿ.ಐ ವಿನಾಯಕ್ ಬಿಲ್ಲವ ನೇತ್ರತ್ವದಲ್ಲಿ ಉಡುಪಿಯ ಆರ್.ಟಿ.ಓ ಅಧಿಕಾರಿ ಎಲ್ .ಪಿ ನಾಯ್ಕ ಅವರ ಮನೆ ಹಾಗೂ ವಾಣಿಜ್ಯ ಮಳಿಗೆ ಮೇಲೆ ಏಕಾ ಏಕಿ ದಾಳಿ ಮಾಡಲಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಕುಮಟಾ ನಗರದ ವಾಣಿಜ್ಯ ಮಳಿಗೆ ಹಾಗೂ ಚಂದಾವರ ಗ್ರಾಮದಲ್ಲಿನ ಮನೆಯ ಮೇಲೆ ಏಕಕಾಲದಲ್ಲಿ ದಾಳಿ ಮಾಡಲಾಗಿದೆ.
Kumta| ಕೊನೆಗೂ ಸಿಕ್ಕ ಪುರಸಭೆ ಆರ್.ಓ ವೆಂಕಟೇಶ್ |ಜಿಲ್ಲಾಧಿಕಾರಿ ಹೇಳಿದ್ದೇನು?
ಮೂಲತಹಾ ಉತ್ತರ ಕನ್ನಡ ಜಿಲ್ಲೆಯ ಕುಮಟಾ ನಗರದವರಾದ ಎಲ್.ಪಿ ನಾಯ್ಕ ಉಡುಪಿಯಲ್ಲಿ ಆರ್.ಟಿ.ಓ ಅಧಿಕಾರಿಯಾಗಿ ಸೇವೆ ಸಲ್ಲಿಸುತಿದ್ದಾರೆ.ಆಧಾಯಕ್ಕಿಂತ ಅಧಿಕ ಆಸ್ತಿ,ಹಣ ಹೊಂದಿದ ಆರೋಪದಡಿ ಈ ದಾಳಿ ನಡೆದಿದೆ. ಇನ್ನು ಮೂಲಗಳ ಪ್ರಕಾರ ಇವರ ಮನೆಯಲ್ಲಿ ಚಿನ್ನ ,ಬೆಳ್ಳಿ ,ನಗದು ವಶಕ್ಕೆ ಪಡೆದಿರುವ ಮಾಹಿತಿ ತಿಳಿದು ಬಂದಿದೆ.
ಬೀದರ್ ನಲ್ಲಿ ಲೋಕಾಯುಕ್ತ ದಾಳಿ ( Lokayukta ride).

ಇನ್ನು ಅಕ್ರಮ ಆಸ್ತಿಗಳಿಕೆ ಆರೋಪ ಹಿನ್ನಲೆಯಲ್ಲಿ ಬೆಳ್ಳಂಬೆಳಗ್ಗೆ ಬೀದರ್ ನಲ್ಲಿ ಲೋಕಾಯುಕ್ತ ದಾಳಿ (lokayukta raid) ನೆಡಸಿದೆ. ಕೃಷಿ ಇಲಾಖೆ ಸಹಾಯಕ ನಿರ್ದೇಶಕರಾದ ದೂಳಪ್ಪ ನಿವಾಸ ಸೇರಿದಂತೆ ಜಿಲ್ಲೆಯಾದ್ಯಂತ ನಾಲ್ಕು ಕಡೆ ದಾಳಿ ಮಾಡಲಾಗಿದೆ.
ಬೀದರ್ ನಗರದ ಗುರುನಾನಕ್ ಕಾಲೋನಿಯ ದೂಳಪ್ಪ ನಿವಾಸದ ಮೇಲೆ ದಾಳಿ ಮಾಡುವ ಜೊತೆ ಭಾಲ್ಕಿಯ ಕಡ್ಯಾಳ, ಔರಾದ್ ನ ಎಡಿ ಆಫೀಸ್, ಮತ್ತು ಔರಾದ್ ನ ಮುದೋಳ ಕಚೇರಿಯ ಮೇಲೆ ದಾಳಿ ಮಾಡಲಾಗಿದೆ.ಲೋಕಾಯುಕ್ತ ಡಿವೈಎಸ್ಪಿ ಹನುಮಂತ ರೆಡ್ಡಿ ನೇತೃತ್ವದಲ್ಲಿ ಈ ದಾಳಿ ನಡೆದಿದ್ದು ತನಿಖೆ ಪ್ರಗತಿಯಲ್ಲಿದೆ.
Karwar |ಮನೆ ಕಳ್ಳತನಕ್ಕೆ ಬಂದ ಕಳ್ಳರನ್ನ ನೋಡಿ ಬೊಗಳಿದ ಶ್ವಾನ- ಕಳ್ಳರನ್ನು ಹಿಡಿದ ಗ್ರಾಮದ ಜನ
ಇದಲ್ಲದೇ ದಾವಣಗೆರೆ ಇಬ್ಬರು ಅಧಿಕಾರಿಗಳಿಗೆ ಸೇರಿದ ಹತ್ತು ಕಡೆ ಇರುವ ಆಸ್ತಿ ಪಾಸ್ತಿಗಳ ಮೇಲೆ ಏಕ ಕಾಲಕ್ಕೆ ದಾಳಿ ನಡೆದಿದೆ.ಕೆಆರ್ ಐಡಿಎಲ್ ಸಹಾಯಕ ಇಂಜಿನಿಯರ್ ಜಗದೀಶ್ ನಾಯ್ಕ್ ಹಾಗೂ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಎಸ್ ಡಿಎ ನಡುವಿನಮನೆ ಮೇಲೆ ದಾವಣಗೆರೆ ಲೋಕಾಯುಕ್ತ ಎಸ್ಪಿ ಎಂಎಸ್ ಕೌಲಾಪುರೆ ನೇತ್ರತ್ವದ ತಂಡದಿಂದ ದಾಳಿ ನಡೆದಿದೆ.