ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Mahakumbha Mela 2025 : 70 ಕಿಲೋಮೀಟರ್ ಟ್ರಾಫಿಕ್ ಜಾಮ್ - ಹೇಗಿದೆ ವ್ಯವಸ್ಥೆ ಗೊತ್ತಾ?

ಪ್ರಯಾಗ :- ಉತ್ತರ ಪ್ರದೇಶದ ಪ್ರಯಾಗ ರಾಜ್ (prayagaraj) ನೆಡೆಯುತ್ತಿರುವ ಮಹಾಕುಂಭಮೇಳಕ್ಕೆ ಕೋಟಿ ಕೋಟಿ ಜನ ಆಗಮಿಸುತಿದ್ದಾರೆ.ಫೆ.26 ರಂದು ಮಹಾ ಕುಂಭಮೇಳ (kumbhamela) ಮುಕ್ತಾಯವಾಗಲಿದೆ.
08:23 PM Feb 10, 2025 IST | ಶುಭಸಾಗರ್

Mahakumbha Mela 2025 : 70 ಕಿಲೋಮೀಟರ್ ಟ್ರಾಫಿಕ್ ಜಾಮ್ - ಹೇಗಿದೆ ವ್ಯವಸ್ಥೆ ಗೊತ್ತಾ?

Advertisement

ಪ್ರಕೃತಿ ಮೆಡಿಕಲ್ ,ಕಾರವಾರ.

ಪ್ರಯಾಗ :- ಉತ್ತರ ಪ್ರದೇಶದ ಪ್ರಯಾಗ ರಾಜ್ (prayagaraj) ನೆಡೆಯುತ್ತಿರುವ ಮಹಾಕುಂಭಮೇಳಕ್ಕೆ ಕೋಟಿ ಕೋಟಿ ಜನ ಆಗಮಿಸುತಿದ್ದಾರೆ.ಫೆ.26 ರಂದು ಮಹಾ ಕುಂಭಮೇಳ (kumbhamela) ಮುಕ್ತಾಯವಾಗಲಿದೆ.

ಕುಂಭದಲ್ಲಿ ಆರು ವಿಶೇಷ ಸ್ನಾನಗಳು ಇದ್ದು ಈಗಾಗಲೇ ಜನವರಿ 13 ರಂದು ಪುಷ್ಯ ಪೂರ್ಣಿಮೆ ಸ್ನಾನ ,ಜನವರಿ 14 ರಂದು ಮಕರ ಸಂಕ್ರಾಂತಿ ಸ್ನಾನ, ಜ.29 ಮೌನಿ ಅಮವಾಸ್ಯೆ ಸ್ನಾನ, ಫೆಬ್ರವರಿ 03 ರಂದು ವಸಂತ ಪಂಚಮಿ ಸ್ನಾನ ಗಳು ನೆರವೇರಿದೆ.

ಇದೀಗ ಫೆ.12 ರಂದು ಮಾಘ ಪೂರ್ಣಿಮೆ ಸ್ನಾನ ಹಾಗೂ ಫೆ. 26ರಂದು ಮಹಾ ಶಿವರಾತ್ರಿ ಪುಣ್ಯಸ್ನಾನಗಳಿದ್ದು ಇದೀಗ ಭಕ್ತರ ಸಂಖ್ಯೆ ಗಣನೀಯ ಏರಿಕೆ ಕಾಣುತ್ತಿದೆ.

Advertisement

ದೇಶದ ಬಹುತೇಕ ಜನರಲ್ಲಿ ಕುಂಬಮೇಳಕ್ಕೆ ತೆರಳಬೇಕು ಎಂಬ ಹಂಬಲ ಇದ್ದೇ ಇರುತ್ತದೆ.ಹಾಗಿದ್ರೆ ನೀವು ಹೋಗುವುದಾದರೇ ಈ ವಿಷಯಗಳನ್ನು ಗಮನದಲ್ಲಿ ಇಟ್ಟು ಹೋಗಬೇಕಾಗುತ್ತದೆ.

70 ಕಿಲೋಮೀಟರ್ ಟ್ರಾಫಿಕ್ ಜಾಮ್!

ಪ್ರಯಾಗ ರಾಜ್ ಗೆ ಹೋಗುವ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್

ಕುಂಭಮೇಳಕ್ಕೆ ಹೆಚ್ಚು ಜನ ಬರುತ್ತಿರುವ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಸರ್ಕಾರ ಸೂಕ್ತ ವ್ಯವಸ್ಥೆ ಕಲ್ಪಿಸಿದ್ದರೂ ಸಂಚಾರ ದಟ್ಟಣೆ ಹೆಚ್ಚಿದ್ದು ಪ್ರಯಾಗ್ ನಿಂದ 70 ಕಿಲೋಮೀಟರ್ ದೂರದ ವರೆಗೆ ಟ್ರಾಫಿಕ್ ಜಾಮ್ ಇದೆ. ಹೀಗಾಗಿ ಖಾಸಗಿ ವಾಹನದಲ್ಲಿ ತೆರಳುವವರಿಗೆ ದೆಹಲಿ ಮಾರ್ಗದಿಂದ ಪ್ರಾಯಾಗ್ ರಾಜ್ ಗೆ ಹೋಗುವವರಿಗೆ ಸಮಸ್ಯೆ ಆಗುತ್ತದೆ.

Astrology advertisement

ಇನ್ನು ಜನಸಂದಣಿ ಕಮ್ಮಿ ಇದ್ದರೇ ಕುಂಭ ಮೇಳದವರೆಗೂ ವಾಹನಕ್ಕೆ ಅವಕಾಶ ಸಿಗುತ್ತದೆ. ಇಲ್ಲವಾದರೇ 25 ಕಿಲೋಮೀಟರ್ ದೂರದಲ್ಲೇ ವಾಹನ ಬಿಟ್ಟು ಬರಬೇಕು. ಕಾಲು ನಡಿಗೆಯಲ್ಲಿ ಹೋಗಬಹುದು ಇಲ್ಲವೇ ಸ್ಥಳೀಯರ ಸಹಾಯದೊಂದಿಗೆ ಬೈಕ್ ನಲ್ಲಿ ಪ್ರಯಾಣಿಸಬಹುದು.

ಇದನ್ನೂ ಓದಿ:-MahaKumbh 2025 ಕುಂಭಮೇಳ ಎಂದರೇನು? ಮಹಾ ಕುಂಭಮೇಳದ ವಿಶೇಷತೆ ಏನು ಇಲ್ಲಿದೆ ಮಾಹಿತಿ.

ಮಧ್ಯರಾತ್ರಿ ಹೊರಟರೆ ಮುಂಜಾನೆ ಪ್ರಯಾಗ್ ರಾಜ್ ಗೆ ತಲುಪಬಹುದು . ಇನ್ನು ವಸತಿ ವ್ಯವಸ್ಥೆಗೆ ಅಖಾಡಗಳಿವೆ. ಕರ್ನಾಟಕದಿಂದ ಹೋಗುವವರಿಗೆ ಉಡುಪಿ ಮಠದ ಅಖಾಡ ಇದ್ದು ಅಲ್ಲಿ ತಂಗಬಹುದು ಇಲ್ಲವೇ ಇತರೆ ಅಖಾಡದಲ್ಲಿ ಸಹ ತಂಗಬಹುದು. ಈ ಅಖಾಡದಲ್ಲಿ ತಂಗಲು ಮಾತ್ರ ಅವಕಾಶ ಇದ್ದು ಸ್ನಾನ, ಶೌಚಾಲಯಗಳಿಗೆ ಬೇರೆ ವ್ಯವಸ್ಥೆ ನೋಡಿಕೊಳ್ಳಬೇಕು.

ಇನ್ನು ಅಖಾಡ ಹೊರತುಪಡಿಸಿ ಇತರೆ ವಸತಿ ವ್ಯವಸ್ಥೆ ಇದೆ. ಅಲ್ಲಿ ಪ್ರತಿ ರೂಮ್ ಗೆ ಐದು ಸಾವಿರದಿಂದ 25 ಸಾವಿರದ ವರೆಗೂ ದರ ಇದೆ. ಜನ ನೋಡಿ ದರ ವಿಧಿಸುತ್ತಾರೆ.

ಕುಂಭಮೇಳದಲ್ಲಿ ಪವಿತ್ರ ಸ್ನಾನ ಮಾಡಿದ ಸಾಧುಗಳು

ನೌಕಾದಳದಿಂದ ಆಕ್ವಾ ಕುಡಿಯುವ ನೀರಿನ ವ್ಯವಸ್ಥೆ ಇದೆ. ಜೊತೆಗೆ ನದಿ ಭಾಗದಲ್ಲಿ ರಕ್ಷಣೆ ಹೊಣೆಯನ್ನು ನೌಕಾದಳ ವಹಿಸಿಕೊಂಡಿದೆ.

ಇನ್ನು ನದಿ ಸಂಗಮದಲ್ಲಿ ಪವಿತ್ರ ಸ್ನಾನಕ್ಕೆ ತೆರಳಲು ಉತ್ತರ ಪ್ರದೇಶ ಸರ್ಕಾರ 100ರೂ ಶುಲ್ಕ ವಿಧಿಸುತ್ತದೆ.ಆದರೇ ಬೋಟಿನಲ್ಲಿ ಹೋಗುವ ಓರ್ವ ವ್ಯಕ್ತಿಗೆ ಒಂದುಸಾವಿರ ದರ ಬೋಟ್ ಮಾಲೀಕರು ವಿಧಿಸುತ್ತಾರೆ. ನದಿ ತೀರದಿಂದ ಒಂದು ಕಿಲೋಮೀಟರ್ ವ್ಯಾಪ್ತಿಯಲ್ಲಿ ಕರೆದೊಯ್ಯುತ್ತಾರೆ.

ಕುಂಭಮೇಳದಲ್ಲಿ ಸಂಗಮ ಸ್ನಾನಕ್ಕೆ ಬೋಟ್ ವ್ಯವಸ್ಥೆ

ದೂರದಿಂದ ಹೋದವರಿಗೆ ಊಟದ ವ್ಯವಸ್ಥೆಗೆ ಅಲ್ಪ ಸಮಸ್ಯೆ ಆಗುತ್ತದೆ. ಆದರೂ ಅಲ್ಲಲ್ಲಿ ಫುಡ್ ಕೋರ್ಟ್ (food Court) ಇರುವುದರಿಂದ ಹುಡುಕಿಕೊಂಡು ಹೋಗಬೇಕಾಗುತ್ತದೆ.

ದಾಲ್,ಚಾವಲ್,ವಡಾ ಪಾವ್ ಕಮ್ಮಿ ದರದಲ್ಲಿ ಸಿಗುತ್ತದೆ. ಉಳಿದಂತೆ ಇತರೆ ಸಮಸ್ಯೆಗಳಿಲ್ಲ.

ವಿಮಾನ ದರ ಹೆಚ್ಚಳ.

ಕರ್ನಾಟಕದಿಂದ ಹೋಗುವವರಿಗೆ ವಿಮಾನ ಯಾನ ದುಬಾರಿಯಾಗಿದೆ. ಬೆಂಗಳೂರಿನಿಂದ ದೆಹಲಿಗೆ ಈ ಹಿಂದೆ 3 ಸಾವಿರದಿಂದ 5 ಸಾವಿರ ಆಸುಪಾಸಿನಲ್ಲಿ ದರವಿತ್ತು. ಆದರೇ ಇದೀಗ 15 ರಿಂದ 25 ಸಾವುರಕ್ಕೂ ಹೆಚ್ಚು ದರ ಒಂದು ಭಾಗಕ್ಕೆ ಆಗುತ್ತದೆ.

ಇದನ್ನೂ ಓದಿ:-Kumbhamela ಮೇಳದಲ್ಲಿ ಮಿಂಚುತ್ತಿರೋ ಈ ಬ್ಯೂಟಿಫುಲ್‌ ಸಾಧ್ವಿಯಾರು ಗೊತ್ತಾ?

ರೈಲಿನಲ್ಲಿ ತೆರಳುವವರಿಗೆ ನಿಗದಿ ದರ ವಿದೆ. ಜೊತೆಗೆ ಬೆಂಗಳೂರಿನಿಂದ ಪ್ರಯಾಗರಾಜ್ ಗೆ ಹಲವು ಟ್ರಾವೆಲ್ ಕಂಪನಿಗಳು ಬಸ್ ಪ್ರಯಾಣ ಆಯೋಜಿಸಿದ್ದು 25 ಸಾವಿರದಲ್ಲಿ ಊಟ ,ವಸತಿ ಜೊತೆ ಪ್ರಯಾಗಕ್ಕೆ ಒಬ್ಬರು ಹೋಗಿ ಬರಬಹುದು.

ಮತ್ತೇಕೆ ತಡ ಪ್ರಯಾಗರಾಜ್ (prayagaraj ) ನ ಕುಂಭ ಮೇಳಕ್ಕೆ ಹೋಗಬೇಕು ಎನ್ನುವವವರು ಒಮ್ಮೆ ಹೋಗಿಬನ್ನಿ.

Advertisement
Tags :
CrowdManagementIndianFestivalsKumbhMelaMahakumbhMela2025pilgrimagePrayagrajRoadBlockadeSpiritualJourneyTrafficJamTravelAlert
Advertisement
Next Article
Advertisement